ದಾವಣಗೆರೆ ತರಳಬಾಳು ಬಡಾವಣೆ, 7ನೇ ಕ್ರಾಸ್ `ಬಿ’ ತಿರುವಿನಲ್ಲಿರುವ ನಿವಾಸಿ ದಿವಂಗತ ತೆಲಗಿ ಬಸವರಾಜಪ್ಪ ಅವರ ಧರ್ಮಪತ್ನಿ ಶ್ರೀಮತಿ ತೆಲಿಗಿ ಶಾರದಮ್ಮ ಅವರು ದಿನಾಂಕ 25.04.2024ರ ಗುರುವಾರ ಸಂಜೆ 3 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಐದು ಜನ ಪುತ್ರಿಯರು ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26.4.2024ರ ಶುಕ್ರವಾರ ಮಧ್ಯಾಹ್ನ 12.15 ಕ್ಕೆ ಗಾಂಧಿನಗರದ ವೀರಶೈವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025