ದಾವಣಗೆರೆ ವಾಸಿ ಎಲ್. ಬಸವರಾಜ, ಪ್ರಭುಪ್ರಸಾದ ಕೆ.ಎಲ್. ಮತ್ತು ಬಾನುಮತಿ ಕೆ.ಎಲ್. ಇವರ ತಂದೆಯವರಾದ ಎಂ.ಕೆ. ಲಿಂಗಪ್ಪ ಕಲ್ಯಾಣಿ ಇವರು ದಿನಾಂಕ : 18.12.2023ರಂದು ಬೆಳಿಗ್ಗೆ 10.30ಕ್ಕೆ ದೈವಾಧಿನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು, ಇಬ್ಬರು ಪುತ್ರರು, ಓರ್ವಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕಲ್ಯಾಣಿ ಕುಟುಂಬದವರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸ್ವಗೃಹ ಎಂಸಿಸಿ ಬಿ ಬ್ಲಾಕ್ # 2796, 3ನೇ ಮೇನ್, 3ನೇ ಕ್ರಾಸ್, ದಾವಣಗೆರೆಯಲ್ಲಿ ಇರಿಸಲಾಗಿದೆ. ಅಂತ್ಯಸಂಸ್ಕಾರವನ್ನು ದಿನಾಂಕ : 19.12.2023ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೃತರ ಸ್ವಗ್ರಾಮ ಹರಿಹರ ತಾಲ್ಲೂಕು ಹಿಂಡಸಘಟ್ಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಕೆ. ಲಿಂಗಪ್ಪ ಕಲ್ಯಾಣಿ
