ದಾವಣಗೆರೆ, ಕುವೆಂಪು ನಗರ, 17ನೇ ಮೇನ್, 3ನೇ `ಸಿ’ ಕ್ರಾಸ್, `ಶ್ರೀ ಕನಕ ಸಿದ್ದೇಶ್ವರ ನಿಲಯ’ ನಂ. 3803ರ ವಾಸಿ ನಿವೃತ್ತ ಮುಖ್ಯ ಶಿಕ್ಷಕರಾದ ಹಾಲೇಕಲ್ಲು ದಿ. ನಿಂಬಳಗೇರಿ ಕೆ. ನಾಗಪ್ಪನವರ ಧರ್ಮಪತ್ನಿ ಹಾಲೇಕಲ್ಲು ಶ್ರೀಮತಿ ನಿಂಬಳಗೇರಿ ರುದ್ರಮ್ಮಅವರು ದಿನಾಂಕ 23.06.2024ರ ಭಾನುವಾರ ಮಧ್ಯಾಹ್ನ 10.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 80 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.06.2024ರ ಸೋಮವಾರ ಮಧ್ಯಾಹ್ನ 11 ಗಂಟೆಗೆ ಜಗಳೂರು ತಾ. ಹಾಲೇಕಲ್ಲು ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024