ದಾವಣಗೆರೆ ಸಿಟಿ ಎಂ.ಸಿ.ಸಿ. `ಬಿ’ ಬ್ಲಾಕ್ ಗುಂಡಿ ಸ್ಕೂಲ್ ಎದುರು ವಾಸಿ ಶ್ರೀಮತಿ ಯಶೋಧಮ್ಮ ಮತ್ತು ದಿ|| ರಾಮಗೊಂಡನಹಳ್ಳಿ ಚಂದ್ರಶೇಖರಪ್ಪ ಇವರ ತೃತೀಯ ಪುತ್ರಿ ಶ್ರೀಮತಿ ಜ್ಯೋತಿ ಹೆಚ್.ಸಿ. ಇವರು ದಿನಾಂಕ : 07.02.2024ರ ಬುಧವಾರ ಬೆಳಿಗ್ಗೆ 11ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಓರ್ವ ಪುತ್ರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 08.02.2024ರ ಗುರುವಾರ ಮಧ್ಯಾಹ್ನ 1 ಗಂಟೆಗೆ ರಾಮಗೊಂಡನಹಳ್ಳಿ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು. ವಿ.ಸೂ – ದಿನಾಂಕ 08.02.2024ರ ಗುರುವಾರ ಬೆಳಿಗ್ಗೆ 11 ಗಂಟೆಯವರೆಗೆ ಎಂ.ಸಿ.ಸಿ. `ಬಿ’ ಬ್ಲಾಕ್ನ ಗುಂಡಿ ಸ್ಕೂಲ್ ಎದುರು ಇರುವ ಮೃತರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಎಂದು ಕುಟುಂಬದವರು ತಿಳಿಸಿದ್ದಾರೆ.
ಜ್ಯೋತಿ ಹೆಚ್.ಸಿ.
