ದಾವಣಗೆರೆ ಬಾಡಾ ಕ್ರಾಸ್ ಬಳಿಯ ಪೊಲೀಸ್ ಲೇ ಔಟ್ ನಿವಾಸಿ, ನಿವೃತ್ತ ಎ.ಎಸ್.ಐ. ಶ್ರೀ ಶಾಂತಕುಮಾರ್ ನಾಯ್ಕ ಅವರು ದಿನಾಂಕ 18-12-2023ರ ಸೋಮವಾರ ರಾತ್ರಿ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 62 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು, ಅಳಿಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 19-12-2023ರ ಮಂಗಳವಾರ ಬೆಳಿಗ್ಗೆ 9.30 ರವರೆಗೆ ದಾವಣಗೆರೆ ಬಾಡಾ ಕ್ರಾಸ್ ಪೊಲೀಸ್ ಲೇ ಔಟ್ ಬಳಿಯ ಅವರ ಸ್ವಗೃಹದಲ್ಲಿ ಇರಿಸಲಾಗುವುದು. ನಂತರ ಮಧ್ಯಾಹ್ನ 12.30 ಕ್ಕೆ ದಾವಣಗೆರೆ ತಾಲ್ಲೂಕು ಹುಲಿಕಟ್ಟೆ ಗ್ರಾಮದ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹುಲಿಕಟ್ಟೆ ಶಾಂತಕುಮಾರ್ನಾಯ್ಕ
