ದಿ. ಶ್ರೀಮತಿ ಸುನಂದಮ್ಮ ಮತ್ತು ದಿ. ಜಾಜೂರು ಓಂಕಾರಪ್ಪ ದಂಪತಿ ಪುತ್ರರಾದ ಡಾ. ಮಂಜುನಾಥ ಜಾಜೂರು (ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಅರಿವಳಿಕೆ ವಿಭಾಗ, ಜೆಜೆಎಂ ಮೆಡಿಕಲ್ ಕಾಲೇಜು, ದಾವಣಗೆರೆ.) ಇವರು, ದಿನಾಂಕ : 01.03.2024ನೇ ಶುಕ್ರವಾರ ಬೆಳಿಗ್ಗೆ 10.55ಕ್ಕೆ ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರ ಪಾರ್ಥಿವ ಶರೀರವನ್ನು ದಿನಾಂಕ : 03.03.2024ನೇ ಭಾನುವಾರ ಬೆಳಿಗ್ಗೆ 9 ರಿಂದ 12.00ರವರೆಗೆ ತರಳಬಾಳು ಬಡಾವಣೆಯಲ್ಲಿರುವ ಮೃತರ ಸ್ವಗೃಹದಲ್ಲಿ ಇರಿಸಲಾಗುವುದು. ನಂತರ ಶಾಮನೂರಿನ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024