Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರು : ಭಾರತ್ ಅಕ್ಕಿ ವಿತರಣೆ

ರಾಣೇಬೆನ್ನೂರು : ಇಲ್ಲಿನ ಅಂಚೆ ವೃತ್ತದಲ್ಲಿ ಕೇಂದ್ರ ಸರ್ಕಾರದ ಭಾರತ ಅಕ್ಕಿ ವಿತರಣೆ   ಕಾರ್ಯಕ್ರಮಕ್ಕೆ ಮಾಜಿ ಶಾಸಕ ಅರುಣಕುಮಾರ ಪೂಜಾರ್ ಚಾಲನೆ ನೀಡಿದರು.

ಸಾವಿತ್ರಿಬಾಯಿ ಪುಲೆ ಸ್ಮರಣೆ, ಮಹಿಳೆಯರಲ್ಲಿ ನಿರಂತರವಾಗಿರಬೇಕು : ರೂಪಾ ಕಾಕಿ

ರಾಣೇಬೆನ್ನೂರು : ಪುರುಷ ಪ್ರದಾನ ಸಮಾಜದಲ್ಲಿ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಗೆ ಶಿಕ್ಷಣ ಕೊಡಿಸಿ ಅವಳನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿ ಕಾರ್ಯ ಮಾಡಿದ ಸಾವಿತ್ರಿಬಾಯಿ ಪುಲೆ ಅವರ ಸ್ಮರಣೆ ಪ್ರತಿಯೊಬ್ಬ ಮಹಿಳೆಯಿಂದ ಆಗಬೇಕು

ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಿದ್ದಾರೂಢರ ಪಾತ್ರ

ರಾಣೇಬೆನ್ನೂರು : ಮಹಾತ್ಮ ಗಾಂಧೀಜಿ,  ನೆಹರೂ ಮತ್ತು  ಮೈಲಾರ ಮಹಾದೇವಪ್ಪನಂತಹ ಹೋರಾಟಗಾರರು  ಸಹ  ಸದ್ಗುರು ಸಿದ್ದಾರೂಢರ ಜೊತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಮುಖ ವಿಚಾರವಾಗಿ ಚರ್ಚಿಸುತ್ತಿದ್ದರು. 

ತರಳಬಾಳು ಜಗದ್ಗುರು ತಾಂತ್ರಿಕ ವಿದ್ಯಾಲಯದಿಂದ 13 ವಿದ್ಯಾರ್ಥಿಗಳು ಕ್ಯಾಂಪಸ್‌ ಆಯ್ಕೆ

ರಾಣೇಬೆನ್ನೂರು : ಶ್ರೀ ತರಳ ಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕ್ಯಾಂಪಸ್ ಸಂದರ್ಶ ನದಲ್ಲಿ ಬೆಂಗಳೂರಿನ ಕ್ಯೂ ಸ್ಪೈಡರ್ಸ್  ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಅಂತಿಮ ಸುತ್ತಿನಲ್ಲಿ 13 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಲೋಕಸಭೆ ಗೆಲುವಿಗೆ ಕಾರ್ಯಕರ್ತರು ಸಂಘಟಿತರಾಗಬೇಕು

ರಾಣೇಬೆನ್ನೂರು : ಕಾರ್ಯ ಕರ್ತರು ಸಂಘಟಿತರಾಗಿ ಲೋಕಸಭೆ ಚುನಾವಣೆ ಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಭಾರೀ ಅಂತರದ ಗೆಲುವು ಸಾಧಿಸುವುದರೊಂದಿಗೆ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಪೂಜಾರ್ ಮನವಿ ಮಾಡಿದರು. 

ರಾಣೇಬೆನ್ನೂರಿನಲ್ಲಿ ಇಂದು ಟೋಲ್ ಮುತ್ತಿಗೆಗೆ ನಿರ್ಧಾರ

ರಾಣೇಬೆನ್ನೂರು : ಚಳಗೇರಿ ಟೋಲ್ ಪ್ಲಾಜಾ ಪ್ರಾರಂಭವಾಗಿ ಇಲ್ಲಿಗೆ 12-13 ವರ್ಷ ಗತಿಸಿದರೂ ಕೂಡ ರೈತರಿಗೆ  ಹಾಗೂ ಇಲ್ಲಿಯ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡದೇ ಇರುವುದನ್ನು ಖಂಡಿಸಿ, ನಾಳೆ ದಿನಾಂಕ   11ರ ಬೆಳಗ್ಗೆ 10 ಘಂಟೆಗೆ ಟೋಲ್ ಸ್ಥಗಿತಗೊಳಿಸಿ ಮುತ್ತಿಗೆ ಹಾಕಲಾಗುವುದೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ತಿಳಿಸಿದರು

ರಾಣೇಬೆನ್ನೂರು : ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಸಲ್ಲಿಕೆ

ರಾಣೇಬೆನ್ನೂರು : ಫೆ. 11 ಮತ್ತು 12 ರಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಸಲ್ಲಿಸಲಾಗಿದೆ. ಸಮ್ಮೇಳನಕ್ಕಾಗಿ 23.89 ಲಕ್ಷ ಹಣ ಸಂಗ್ರಹಿಸಲಾಗಿದ್ದು, ಎಲ್ಲ ಖರ್ಚು ತೆಗೆದು ಅಂತಿಮವಾಗಿ 2.99 ಲಕ್ಷ ಹಣ ಉಳಿದಿದೆ

ರಾಣೇಬೆನ್ನೂರು : ಈಶ್ವರಾನಂದ ಶ್ರೀಗಳ ಶಾಶ್ವತ ಮೌನಕ್ಕೆ ಭಕ್ತರಲ್ಲಿ ಶೋಕ

ರಾಣೇಬೆನ್ನೂರು : ತಾಲ್ಲೂಕಿನ ಅಂಕಸಾಪುರ ಗ್ರಾಮದ ಶಿವಾನಂದ ಮಠದ ಈಶ್ವರಾನಂದ ಶ್ರೀಗಳು ಶಾಶ್ವತವಾಗಿ ಮೌನಕ್ಕೆ ಶರಣಾಗಿರುವುದು ಸಾವಿರಾರು ಭಕ್ತರಿಗೆ ದುಃಖವುಂಟು ಮಾಡಿದೆ ಎಂದು ರೈತ ಮುಖಂಡ ಎಫ್. ರವೀಂದ್ರಗೌಡ ಪಾಟೀಲ ಹೇಳಿದರು.

ಛತ್ರಪತಿ ಶಿವಾಜಿ ಜಯಂತಿ ರಾಣೇಬೆನ್ನೂರಿನಲ್ಲಿ ಭವ್ಯ ಮೆರವಣಿಗೆ

ದೇವರಾಜ ಅರಸು ಲೇಔಟ್‌ನ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಬಂದಿರುವ ನ್ಯಾಯಾಧೀಶರಾದ ಶ್ರೀಮತಿ  ಗಾಯತ್ರಿ ಹೆಚ್‌.ಡಿ. ಅವರಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ.

ಶ್ರೀ ಈಶ್ವರಾನಂದ ಸ್ವಾಮೀಜಿ ಲಿಂಗೈಕ್ಯ

ರಾಣೇಬೆನ್ನೂರು : ತಾಲ್ಲೂಕಿನ ಅಂಕಸಾಪೂರ ಗ್ರಾಮದ ಶಿವಾನಂದ ಮಠದ 52 ವಯಸ್ಸಿನ ಶ್ರೀ ಈಶ್ವರಾನಂದ ಸ್ವಾಮೀಜಿ ಹುಬ್ಬಳ್ಳಿಯ ಸಾಯಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದು, ಸಂಜೆ ಮಠದ ಆವರಣದಲ್ಲಿ  ತೇರದಾಳ ದಯಾನಂದಶ್ರೀ ಹಾಗೂ ಐರಣಿ ಮನಿ ಮಠದ ಚರಮೂರ್ತಿಗಳ  ಸಮ್ಮುಖದಲ್ಲಿ ಅಂತಿಮ  ವಿಧಿ ವಿಧಾನಗಳನ್ನು ನಡೆಸಲಾಯಿತು.

ಪಲ್ಸ್ ಪೊಲಿಯೋ ಕಾರ್ಯಕ್ರಮ ನಿಲ್ಲಿಸಿ, ‘ಕ್ಷಯ’ದತ್ತ ಲಕ್ಷ್ಯ ಕೊಡಿ

ರಾಣೇಬೆನ್ನೂರು : ದಶಕಗಳಿಂದ ಕೇಂದ್ರದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಮುನ್ನಡೆ ಯುತ್ತಲೇ ಇರುವ ಓಬಿರಾಯನ ಕಾಲದ,   ಕಾರ್ಯಕ್ರಮ ವಾಗಿದೆ. ಪೋಲಿಯೋ ಸಂಪೂರ್ಣ ನಿರ್ಮೂಲನೆ ಆಗಿ ದಶಕಗಳೇ ಉರುಳಿವೆ.

ರಾಣೇಬೆನ್ನೂರು: ಅಗಲಿದ ನಾಯಕ ಶಿವರಾಂಗೆ ಸಭಾದಿಂದ ದೀಪ ನಮನ

ರಾಣೇಬೆನ್ನೂರು, ಮಾ.3-  ನಗರದ ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ  ಹಾಗೂ ಛಲವಾದಿ ಮಹಾಸಭಾ ವತಿಯಿಂದ ಮಾಜಿ ಅಧಿಕಾರಿ,  ಚಲನಚಿತ್ರ ನಟ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕರು ಮತ್ತು ಅಧ್ಯಕ್ಷರೂ  ಆದ ಕೆ.ಶಿವರಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ದೀಪ ಬೆಳಗಿಸಿ ಅಗಲಿದ ನಾಯಕನಿಗೆ ಗೌರವ ಸಮರ್ಪಣೆ ಮಾಡಲಾಯಿತು.

error: Content is protected !!