ದಾವಣಗೆರೆ ಇಜಾದಾರಗಲ್ಲಿ ಮಹಾರಾಜಪೇಟೆ ವಾಸಿ ಶ್ರೀ ಬಸಾಪತಿ ತಿಪ್ಪೇಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ಬಸಾಪತಿ ಸೌಭಾಗ್ಯಮ್ಮ ಇವರು ದಿನಾಂಕ 18.1.2024ರಂದು ಗುರುವಾರ ಮಧ್ಯಾಹ್ನ 3.45ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 60 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 19.1.2024ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಬಸಾಪತಿ ಸೌಭಾಗ್ಯಮ್ಮ
