ಮೂಲತಃ ದಾವಣಗೆರೆ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನ ಹಿಂಭಾಗದ ವಾಸಿಯಾಗಿದ್ದ, ವ್ಯಾಪಾರಸ್ಥರಾದ ಶ್ರೀ ಬ್ಯಾಡಗಿ ಗಣೇಶಪ್ಪ ಅವರು ದಿನಾಂಕ 08-04-2024ರ ಸೋಮವಾರ ಸಂಜೆ 4.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 76 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ – ಲ್ಯಾಂಡ್ ಡೆವಲಪರ್ ಅನೂಪ್ ಬ್ಯಾಡಗಿ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಾವಣಗೆರೆ ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್, 3ನೇ `ಎ’ ಮುಖ್ಯರಸ್ತೆ, 2ನೇ ಕ್ರಾಸ್, ಮನೆ ಸಂಖ್ಯೆ 509ರಲ್ಲಿರುವ ಮೃತರ ನಿವಾಸದಲ್ಲಿ ದಿನಾಂಕ 09-04-2024ರ ಮಂಗಳವಾರ ಬೆಳಿಗ್ಗೆ 11.30 ರವರೆಗೆ ಇರಿಸಲಾಗುವುದು. ನಂತರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
November 25, 2024