ದಾವಣಗೆರೆ ನಿಟುವಳ್ಳಿ ರಸ್ತೆ ಜಯದೇವ ಸರ್ಕಲ್ ಹತ್ತಿರದ ವಾಸಿ, ವೀರಭದ್ರಪ್ಪ ಮದ್ದನಕುಂಟೆ ಇವರ ಪತ್ನಿ ಮಂಜುಳಾ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಶ್ರೀಮತಿ ಮಂಜುಳಾ ವಿ.ಎಂ. ಅವರು ದಿನಾಂಕ 11-10-2023ರ ಬುಧವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 59 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12-10-2023ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರು ಗ್ಲಾಸ್ಹೌಸ್ ಹತ್ತಿರದಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
February 12, 2025