ದಾವಣಗೆರೆ ತಾಲ್ಲೂಕು ನಾಗನೂರು ಗ್ರಾಮದ ವಾಸಿ ದಿ|| ಜರೇಕಟ್ಟೆ ಹನುಮಂತಪ್ಪನವರ ಕೊನೆಯ ಪುತ್ರ ಕೆಇಬಿ ಬಸವರಾಜ್ ಅವರು ದಿನಾಂಕ 28.03.2024 ರ ಗುರುವಾರ ರಾತ್ರಿ 10.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 42 ವರ್ಷ ವಯಸ್ಸಾಗಿತ್ತು. ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.03.2024ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ನಾಗನೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆಇಬಿ ಬಸವರಾಜ್
