ಹರಿಹರ ತಾ. ಭಾನುವಳ್ಳಿ ಗ್ರಾಮದ ನಿವೃತ್ತ ಶಿಕ್ಷಕರಾದ ಅಲ್ ಹಜ್ ಮಹಮ್ಮದ್ ಹನೀಫ್ ಸಾಬ್ ಹಳ್ಳೂರು ಅವರು ದಿನಾಂಕ 11-04-2024 ರ ಗುರುವಾರ ಸಂಜೆ ನಿಧನರಾದರು. ಶ್ರೀಯತರಿಗೆ 95 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರರಾದ ಶಿಕ್ಷಕ ಮಹಮ್ಮದ್ ಹಾರೂನ್ ಹಳ್ಳೂರು ಹಾಗೂ ಐವರು ಪುತ್ರಿಯರು, ಅಳಿಯಂದಿರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12-04-2024ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಭಾನುವಳ್ಳಿಯ ಖಬರ ಸ್ಥಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಹಮ್ಮದ್ ಹನೀಫ್ ಸಾಬ್
