ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ ಅವರ ಧರ್ಮಪತ್ನಿ ಶ್ರೀಮತಿ ಎಂ.ಪಿ.ರುದ್ರಾಂಬ ಪ್ರಕಾಶ್ (83) ಅವರು ಇಂದು ಸಂಜೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಮೂವರು ಪುತ್ರಿಯರಾದ ಹರಪನಹಳ್ಳಿ ಶಾಸಕರಾದ ಶ್ರೀಮತಿ ಎಂ.ಪಿ.ಲತಾ, ರಂಗಭಾರತಿ ಅಧ್ಯಕ್ಷರಾದ ಎಂ.ಪಿ.ಸುಮಾ, ಎಂ.ಪಿ.ವೀಣಾ ಅವರುಗಳಲ್ಲದೇ, ಅಪಾರ ಬಂಧು-ಬಳಗವನ್ನು ಅವರು ಅಗಲಿದ್ದಾರೆ. ಪುತ್ರ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ನಿಧನರಾಗಿದ್ದಾರೆ. ನಾಳೆ ದಿನಾಂಕ 30ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಎಂ.ಪಿ.ಪ್ರಕಾಶ್ ಅವರ ಸಮಾಧಿ ಬಳಿಯೇ ರುದ್ರಾಂಬ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
January 27, 2025