ದಾವಣಗೆರೆ ಸಿಟಿ ವಾಸಿ ದಿ|| ಅಂಬರ್ಕರ್ ಪಂಪಂಣ ಅವರ ಜೇಷ್ಠ ಪುತ್ರ ದಾವಣಗೆರೆ ಚೌಕಿಪೇಟೆ – ಕಾಳಿಕಾದೇವಿ ರಸ್ತೆಯ ಹೆಸರಾಂತ ಜವಳಿ ವ್ಯಾಪಾರಿಗಳಾದ ಅಂಬರ್ಕರ್ ಪಂಪಂಣ ಬಟ್ಟೆ ಅಂಗಡಿಯ ಮಾಲೀಕರಾದ ಹ.ಭ.ಪಾ. ವಿರೂಪಣ್ಣ ಪಂಪಂಣ ಅಂಬರ್ಕರ್ಅವರು ದಿನಾಂಕ 17-01-2024ನೇ ಬುಧವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 92 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಅಳಿಯ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶ್ರೀ ವಿರೂಪಣ್ಣ ಪಂಪಂಣ ಅಂಬರ್ಕರ್ ಅವರ ಪಾರ್ಥಿವ ಶರೀರವನ್ನು ದಾವಣಗೆರೆಯ ಎಂ.ಸಿ.ಸಿ. `ಬಿ’ ಬ್ಲಾಕ್, ಕುವೆಂಪು ನಗರ, 21ನೇ ಮುಖ್ಯರಸ್ತೆ, 5ನೇ ತಿರುವಿನಲ್ಲಿರುವ ಮಾವಿನತೋಪ ಆಸ್ಪತ್ರೆ ಹಿಂಭಾಗದಲ್ಲಿರುವ ಮನೆ ಸಂಖ್ಯೆ 1715/1,2,3ರ ಅವರ ಸ್ವಗೃಹದಲ್ಲಿ ಇರಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 18-01-2024ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ವಿರೂಪಣ್ಣ ಪಂಪಂಣ ಅಂಬರ್ಕರ್
