Category: ದಾವಣಗೆರೆ

Home ದಾವಣಗೆರೆ

ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಕುಂಬಾರ ಸಮಾಜದ ಸ್ವಾಮಿಗಳ ಆಶೀರ್ವಾದ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಚಿತ್ರದುರ್ಗದ ಕುಂಬಾರ ಸಮಾಜದ ಶ್ರೀ ಬಸವಮೂರ್ತಿ ಗುಂಡಯ್ಯ ಸ್ವಾಮಿಗಳವರನ್ನು ನಿನ್ನೆ ಭೇಟಿಯಾಗಿ ಆಶೀರ್ವಾದ ಪಡೆದರು.

ನಿರಂತರ ದಬ್ಬಾಳಿಕೆ ಪರಿಣಾಮವೇ ಭೂಮಿ `ತಾಪ’ ಹೆಚ್ಚಲು ಕಾರಣ

ನಮ್ಮ ಅತಿಯಾದ ಆಸೆಗಳಿಂದ ಭೂಮಿಯ ಮೇಲೆ ನಿರಂತರ ದಬ್ಬಾಳಿಕೆ ಮಾಡಿದ್ದರ ಪರಿಣಾಮವಾಗಿ ಭೂಮಿಯ ತಾಪ ಹೆಚ್ಚಾಗಿ, ಸರಿಯಾದ ಸಮಯಕ್ಕೆ ಮಳೆ ಬೆಳೆಗಳಾಗದೇ, ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆಂದು ಸಾವಯವ ಕೃಷಿಕ ನೇರ್ಲಿಗಿ ಪ್ರಕಾಶ್‌ ತಿಳಿಸಿದರು.   

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಸಂಸತ್‌ಗೆ ಕಳುಹಿಸಲು ಎಸ್ಸೆಸ್ಸೆಂ ಮನವಿ

ದಾವಣಗೆರೆ : ವಿದ್ಯಾವಂತೆ, ಸರಳ ಸಜ್ಜನಿಕೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಅವರನ್ನು ಗೆಲ್ಲಿಸಿ ಲೋಕಸಭೆ ಕಳುಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದರು.

ಅಂಬೇಡ್ಕರ್‌ ಜೀವನ ಸಾಧನೆ ನಮಗೆಲ್ಲಾ ಪ್ರೇರಣೆ

ಸಾಮಾಜಿಕ ಸಮಾನತೆಗಾಗಿ ಜೀವನವನ್ನೇ ಮುಡಿಪಿಟ್ಟು, ನಮಗೆಲ್ಲಾ ವಾಕ್ ಸ್ವಾತಂತ್ರ್ಯ, ಸಮಾನವಾಗಿ ಬದುಕುವ ಸ್ವಾತಂತ್ರ್ಯ ನೀಡಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ-ಸಾಧನೆ ನಮಗೆಲ್ಲಾ ಪ್ರೇರಣೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

ನಗರದಲ್ಲಿ ರಂಗೋಲಿ ಚಿತ್ತಾರ, ಮತದಾರರ ಜಾಗೃತಿಗೆ ಘೋಷವಾಕ್ಯಗಳ ಅನಾವರಣ

ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಇವರುಗಳ ಸಹಾ ಯದೊಂದಿಗೆ ಸೋಮವಾರ ನಗರದ ಗುರುಭ ವನದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಅಭಿವೃದ್ಧಿ ಬದ್ಧತೆ ನಮಗೆ ಇದೆ : ಶಾಸಕ ಎಸ್ಸೆಸ್

ಅಭಿವೃದ್ಧಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಯಾವುದೇ ಸರ್ಕಾರ ಇದ್ದರೂ ಸಹ ದಾವಣಗೆರೆ ಅಭಿವೃದ್ಧಿಗೆ ಬದ್ದರಿದ್ದೇವೆ. ನೀವೂ ಸಹ ನಮ್ಮನ್ನು ಬೆಂಬಲಿಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

ಕ್ಷೇತ್ರದಲ್ಲಿ 17,09,244 ಮತದಾರರು

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 17,09,244 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,51,990, ಮಹಿಳೆಯರು 8,57,117 ಹಾಗೂ ತೃತೀಯ ಲಿಂಗ 137 ಮತದಾರರಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ 5127 ಮಹಿಳಾ ಮತದಾರಿದ್ದಾರೆ.

ಕೆರೆ ತುಂಬಿಸುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್

ಹರಪನಹಳ್ಳಿ : ಹರಪನಹಳ್ಳಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಗಳು, ಈ ಭಾಗದ 57 ಹಾಗೂ 22 ಕೆರೆಗಳಿಗೆ ನೀರು ತುಂಬಿರುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರು ತಿಳಿಸಿದರು. 

ಹೆಬ್ಬಾಳು ಶ್ರೀಗಳ ಆಶೀರ್ವಾದ ಪಡೆದ ಎಸ್ಸೆಸ್ಸೆಂ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಹೆಬ್ಬಾಳಿನ ಶ್ರೀ ರುದ್ರೇಶ್ವರ ವಿರಕ್ತಮಠಕ್ಕೆ ಭೇಟಿ ನೀಡಿ, ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಎಐಡಿಎಸ್‌ಓ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ

ಲೋಕಸಭಾ ಚುನಾವಣೆ ಹಿನ್ನೆಲೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ವಿದ್ಯಾ ರ್ಥಿಗಳ ಸಮಸ್ಯೆಗಳನ್ನು ಚರ್ಚಿಸಲು ಎಸ್‌ಯುಸಿಐ ಕಮ್ಯೂನಿಷ್ಟ್‌ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಶ್‌ ಅವರಿಗೆ ವಿದ್ಯಾರ್ಥಿ ಪ್ರಣಾಳಿಕೆ ನೀಡಿತು.

ಆಲೋಚನೆ ಬದಲಾದಾಗ ಸಮಾಜ ಬದಲಾವಣೆ

ನಮ್ಮ ಆಲೋಚನಾ ಶಕ್ತಿ ಬದಲಾಯಿಸಿಕೊಂಡಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ ಹೇಳಿದರು.

ನೇಹಾ ಹತ್ಯೆ ಖಂಡಿಸಿ ಜಂಗಮ ಸಮಾಜದ ಪ್ರತಿಭಟನೆ

ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಖಂಡಿಸಿ ಜಿಲ್ಲಾ ಜಂಗಮ ಸಮಾಜದಿಂದ  ನಗರದ ಜಯದೇವ ಸರ್ಕಲ್‌ನಲ್ಲಿ ಮೊನ್ನೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಲಾಯಿತು.

error: Content is protected !!