ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದ ಗ್ರಾಮದ ವಾಸಿ, ಶ್ರೀ ಹೆಚ್. ಕೆ. ಲಿಂಗರಾಜು ಅವರು ದಿನಾಂಕ 24-09-2023ರ ಭಾನುವಾರ ರಾತ್ರಿ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದಿ|| ಲಿಂಗರಾಜು ಅವರ ಪಾರ್ಥಿವ ಶರೀರವನ್ನು ದಾವಣಗೆರೆ ಸಿಟಿ ತರಳಬಾಳು ಬಡಾವಣೆಯಲ್ಲಿರುವ 17ನೇ ಕ್ರಾಸ್, ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್ಸ್ ಹಿಂಭಾಗದಲ್ಲಿರುವ (# 2002/16/19) ಮೃತರ ನಿವಾಸದಲ್ಲಿ ದಿನಾಂಕ 26-09-2023ರ ಮಂಗಳವಾರ ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಹರಿಯಪ್ಳರ ಹೆಚ್.ಕೆ. ಲಿಂಗರಾಜು
![lingaraju ಹರಿಯಪ್ಳರ ಹೆಚ್.ಕೆ. ಲಿಂಗರಾಜು](https://janathavani.com/wp-content/uploads/2023/09/lingaraju--860x1106.jpg)