ದಾವಣಗೆರೆ ಆಂಜನೇಯ ಬಡಾವಣೆ, 16ನೇ ಕ್ರಾಸ್ ವಾಸಿ ದಾವಣಗೆರೆ ಮಹಾನಗರ ಪಾಲಿಕೆ ನಿವೃತ್ತ ನೌಕರರಾದ ಶ್ರೀ ಕಮದೋಡು ಷಣ್ಮುಖಪ್ಪ (ಶಾಮನೂರು) ಇವರು, ದಿನಾಂಕ 08.1.2024ನೇ ಸೋಮವಾರ ಸಂಜೆ 6.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ತಾಯಿ, ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಸಹೋದರಿ ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ 10.1.2024ರ ಬುಧವಾರ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ನಗರದ ಆಂಜನೇಯ ಬಡಾವಣೆಯ 16ನೇ ಕ್ರಾಸ್ನ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆಯನ್ನು ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಗ್ಲಾಸ್ ಹೌಸ್ ಹತ್ತಿರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂದವರು ತಿಳಿಸಿದ್ದಾರೆ.
ಷಣ್ಮುಖಪ್ಪ
