ಹೊನ್ನಾಳಿ ತಾ.ನಲ್ಲಿ ದಾಖಲೆಗಳಿಲ್ಲದ 17 ಮೊಬೈಲ್‍ಗಳು, 4 ಲಕ್ಷ ರೂ. ವಶ
ಹೊನ್ನಾಳಿ : ತಾಲ್ಲೂಕಿನ ಹೊಳೆಹರಳಹಳ್ಳಿ ಕ್ರಾಸ್‍ನ ಚೆಕ್ ಪೋಸ್ಟ್ ಬಳಿ ಮಧ್ಯಾಹ್ನ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಅಬ್ದುಲ್ ಖಲೀಲ್ ಎಂಬಾತನ ಬ್ಯಾಗಿನಲ್ಲಿ ಯಾವುದೇ ದಾಖಲೆಗಳಿಲ್ಲದ 3,98,000 ರೂ. ಹಣವನ್ನು ವಶಕ್ಕೆ ಪಡೆದು ಖಜಾನಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.