ಇಂದು ಇಡೀ ವಿಶ್ವವೇ ಯೋಗವನ್ನು ಆಚರಿಸುತ್ತಿದೆ. ಯೋಗದ ಮಹತ್ವ ತಿಳಿದ ವಿಶ್ವವೇ ಯೋಗಕ್ಕೆ ಶರಣಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುತ್ತಿರುವ ಅಸಂಖ್ಯಾ ದಿನಾಚರಣೆಗಳು ಕೇವಲ `ನಾಮ್ ಕಾವಸ್ತೆ’ ಆದ ಈ ಕಾಲದಲ್ಲಿ `ಯೋಗ’ದ ಮಹತ್ವ ಅಂತ ವಿದೇಶಿಗರೂ ಸಹ ಉತ್ಸಾಹದಿಂದ ಗುರುಗಳನ್ನು ಹುಡುಕಿಕೊಂಡು ಭಾರತಕ್ಕೆ ಬರುತ್ತಿದ್ದಾರೆ.
ಯೋಗ ನಗರಿ ಮೈಸೂರಿನಲ್ಲಿ ವಿದೇಶಿ ಯೋಗಾಭ್ಯಾಸಿಗಳ ಸಂಖ್ಯೆ ದಿಢೀರನೇ ಹೆಚ್ಚಾಗಿದೆ. ವಿಶ್ವದಲ್ಲೇ ಖ್ಯಾತ ಹಾಡುಗಾರ್ತಿ, ನೃತ್ಯಗಾರ್ತಿ, ಆಧುನಿಕ ಮಡೋನಾ ಸದ್ದಿಲ್ಲದೇ ಕಾಶಿಗೆ ಮೇಲಿಂದ ಮೇಲೆ ಬಂದು, ಯೋಗ, ಧ್ಯಾನ, ಕಲಿತು `ಯೋಗಕ್ಕೆ ನಮೋ’ ಎಂದದ್ದು ಈಗ ಹಳೆಯ ಸುದ್ದಿ.
ಕೇವಲ ಅಕ್ಷರಸ್ಥರು, ಶ್ರೀಮಂತರು ಮಾತ್ರ ಯೋಗದ ಲಾಭ ಪಡೆಯಬಾರದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಯೋಗದ ಲಾಭ ದೊರೆಯಬೇಕೆಂಬ ಹಿರಿದಾಸೆಯಿಂದ
`ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ’ `ಆನ್‌ಲೈನ್ ಅವತಾರ’ ಪಡೆದಿದೆ. ಅದರ ಲಾಭ ಎಲ್ಲರಿಗೂ ಸಿಗಬೇಕು.
ಏಕೆಂದರೆ ಯೋಗ ಜನಿಸಿದ್ದು, ಅದರ ವಿಶ್ವಮಾನ್ಯತೆಗೆ ಶ್ರಮಿಸಿದ್ದು ಭಾರತ. ಭಾರತದ ಪ್ರಜೆಗಳು ಯೋಗ ಮಾಡುವಲ್ಲಿ ಎಲ್ಲರಿಗಿಂತ ಮುಂದೆ ಇರಬೇಕು.
`ಯೋಗ’ ಕಬ್ಬಿಣದ ಕಡಲೆಯಲ್ಲ. ಎಷ್ಟೋ ಜನರಲ್ಲಿ ಯೋಗ ತುಂಬಾ ಕ್ರಮಬದ್ಧ. ನಾವು ಬೆಳಗಿನ ಜಾವ ವಾಕ್ ಮಾಡಿದರೆ ಸಾಕು’ ಎಂಬ ತಪ್ಪು ಕಲ್ಪನೆಯಿದೆ. ಆದರೆ, ಅದು ಸರಿಯಲ್ಲ `ಕಲಿಯುವ ತನಕ ಬ್ರಹ್ಮವಿದ್ಯೆ, ಕಲಿತ ಮೇಲೆ ಕೋತಿ ವಿದ್ಯೆ’ ಎಂಬ ಗಾದೆಯಂತೆ, ಯೋಗವನ್ನು ಒಂದು ಬಾರಿ ನಾವು ಅಳವಡಿಸಿಕೊಂಡರೆ ಜೀವನಪೂರ್ತಿ ಆರೋಗ್ಯವಾಗಿ ಇರಬಹುದು. ಅದರಲ್ಲಿ ಸಂದೇಹವೇ ಇಲ್ಲ.
ಆಕಸ್ಮಾತ್ ಒಬ್ಬರಿಗೆ ಕೊರೊನಾ ಬಂದರೆ, 14 ದಿನಗಳವರೆಗೆ ಅವರು ಕ್ವಾರಂಟೈನ್ ವನವಾಸ ಅನುಭವಿಸಬೇಕು. ಅದರ ಬದಲು 2020ರ ಯೋಗ ದಿನದಿಂದ ಕೇವಲ 14 ದಿನ ಯೋಗ ಕಲಿತು, ಅಭ್ಯಾಸ ಮಾಡಿ, ಜೀವನ ಪರ್ಯಂತ ಸುಖವಾಗಿ ಇರಬಹುದು ತಾನೇ? ಅದಕ್ಕಾಗಿಯೇ ಒಕ್ಕೂಟ ತುಂಬಾ ಸರಳವಾದ ಯೋಗಾಸನಗಳನ್ನು ಉತ್ಸಾಹದಿಂದ 15-20 ಜನರ ಗುಂಪು ಮಾಡಿಕೊಂಡು ಯೋಗ ಕಲಿಯುವ ಉದ್ದೇಶವಿದ್ದರೆ, ಉಚಿತವಾಗಿ ಕಲಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಈಗಾಗಲೇ ದೇವನಗರಿಯಲ್ಲಿ ಸಾವಿರಾರು ಜನ ನಿತ್ಯ ಯೋಗಾಭ್ಯಾಸಿಗಳಿದ್ದಾರೆ. ಪ್ರತಿವರ್ಷ ಯೋಗ ಒಕ್ಕೂಟ ನಡೆಸುವ ಯೋಗ ದಿನಾಚರಣೆಗಳಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ.
ಕೊರೊನಾ ಮಹಾಮಾರಿ ಸಾವಿನ ಬೆನ್ನೇರಿ ರಣಕೇಕೆ ಹಾಕುತ್ತಿರುವ ಈ ಕಾಲದಲ್ಲಿ `ಯೋಗ ಸಾಧನೆ ನಿರೋಗ ಜೀವನ’ ಎಂಬುದು ನಮ್ಮ ಜೀವನದ ಉಸಿರಾಗಬೇಕು.
ನಿತ್ಯ ಯೋಗ ಮಾಡುವವರನ್ನು ಕೊರೊನಾ ಅಷ್ಟೇ ಏಕೆ? ಬೇರೆ ಯಾವ ಬಗೆಯ ರೋಗಗಳೂ ಹೆಚ್ಚಾಗಿ ಬಾಧಿಸಲಾರವು. ಒಂದು ರೂಪಾಯಿ ಖರ್ಚಿಲ್ಲದೇ ಸ್ವಂತ ಪ್ರಯತ್ನದಿಂದ ಸ್ವಸ್ಥ ಜೀವನ ನಡೆಸುವುದು ಒಳ್ಳೆಯದಲ್ಲವೇ?
ನಟಸಾರ್ವಭೌಮ ಡಾ|| ರಾಜ್‌ಕುಮಾರ್, ಪ್ರಧಾನಿ ನರೇಂದ್ರ ಮೋದಿ, ನಟಿಯರಾದ ಅನುಷ್ಕಾಶೆಟ್ಟಿ, ಶಿಲ್ಪಾ ಶೆಟ್ಟಿ, ಕರೀನಾ ಕಪೂರ್, ಜೆನಿಫರ್ ಅನಿಸೈನ, ಮಲೈಕಾ ಅರೋರಾ, ನರ್ಗಿಸ್ ಫಕ್ರಿ, ಆಲಿಯಾ ಭಟ್, ಜೆನಿಫರ್ ಲೋಫೆಜ್, ಪರಿಣಿತಿ ಚೋಪ್ರಾ ಮತ್ತು ಅನೇಕ ನಟರು, ಯಶಸ್ವೀ ಪುರುಷರು ದಿನನಿತ್ಯ ಯೋಗ ಮಾಡುತ್ತಾರೆ. ಯೋಗ ದೊಡ್ಡ ಸಾಧನೆಗಳಿಗೆ ಹೆದ್ದಾರಿ.
ಮೈಸೂರನ್ನು ಹೊರತುಪಡಿಸಿದರೆ, ದಾವಣಗೆರೆಯಲ್ಲಿ ಯೋಗದ ವೈಭೋಗ ಹೆಚ್ಚಾಗಿದೆ. ಇಡೀ ರಾಷ್ಟ್ರವೇ ದೇವನಗರಿಯತ್ತ ನೋಡುವಂತಾಗಲೀ, ದೇವನಗರಿ ಯೋಗ ನಗರಿಯಾಗಲಿ. ಈ ದಿಸೆಯಲ್ಲಿ ನಿಮ್ಮ ಮನೆಯಿಂದಲೇ ಅಭಿಯಾನ ಆರಂಭವಾಗಲಿ ಎಂಬುದು `ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ’ದ ಮಹತ್ವಾಕಾಂಕ್ಷೆ.
ಈಗಾಗಲೇ ಮೈಸೂರು ಹೊರತಾಗಿ ಕರ್ನಾಟಕದಲ್ಲೇ ನಮ್ಮ ದಾವಣಗೆರೆ ನಗರ ಯೋಗ ಉತ್ಸವದಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹಿರೇಮಗಳೂರು ಕಣ್ಣನ್, ಉಡುಪಿಯ ಪೇಜಾವರ ಶ್ರೀಗಳು, ಸಂತೋಷ್ ಗುರೂಜಿ, ಸಿದ್ದೇಶ್ವರ ಸ್ವಾಮೀಜಿ, ರಾಮಕೃಷ್ಣಾಶ್ರಮದ ಗುರೂಜಿ, ಚನ್ನಬಸವ ಸ್ವಾಮೀಜಿ, ಪಾವಗಡ ಪ್ರಕಾಶರಾವ್, ಚಕ್ರವರ್ತಿ ಸೂಲಿಬೆಲೆ, ಪ್ರೊ|| ಕೃಷ್ಣೇಗೌಡ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರೂ ಈಗಾಗಲೇ ದಾವಣಗೆರೆ ನಮ್ಮ ಕಾರ್ಯಕ್ರಮಕ್ಕೆ ಬಂದಿರುತ್ತಾರೆ.
ಈ ವರ್ಷ ಮನೆಯಿಂದಲೇ ಯೋಗ-ಕುಟುಂಬದೊಂದಿಗೆ ಯೋಗ ಅಡಿಯಲ್ಲಿ ಎಲ್ಲರೂ ಸೇರೋಣ. ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.
Facebook : DAVANEGERE JILLA YOGA OKKUTA LIVE
YouTube : Yoga Samachar, Davangere, YouTube Live.
98444-43119, 98800-34643
ಕುಟುಂಬ ಸದಸ್ಯರುಗಳೊಂದಿಗೆ ತಾವು ಕೂಡ ಅಂತರರಾಷ್ಟ್ರೀಯ ಯೋಗ ದಿನದ ಈ ಕಾರ್ಯಕ್ರಮದಲ್ಲಿ ಒಂದು ನಿಮಿಷ ಯೋಗ, ಪ್ರಾಣಾಯಾಮ ಮಾಡುತ್ತಿರುವ ವಿಡಿಯೋ ಈ ಕೆಳಕಂಡ ವಾಟ್ಸ್‌ಆಪ್ ನಂಬರ್‌ಗೆ ಕಳುಹಿಸಿಕೊಡಿ. 98444-43119, 98800-34643
ಆಯ್ಕೆಯಾದ 50 ವಿಡಿಯೋಗಳನ್ನು ಸ್ಥಳೀಯ ಸುದ್ದಿ ವಾಹಿನಿ V1 ಚಾನಲ್ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಗುವುದು. ಆಯ್ಕೆಯಾದವರಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು.
ವಾಸುದೇವ್ ರಾಯ್ಕರ್
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯೋಗ ಒಕ್ಕೂಟ
ದಾವಣಗೆರೆ.