ದಾವಣಗೆರೆ ಆಂಜನೇಯ ಬಡಾವಣೆ, 4ನೇ ಕ್ರಾಸ್ ವಾಸಿ ನಿವೃತ್ತ ಉಪನ್ಯಾಸಕರಾದ ಶ್ರೀ ಎಸ್. ನಂಜಪ್ಪನವರು ದಿನಾಂಕ 7.3.2024ರ ಗುರುವಾರ ಮಧ್ಯಾಹ್ನ 4.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 101 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 8.3.2024ರ ಶುಕ್ರವಾರ ಬೆಳಿಗ್ಗೆ 11.30ರವರೆಗೆ ನಗರದ ಆಂಜನೇಯ ಬಡಾವಣೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಸುಲ್ತಾನಿಪುರದ ಮೃತರ ಜಮೀನಿನಲ್ಲಿ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಸ್. ನಂಜಪ್ಪ
