ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್, 4ನೇ ಮೇನ್, 6ನೇ ಕ್ರಾಸ್ # 3521ರ ವಾಸಿ ನಿವೃತ್ತ ಇಂಜಿನಿಯರ್ ಶ್ರೀ ಜಿ. ಬಸವರಾಜ್ ಅವರು ದಿನಾಂಕ 18.03.2024ರ ಸೋಮವಾರ ರಾತ್ರಿ 11.55ಕ್ಕೆ ನಿಧನರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ದಿನಾಂಕ 19.03.2024ರ ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಮೃತರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ನಂತರ ಮಧ್ಯಾಹ್ನ ಗ್ಲಾಸ್ ಹೌಸ್ ಪಕ್ಕದ ಶಾಮನೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025