ದಾವಣಗೆರೆ ನಿವಾಸಿ ಶ್ರೀಮತಿ ಸುಮಂಗಲಮ್ಮ ಬೆಲಗೂರು ಚನ್ನಬಸಪ್ಪ ಇವರ ತೃತೀಯ ಪುತ್ರ ಶ್ರೀ ಬಿ.ಸಿ. ಚಂದ್ರಶೇಖರ್ (ಚಂದ್ರು) ಇವರು, ದಿನಾಂಕ : 08.02.2024ರ ಗುರುವಾರ ಮಧ್ಯಾಹ್ನ 3.30ಕ್ಕೆ ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಶಿರಾದ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರಿ, ತಾಯಿ ಮತ್ತು ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನಕ್ಕಾಗಿ ಅವರ ಹಿರಿಯ ಸಹೋದರ ಬಿ.ಸಿ. ಶಶಿಧರ್ ಇವರ ಆಂಜನೇಯ ಬಡಾವಣೆ ಎರಡನೇ ಕ್ರಾಸ್ನಲ್ಲಿರುವ, #558/43 `ಮಯೂರ’ ನಿವಾಸದಲ್ಲಿ ದಿನಾಂಕ : 09.02.2024ರ ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೆ ದೇಹವನ್ನು ಇರಿಸಲಾಗುವುದು. ನಂತರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024