ದಾವಣಗೆರೆ ಸರಸ್ವತಿ ಬಡಾವಣೆ ವಾಸಿ ಇ. ಹಾಲನಾಯ್ಕ ನಿವೃತ್ತ ಅಧಿಕಾರಿ, ಮೀನುಗಾರಿಕಾ ಇಲಾಖೆ ಇವರು ದಿನಾಂಕ :15.03.2024ರ ಶುಕ್ರವಾರ ಬೆಳಿಗ್ಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಇವರ ಧರ್ಮಪತ್ನಿ, ಜಯಮ್ಮ ಮತ್ತು ಪುತ್ರರಾದ ಡಾ|| ಹರೀಶ್ಕುಮಾರ್, ಡಾ|| ಸಂತೋಷ್, ಪುತ್ರಿಯರಾದ ಹೇಮಾ, ಹರಿಣಿ, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 16.03.2024ರ ಶನಿವಾರ ಬೆಳಿಗ್ಗೆ 10.00 ಗಂಟೆಗೆ ಮೃತರ ಸ್ವಗ್ರಾಮವಾದ ಚಿತ್ರದುರ್ಗ ತಾಲ್ಲೂಕು ದೊಡ್ಡಿಗನಾಳ್, ಹೊಸಹಟ್ಟಿಯ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಇ. ಹಾಲನಾಯ್ಕ
