ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್ ಬಂದ ವರ ಗೋಳಂತೂ ಹೇಳತೀರದು. ಏಕೆಂದರೆ ಈಗ ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.
ನನಗೆ ಯಾವಾಗಲು ದೂರವಾಣಿಗಳ ಮೂಲಕ ಸರ್, ಒಂದು ವೆಂಟಿಲೇಟರ್ ಬೇಕು. ಫ್ರೀ ಇದೆಯಾ, ಮತ್ತೊಬ್ಬ ಮಹಾಶಯ ಒಂದು ವೆಂಟಿಲೇಟರ್ ಬೇಕು. ಅದರ ಬೆಲೆ ಎಷ್ಟಾ ಗುತ್ತದೆ. ಅದನ್ನು ನಾವು ಮನೆಯಲ್ಲಿ ಇಟ್ಟುಕೊ ಳ್ಳಬಹುದಾ? ಇಂದು ಇದು ಕೋವಿಡ್‌ನಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಎಲ್ಲಾ ಕಡೆ ವೆಂಟಿಲೇಟರ್ ಬೇಡಿಕೆ. ಪತ್ರಿಕೆ, ಮಾಧ್ಯಮ ಗಳಲ್ಲಿ ವೆಂಟಿಲೇಟರ್‌ದೇ ಚರ್ಚೆ ಮತ್ತು ಎಲ್ಲಾ ಕಡೆ ಇವುಗಳು ಖಾಲಿ ಇಲ್ಲ ಎಂಬುದೇ ಉತ್ತರ.
ಕಷ್ಟಪಟ್ಟು ಆಂಬುಲೆನ್ಸ್ ದೊರಕಿಸಿ ಕೊಂಡು, ಯಾವುದೇ ಆಸ್ಪತ್ರೆಯಲ್ಲಿ ಪ್ರವೇಶ ದೊರಕಿಸಿಕೊಂಡವನು ಅದೃಷ್ಟವಂತ, ಆಸ್ಪತ್ರೆ ಯಲ್ಲಿ ಬೆಡ್ ಸಿಕ್ಕವನಂತೂ ದೈವಯೋಗ ಪಡೆದ ಭಾಗ್ಯಶಾಲಿ. ಇನ್ನು ವೆಂಟಿಲೇಟರ್ ಸಿಕ್ಕ ವನಂತೂ ಇನ್ನು ಭಯವಿಲ್ಲ ಕಂಟಕ ಕಳೆ ಯಿತು, ಬದುಕುಳಿದೇ ಬಿಟ್ಟೆ ಎಂದುಕೊಳ್ಳು ತ್ತಾರೆ. ವೆಂಟಿಲೇಟರ್ ಸಿಗದವರಂತೂ ಹ್ಯಾಪ್ ಮೊರೆ ಹಾಕಿಕೊಂಡು ಸತ್ತೇ ಹೋಗುತ್ತೇವೆ ಎಂದು ರೋದಿಸುತ್ತಾರೆ. ಹಾಗಾದರೆ ಸಾಯುತ್ತಿರುವವರನ್ನು ಬದುಕಿಸುವ ಉಪಕರಣವೇನಿದು ಎಂದು ತಿಳಿಯೋಣ.
ಉಸಿರಾಟದ ಕಷ್ಟ ಸಮಯದಲ್ಲಿ ದೇವರಂತೆ ಬಂದು ನಮಗೆ ಕೃತಕ ಉಸಿರಾಟ ನಡೆಸಲು ಸಹಾಯ ಮಾಡುವ ಯಂತ್ರವನ್ನು ವೆಂಟಿಲೇಟರ್ ಎನ್ನುತ್ತೇವೆ.
ಕೊರೊನಾ ರೋಗಿಗಳಿಗಂತೂ ವೆಂಟಿಲೇಟರ್ ಜೀವದಾನಿ ಎನ್ನಬಹುದು. ಈ ಯಂತ್ರ ಉಸಿರಾಟ ಕಡಿಮೆಯಾದಾಗಲೂ, ಉಸಿರಾಟ ಅತಿ ಹೆಚ್ಚಾದಾಗಲು, ದೇಹದ ಇತರೆ ಮುಖ್ಯ ಅಂಗಗಳು ಕ್ರಿಯಾಹೀನ ವಾದಾಗಲೂ ಉಪಯೋಗವಾಗುತ್ತದೆ.
ರೋಗಿಗೆ ಎಷ್ಟು ಪ್ರಮಾಣದ ಆಮ್ಲಜನಕ ಬೇಕು, ಯಾವ ರೀತಿಯಲ್ಲಿ ಇದು ಹರಿಯಬೇಕು, ಆಮ್ಲಜನಕದ ತಾಪ, ತೇವಾಂಶ ಎಷ್ಟಿರಬೇಕು ಎಂಬುದನ್ನು ನಿಖರವಾಗಿ ತಿಳಿಸುವ, ಸರಿದೂಗಿಸುವ ವ್ಯವಸ್ಥೆ ಈ ಉಪಕರಣದಲ್ಲಿದೆ.
ಕೆಲವರು (ಉಳ್ಳವರು) ಒಂದು ವೆಂಟಿಲೇ ಟರನ್ನೇ ಮನೆಯಲ್ಲಿ ಇಟ್ಟುಕೊಳ್ಳುವ ಆಲೋ ಚನೆ ಮಾಡಬಹುದು. ಆದರೆ ಕೇವಲ ವೆಂಟಿ ಲೇಟರ್ ಇದ್ದರೆ ಏನೇನೂ ಪ್ರಯೋಜನವಿಲ್ಲ. ಉಪಕರಣವನ್ನು ವ್ಯವಸ್ಥಿತವಾಗಿ ನಿರ್ವಹಿಸಲು, ಅರಿವಳಿಕೆ ತಜ್ಞ ವೈದ್ಯ, ನರ್ಸ್, ಆಯಾ ಎಲ್ಲರೂ ಬೇಕಾಗುತ್ತಾರೆ.
ವೈದ್ಯರು ರೋಗಿಯ ಸ್ಥಿತಿಯನ್ನು ಗಂಭೀರ ವಾಗಿ ಅವಲೋಕಿಸಿ, ಆತನ ರಕ್ತದಲ್ಲಿರುವ ಆಮ್ಲಜನಕ, ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಪರೀಕ್ಷಿಸಿ ತಿಳಿದು, ರೋಗಿಗೆ ಬಳಸಬೇಕಾದ ಆಮ್ಲಜನಕ ಪ್ರಮಾಣ, ವೇಗ ಇತ್ಯಾದಿಗಳನ್ನು ತಮ್ಮ ವಿವೇಚನೆಯಿಂದ ನಿರ್ಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ರೋ ಗಿಯ ಸ್ಥಿತಿಯಲ್ಲಿ ಏರಿಳಿವುಗಳು ಕಾಣುವುದು ಸಹಜ. ಇವೆಲ್ಲವನ್ನೂ ನೋಡಿಕೊಳ್ಳುತ್ತಾ ರೋಗಿಯ ಸ್ಥಿತಿಗೆ ಅನುಗುಣವಾಗಿ ಕಾಲಕಾಲಕ್ಕೆ ಆಮ್ಲಜನಕದ ಪ್ರಮಾಣ, ಹರಿವಿನಲ್ಲಿ ಏರಿಳಿತವನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿರಬೇಕಾಗುತ್ತದೆ. ಕಣ್ಣಲ್ಲಿ ಕಣ್ಣಿಟ್ಟು ನರ್ಸ್ ಮತ್ತು ಅಟೆಂಡರ್‌ಗಳಿಗೆ ಆದೇಶ ಮಾಡುತ್ತಾ ಬಲು ಜವಾಬ್ದಾರಿಯಿಂದ ಮೇಲ್ವಿಚಾರಣೆ ಮಾಡುತ್ತಿರಬೇಕಾಗುತ್ತದೆ.
ಕಣ್ಣಲ್ಲಿ ಕಣ್ಣಿಟ್ಟು ಬಹಳ ಏಕಾಗ್ರತೆಯಿಂದ, ಜಾಣ್ಮೆಯಿಂದ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿರುತ್ತದೆ. ವೆಂಟಿಲೇಟರ್ ಅಳವಡಿಸುವುದಕ್ಕೋಸ್ಕರ ಉಸಿರು ನಾಳದಲ್ಲಿ ಉಸಿರಾಟ ಸರಾಗವಾಗಿಸಲು ಕೊಳವೆಯನ್ನು ತೂರಿಸಬೇಕಾಗುತ್ತದೆ. ಕೊಳವೆಯ ಮೂಲಕವೇ ಉಸಿರಾಟ ಸಮರ್ಪಕವಾಗಿ ನಡೆಯುತ್ತದೆ. ಕೆಲವೊಮ್ಮೆ ವೈದ್ಯರು ಸೂಕ್ಷ್ಮತೆಯಿಂದ ರೋಗಿಯ ಉಸಿರಾಟವನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿಲ್ಲಿಸುವ ಮತ್ತು ಪುನಃ ಪ್ರಾರಂಭಿ ಸುವ ಪ್ರಮೇಯಗಳು ಬರುತ್ತಿರುತ್ತವೆ. ಕೆಲ ವೊಮ್ಮೆ ಕ್ರಿಟಿಕಲ್ ಕೇರ್ (ಆಪತ್ತಿನ ಚಿಕಿತ್ಸೆ) ತಜ್ಞರೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ಐ.ಸಿ.ಯುನಲ್ಲಿ ಕಾರ್ಯ ಭಾರದ ಹೊರೆ ಹೆಚ್ಚು. ಒಬ್ಬ ವೈದ್ಯರು 6 ಗಂಟೆಯ ಪಾಳೆಯಂತೆ ಕಾರ್ಯ ನಿರ್ವಹಿಸಬೇ ಕಾಗುತ್ತದೆ. ಅಂದರೆ ಒಂದು ವೆಂಟಿಲೇಟರ್ ನಿರ್ವಹಿಸಲು 24 ಗಂಟೆಗಳಿಗೆ (ಒಂದು ದಿನ) 4 ಜನ ತಜ್ಞ ವೈದ್ಯರು, ಇಷ್ಟೇ ಸಂಖ್ಯೆಯ ಅಥವಾ ಇದಕ್ಕಿಂತಾ ಹೆಚ್ಚಿನ ಸಂಖ್ಯೆಯ ನರ್ಸ್‌ಗಳು, ಅಟೆಂಡರ್‌ಗಳು ಬೇಕಾಗುತ್ತಾರೆ.
ಕೊರೊನಾ ರೋಗಿಗಳಿಗೆ ಜೀವ ತುಂಬಲು ಹೆಣಗಾಡುತ್ತಾ ಹರಸಾಹಸ ಪಡುತ್ತಿರುವ ವೆಂಟಿಲೇಟರ್ ನಿರ್ವಹಿಸುವ ವೈದ್ಯರಿಗೂ ಕೊರೊನಾ ಸೋಂಕು ಉಂಟಾಗುವ ಅಪಾಯವೂ ಇದ್ದೇ ಇರುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೆ ವೆಂಟಿಲೇಟರ್ ಬೆಲೆ ಎಷ್ಟಿರಬಹುದೋ ಎಂಬ ಕುತೂಹಲ ನಿಮಗಿದೆಯಲ್ಲವೆ? ವೆಂಟಿಲೇಟರ್‌ಗಳ ಬೆಲೆ ಅವುಗಳ ನಮೂನೆ, ವಿಶಿಷ್ಟತೆಗೆ ತಕ್ಕಂತೆ 3 ರಿಂದ 30 ಲಕ್ಷವಾಗುತ್ತದೆ. ವೆಂಟಿಲೇಟರ್ ಕೊಂಡರೆ ಸಾಲದು. ಅದನ್ನು ನಿರ್ವಹಿಸುವ ವೈದ್ಯರೂ ಬೇಕು. ವೈದ್ಯರಿಂದಲೇ ವೆಂಟಿಲೇಟ ರ್‌ಗೆ ಜೀವ ಬರುತ್ತದೆ. ವೆಂಟಿಲೇಟರ್ ಅಳವಡಿಸಿದ ಮೇಲೆ ಎಲ್ಲಾ ನಿಯಂತ್ರಣವನ್ನು ವೈದ್ಯ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಬಹಳ ಸಮಯದಲ್ಲಿ ರೋಗಿ ಉಸಿರಾಟ ಇರುವುದಿಲ್ಲ. ಇದ್ದರೂ ಅದು ದೇಹಕ್ಕೆ ಬೇಕಾದ ಪ್ರಮಾಣದಲ್ಲಿ ಇರುವುದಿಲ್ಲ.
ಇದನ್ನು ನೋಡಬೇಕಾದರೆ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ನೋಡಬೇಕಾಗುತ್ತದೆ. ಅದನ್ನು ಬ್ಲೆಡ್ ಗ್ಯಾಸ್ (Blood Gas) ಎನ್ನುತ್ತೇವೆ. ಸಾಮಾನ್ಯವಾಗಿ ಬ್ಲಡ್ ಗ್ಯಾಸ್ ಇಲ್ಲದೆ ವೆಂಟಿಲೇಟರ್ ಹೇಗೆ ನಿರ್ವಹಿಸಿರುತ್ತದೆ ಎಂದು ಹೇಳುವುದು ಕಷ್ಟ.
ಯಾವುದೇ ವೆಂಟಿಲೇಟರ್ ಕಾರ್ಯ ನಿರ್ವಹಿಸಲು ಅದಕ್ಕೆ ಆಮ್ಲಜನಕ ಬೇಕಾಗಿರುತ್ತದೆ. ಅದನ್ನು ಸಿಲಿಂಡರ್ ಮೂಲಕ ಅಥವಾ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ (Liquid Oxygen) ಮೂಲಕ ಕೊಡಲಾಗುತ್ತದೆ. ಇದು ಈ ಕೋವಿಡ್ ದಿವಸಗಳಲ್ಲಿ ಹೆಚ್ಚಾಗಿ ಬೇಕಾಗುತ್ತದೆ.
ಇನ್ನು ಮುಂದಿನ ದಿನಗಳಲ್ಲಿ ಕೊರೊನಾ ರೋಗಿಗಳು ಹೆಚ್ಚಾದಲ್ಲಿ ವೆಂಟಿಲೇಟರ್ ಮತ್ತಷ್ಟು ಬೇಕಾಗುವ ಸ್ಥಿತಿ ಬರಬಹುದು.
– ಡಾ|| ರವಿ ಆರ್.
ಮುಖ್ಯಸ್ಥರು, ಅನಸ್ತೇಸಿಯಾ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್,
ಜೆ.ಜೆ.ಎಂ. ಮೆಡಿಕಲ್ ಕಾಲೇಜ್, ದಾವಣಗೆರೆ.