ದಾವಣಗೆರೆ ಸಿಟಿ ಚೌಕಿಪೇಟೆ ಮುಖ್ಯರಸ್ತೆ ವಾಸಿ ಜ್ಯೋತಿ ಗಾರ್ಮೆಂಟ್ಸ್ನ ಸುಭಾಷ್ ಕುಮಾರ್ ಸಂಘವಿ ಇವರ ಪತ್ನಿ ಶ್ರೀಮತಿ ಪುಷ್ಪಾ ಸಂಘವಿ ಇವರು ದಿನಾಂಕ : 05.11.2023ರ ಭಾನುವಾರ ಸಂಜೆ 5 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 6.11.2023ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಬೂದಾಳ್ ರಸ್ತೆಯಲ್ಲಿರುವ ಜೈನ್ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025