ದಾವಣಗೆರೆ ಎಂಸಿಸಿ ಎ ಬ್ಲಾಕ್, 2ನೇ ಮೇನ್, 2ನೇ ಕ್ರಾಸ್ ವಾಸಿ ದಿ. ಬಂಡಿ ವಿಜಯಪ್ಪನವರ ಧರ್ಮಪತ್ನಿ ಶ್ರೀಮತಿ ತಂಗೆಮ್ಮ (62) (ಹೆಚ್. ಮಹದೇವಪ್ಪನವರ ಪುತ್ರಿ) ಇವರು ದಿನಾಂಕ 05.02.2024ರ ಸೋಮವಾರ ಸಂಜೆ 5.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಓರ್ವ ಪುತ್ರ, ನಾಲ್ವರು ಪುತ್ರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.02.2024ರ ಮಂಗಳವಾರ ಮಧ್ಯಾಹ್ನ 12ಕ್ಕೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.