ದಾವಣಗೆರೆ ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ವ್ಯವಸ್ಥಾಪಕರಾದ ಶ್ರೀ ಎಸ್. ರಾಜಣ್ಣ ಅವರ ಧರ್ಮಪತ್ನಿ ಶರಣೆ ಎಂ.ಎನ್. ಜಯಶ್ರೀ ಅವರು ದಿನಾಂಕ : 26.10.2023ರ ಗುರುವಾರ ಬೆಳಿಗ್ಗೆ 8.45ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದಿವಂಗತರ ಪಾರ್ಥಿವ ಶರೀರವನ್ನು ವಿದ್ಯಾನಗರ ಮುಖ್ಯರಸ್ತೆಯ ಶ್ರೀ ಶಿವ-ಪಾರ್ವತಿ ದೇವಸ್ಥಾನದ ಹತ್ತಿರದಲ್ಲಿರುವ F/3-2288, 2ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆಯಲ್ಲಿರುವ ಮೃತರ ಸ್ವಗೃಹದಲ್ಲಿ ಇರಿಸಲಾಗಿದ್ದು, ದಿನಾಂಕ : 27.10.2023ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರಿನ ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಎನ್. ಜಯಶ್ರೀ ರಾಜಣ್ಣ
![jayashree rajanna ಎಂ.ಎನ್. ಜಯಶ್ರೀ ರಾಜಣ್ಣ](https://janathavani.com/wp-content/uploads/2023/10/jayashree-rajanna--860x1025.jpg)