ಹರಿಹರ ನಗರದ ಹೊಸಭರಂಪುರ ಬಡಾವಣೆ, 3ನೇ ಮೇನ್, 1ನೇ ಕ್ರಾಸ್ ನಿವಾಸಿಯಾದ ದಿ|| ಕಂಚಿಕೇರಿ ಸಿದ್ದಪ್ಪ ಮತ್ತು ದಿ|| ಕಂಚಿಕೇರಿ ಹಿರಿಯಮ್ಮನವರ ಪುತ್ರರು ಹಾಗೂ ದಿ|| ಕಂಚಿಕೇರಿ ಮರುಳಸಿದ್ದಪ್ಪ ಮತ್ತು ದಿ|| ಕಂಚಿಕೇರಿ ಗಣೇಶಪ್ಪ ಇವರ ಸಹೋದರರಾದ ಕಂಚಿಕೇರಿ ಕೆ.ಎಸ್. ಬಸವರಾಜಪ್ಪ (ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ನಿರ್ದೇಶಕರು) ಇವರು ದಿನಾಂಕ : 26.4.2024 ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಹರಿಹರ ನಗರದ ವೀರಶೈವ ರುದ್ರಭೂಮಿಯಲ್ಲಿ ದಿನಾಂಕ: 27.4.2024ರ ಶನಿವಾರ ಬೆಳಗ್ಗೆ 12.00 ಗಂಟೆಗೆ ನೆರವೇರಿಸಲಾಗುವುದು. ಮೃತರು ಪತ್ನಿ : ಈರಮ್ಮ ಕಂಚಿಕೇರಿ, ಸಹೋದರರಾದ ಕಂಚಿಕೇರಿ ಕೊಟ್ರೇಶಪ್ಪ, ಕಂಚಿಕೇರಿ ಮಹೇಶ್ವರಪ್ಪ, ಸಹೋದರಿಯರಾದ : ಗಂಗಮ್ಮ ಪೂಜಾರ್, ಹಾಲಮ್ಮ ಮಹಾಂತೇಶಪ್ಪ ಆನ್ವೇರಿ, ಪುತ್ರರಾದ : ಕಂಚಿಕೇರಿ ಕೆ.ಬಿ. ಅರುಣ್ ಕುಮಾರ್, ಕಂಚಿಕೇರಿ ಕೆ.ಬಿ ಪ್ರಕಾಶ್, ಪುತ್ರಿಯರಾದ: ಕೆ. ಬಿ. ಶೋಭಾ ಜಗದೀಶ್, ಕೆ.ಬಿ ಲತಾ ರಾಜು , ಕೆ. ಬಿ. ಶಿವಲೀಲಾ ಮೋಹನ್ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹರಿಹರದ ಕಂಚಿಕೇರಿ ಬಸವರಾಜಪ್ಪ
