ಹರಿಹರ ತಾಲ್ಲೂಕು ಕೊಕ್ಕನೂರು ಗ್ರಾಮದ ಗ್ರಾ. ಪಂ. ಮಾಜಿ ಸದಸ್ಯ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರೂ ಆದ ಹಿಂಡಸಘಟ್ಟೇರ ಅಂಜಿನಪ್ಪ (53 ವರ್ಷ) ಇವರು ದಿನಾಂಕ 30-10-2023 ರ ಸೋಮವಾರ ಸಾಯಂಕಾಲ 4 ಗಂಟೆಗೆ ಅನಾರೋಗ್ಯದಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31-10-2023 ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಕೊಕ್ಕನೂರಿನಲ್ಲಿ ನೆರವೇರಲಿದೆ. ಮೃತರು, ಹರಿಹರ ತಾ. ಪಂ. ಮಾಜಿ ಅಧ್ಯಕ್ಷರಾದ ದಿ. ಹೆಚ್ ರಂಗಪ್ಪನವರ ಸಹೋದರರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಚ್. ಅಂಜಿನಪ್ಪ
![anjinappa ಹೆಚ್. ಅಂಜಿನಪ್ಪ](https://janathavani.com/wp-content/uploads/2023/10/anjinappa-.jpg)