ದಾವಣಗೆರೆ ಎನ್ ಆರ್ ರಸ್ತೆ ವಾಸಿ ಡಾ|| ಬಕ್ಕೇಶ್ವರ ಸ್ವಾಮಿ ಇವರ ಧರ್ಮಪತ್ನಿ ಶ್ರೀಮತಿ ಗಂಗಾ ಕೋಗುಂಡಿಮಠ ಇವರು, ದಿನಾಂಕ 05-03-2024 ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ : 06-03-2024ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಎನ್ಆರ್ ರಸ್ತೆಯ ಮೃತರ ಸ್ವಗೃಹದಲ್ಲಿ ಇರಿಸಲಾಗುವುದು. ನಂತರ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಗಂಗಾ ಕೋಗುಂಡಿಮಠ
