ಜೋಗಪ್ಪನವರ ಕೊಟ್ರಬಸಪ್ಪ ಅವರು ಅನಾರೋಗ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ. ನಗರದ ಹೊಂಡದ ರಸ್ತೆಯ ಜೋಗಪ್ಪನವರ ದಿ. ಕಾಡಪ್ಪನವರ ದ್ವೀತಿಯ ಸುಪುತ್ರ ಹಾಗೂ ನಗರಸಭೆ ಮಾಜಿ ಸದಸ್ಯರು, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿ ಮತ್ತು ನಗರದ ಶ್ರೀ ಬೀರಲಿಂಗೇಶ್ವರ ಮೈದಾನ ಹೋರಾಟ ಸಮಿತಿ ಕಾರ್ಯದರ್ಶಿಯಾಗಿ ಕೊಟ್ರಬಸಪ್ಪ ಕಾರ್ಯ ನಿರ್ವಹಿಸುತ್ತಿದ್ದರು.ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಬೆಳಿಗ್ಗೆ 12.30ವರೆಗೆ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಇವರ ದೇಹವನ್ನು ಜೆಜೆಎಂ ಮೆಡಿಕಲ್ ಕಾಲೇಜಿಗೆ ದೇಹ ದಾನ ಮಾಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಜೋಗಪ್ಪನವರ ಕೊಟ್ರಬಸಪ್ಪ
