ದಾವಣಗೆರೆ ಸರಸ್ವತಿ ಬಡಾವಣೆ, 1ನೇ ಮೇನ್, 4ನೇ ಕ್ರಾಸ್ ವಾಸಿ ಎಲೆಕ್ಟ್ರೀಷಿಯನ್ ಇಂಜಿನಿಯರ್, VLCC ಕಂಪನಿ ಬೆಂಗಳೂರು ಇದರ ಉದ್ಯೋಗಿಯಾಗಿದ್ದ ಹಿರೇಗಂಗೂರು ರುದ್ರೇಶ್ ಹೆಚ್.ಆರ್ (47) ಇವರು ದಿನಾಂಕ 10.12.2023ರ ಭಾನುವಾರ ಸಂಜೆ 4.45ಕ್ಕೆ ನಿಧನರಾದರು. ತಾಯಿ, ಪತ್ನಿ, ಓರ್ವ ಪುತ್ರಿ, ಸಹೋದರರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 11.12.2023ರ ಸೋಮವಾರ ಸಂಜೆ 4ಕ್ಕೆ ನಗರದ ಬೂದಾಳ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಿರೇಗಂಗೂರು ರುದ್ರೇಶ್
