ದಾವಣಗೆರೆ ಶಿವಕುಮಾರಸ್ವಾಮಿ ಬಡಾವಣೆ ವಾಸಿ ಬಹದ್ದೂರು ಗಟ್ಟೆ ದಿ. ಚನ್ನಬಸಪ್ಪನವರ ಪುತ್ರ ಹೊರಟ್ಟಿ ಮಹದೇವಪ್ಪ (ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ನಿವೃತ್ತ ಮ್ಯಾನೇಜರ್) ಇವರು ದಿನಾಂಕ 8.2.2024ರ ಗುರುವಾರ ಬೆಳಿಗ್ಗೆ 12.58ಕ್ಕೆ ನಿಧನರಾದರು. ಮೃತರಿಗೆ 63 ವರ್ಷ ವಯಸ್ಸಾಗಿತ್ತು. ಧರ್ಮಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಾವಣಗೆರೆ ಶಿವಕುಮಾಸ್ವಾಮಿ ಬಡಾವಣೆಯ ಮೃತರ ಸ್ವಗೃಹದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆಯನ್ನು ದಿನಾಂಕ 8.2.2024ರ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಅತ್ತಿಗೆರೆ ಮಹದೇವಪ್ಪ ಹೆಚ್.ಸಿ.
