ಹರಿಹರ ತಾಲ್ಲೂಕಿನ ಗೋವಿನಹಾಳ್ ಗ್ರಾಮದ ವಾಸಿ ಹಾಗೂ ದಾವಣಗೆರೆ ಜಿ.ಪಂ. ಮಾಜಿ ಸದಸ್ಯರೂ, ಗಂಗಾಮತ ಸಮಾಜದ ಮುಖಂಡರೂ ಆದ ಜಿ.ಬಿ. ಬಸವರಾಜಪ್ಪ ಅವರು ದಿನಾಂಕ 23.06.2024ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಐವರು ಸಹೋದರರು, ಓರ್ವ ಸಹೋದರಿ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.06.2024ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಗೋವಿನಹಾಳ್ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಗೋವಿನಹಾಳ್ ಜಿ.ಬಿ ಬಸವರಾಜಪ್ಪ
