ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದ ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ವಾಸಿ ಎಪಿಎಂಸಿ ವರ್ತಕರಾದ, ಕೆ. ಹನುಮಂತಪ್ಪ ಅಂಡ್ ಕೋ ಸಂಸ್ಥೆಯ ಮಾಲೀಕರೂ ಆದ ಶ್ರೀ ಕೂಲಂಬಿ ಹನುಮಂತಪ್ಪ ಇವರು ದಿನಾಂಕ 13.12.2023ರ ಬುಧವಾರ ಮಧ್ಯಾಹ್ನ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 93 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 14.12.2023ರ ಗುರುವಾರ ಮಧ್ಯಾಹ್ನ 1 ಗಂಟೆಯವರೆಗೆ ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್, (ಮೋದಿ ಆಸ್ಪತ್ರೆ ಕಾಂಪೌಂಡ್ ಹಿಂಭಾಗದ ರಸ್ತೆ) 2ನೇ ಮೇನ್, 2ನೇ ಕ್ರಾಸ್, ಡೋರ್ ನಂ. 2020/2ರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆಯನ್ನು ದಿನಾಂಕ 15.12.2023ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದ ಮೃತರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 27, 2024