ದಾವಣಗೆರೆ ಸಂತೋಷ್ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಚಂದನ್ ಲಾಡ್ಜ್ ಮಾಲೀಕರೂ, ಕುರುಹಿನಶೆಟ್ಟಿ ಸಮಾಜದ ಹಿರಿಯ ಮುಖಂಡರೂ ಆದ ಶ್ರೀ ಆರ್.ಎಲ್. ಸೋಮಪ್ಪ ಅವರು ದಿನಾಂಕ 26-06-2024ರ ಬುಧವಾರ ಸಂಜೆ 7.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಸೋಮಪ್ಪ, ಹಿರಿಯ ಕಾರ್ಮಿಕ ಮುಖಂಡರಾಗಿದ್ದ ದಿ|| ಶ್ರೀ ಆರ್.ಎಲ್. ಹನುಮಂತಪ್ಪ ಅವರ ಸಹೋದರ. ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.ಮೃತರ ಪಾರ್ಥಿವ ಶರೀರವನ್ನು ಡಾಂಗೆ ಪಾರ್ಕ್ ಹತ್ತಿರದ ಭಗತ್ಸಿಂಗ್ ನಗರ 3ನೇ ಮುಖ್ಯರಸ್ತೆಯಲ್ಲಿರುವ ಮೃತರ ಸ್ವಗೃಹದಲ್ಲಿ ದಿನಾಂಕ 27-06-2024ರ ಗುರುವಾರ ಮಧ್ಯಾಹ್ನ 12ರ ವರೆಗೆ ಇರಿಸಲಾಗುವುದು. ನಂತರ ಮಧ್ಯಾಹ್ನ 12.30ಕ್ಕೆ ಲೇಬರ್ ಕಾಲೋನಿಯಲ್ಲಿರುವ ಆರ್.ಹೆಚ್. ಬೃಂದಾವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆರ್.ಎಲ್. ಸೋಮಪ್ಪ
