ಸ್ಕಿಜೋಫ್ರೇನಿಯಾ ದಿ ಸಕ್ಸಸ್ ಸ್ಟೋರಿ…

ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಸಂತೋಷ್ ಕುಮಾರ್: ಸ್ವಲ್ಪ ದಿನದ ಕೆಳಗೆ ನನಗೆ ಒಂದು ಕರೆ ಬಂತು. ಆ ಕರೆಯೂ ಮನೋವಿಕಾಸ ಪುನರ್ವಸತಿ ಆಪ್ತಸಮಾಲೋಚನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಮಲ್ಲೇಶಪ್ಪನವರದು. ಆ ಕರೆಯನ್ನು ಸ್ವೀಕರಿಸಿ ಮಾತನಾಡಿದಾಗ ಅವರು ಮಾತನಾಡಿ ನಮಸ್ಕಾರ ಸಂತೋಷ್‌ ಸರ್ ಹೇಗಿದ್ದೀರಾ! ಎಂದರು.
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಸಂತೋಷ್: ಸರ್ ಚೆನ್ನಾಗಿದ್ದೀನಿ ನೀವು ಹೇಗಿದ್ದೀರಾ?
ಅಧ್ಯಕ್ಷರು: ನಾನು ಕೂಡ ಚೆನ್ನಾಗಿದ್ದೀನಿ ಸರ್
ಸೋಷಿಯಲ್ ವರ್ಕರ್: ಸರ್ ಫೋನ್‌ ಮಾಡಿದ ವಿಷಯ
ಅಧ್ಯಕ್ಷರು: ಸರ್ ನಂದು ಸ್ವಲ್ಪ ಕೆಲಸ ಇತ್ತು ಹಾಗೆ ಸಿಟಿ ಕಡೆ ಬಂದಿದ್ದೆ ಇಲ್ಲಿ ಒಬ್ಬ ಹೆಂಗಸು ಬೀದಿಲ್ಲಿ ಹರ್ಕೋಂಡಿರೋ ಬಟ್ಟೆಗಳನ್ನು ಹಾಕ್ಕೊಂಡು ಸುಮ್ಮನೆ ವಟ ವಟ ಅನ್ಕೋತ್ತಾ ಹೋಗುತ್ತಾ ಇದ್ದಾಳೆ. ಸರ್ ಮತ್ತೆ ಸುಮ್ಮ ಸುಮ್ಮನೇ ಬೈತಾಳೆ, ಯಾರಾದರೂ ಕಂಡ್ರೆ ಕಲ್ಲು ತಗೊಂಡು ಹೊಡಿಯೋಕೆ ಬರಾಳೆ. ತುಂಬಾ ಸಿಟ್ಟು, ಕೂಗಾಡೋದು ಕಿರುಚಾಡದೋದು ‘ಏ’ ಬರಾಬರೀ ಸರ್ ನೋಡಾಕೆ ಆಗೋಲ್ಲಾ,. ಕೆಟ್ಟಕೆಟ್ಟದಾಗಿ ಬೈತ್ತಾಯಿದಾಳೆ ನೋಡಿ ನಾನೇ ನೋಡ್ತಾಯಿದ್ದೀನಿ, ಒಂದು ಪ್ಲಾಸ್ಟಿಕ್ ಚೀಲದಲ್ಲಿ ಕಸ ಹಾಕ್ಕೋಡು ಹೋಗುತ್ತಿದ್ದಾಳೆ, ನಾನೇ ಒಂದು ಕೇಳಿದ್ರೆ, ಅವಳೇ ಒಂದು ಹೇಳ್ತಾಳೆ ಸರ್. ಇಲ್ಲಿ ಅವಳನ್ನು ನೋಡಿ ಜನ ಕಾಮಿಡಿ ಮಾಡ್ತಾಯಿದ್ದಾರೆ ಸರ್ ಸ್ವಲ್ಪ ಯಾಕೋ ಹೆದರಿಕೆ ಆಗ್ತಾಯಿದೆ ಸರ್, ನಿಮ್ಮ ಕಡೆಯಿಂದ ಏನಾದರೂ ಅವಳಿಗೆ ಸಹಾಯವಾಗಬಹುದಾ! ಎಂದು ಕೇಳಿದರು.
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್: ಸರ್ ನಾನು ನಿಮ್ಮ ಸಂಭಾಷಣೆ ಕೇಳಿದ್ದನ್ನು ನೋಡಿದ್ರೆ ಆ ಹೆಂಗಸು ತೀವ್ರತರವಾದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ ಅನ್ಸುತ್ತೆ ಸರ್. ಅವರು ಮಾಡುತ್ತಿರುವ ಕ್ರಿಯೆಗಳು /ವರ್ತನೆಗಳೇನಿದೆ ಅದೆಲ್ಲಾ ತೀವ್ರತರ ಮಾನಸಿಕ ಕಾಯಿಲೆಯ ಲಕ್ಷಣಗಳಾಗಿವೆ ಸರ್ ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ ಸರ್.
ಅಧ್ಯಕ್ಷರು: ಸರ್ ಹಾಗಿದ್ರೆ ನಿಮಗೆ ಇಲ್ಲೇನಾದರೂ ಬರೋಕೆ ಆಗುತ್ತಾ ಸರ್ ನೀವು ಒಪ್ಪಿದ್ರೆ ಚಿಕಿತ್ಸೆ ಕೊಡಿಸೋಣಾ !

ತಕ್ಷಣವೇ ನಾನು ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಜೊತೆ ಚರ್ಚಿಸಿ, ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ತಂಡದೊಂದಿಗೆ ಆ ಸ್ಥಳಕ್ಕೆ ಭೇಟಿ ನೀಡಿ, ನಮ್ಮ ಮನೋವೈದ್ಯರ ತಂಡ ಅವಳನ್ನು ಪರೀಕ್ಷಿಸಿ ನೋಡಿದಾಗ ಅದು ತೀವ್ರತರ ಕಾಯಿಲೆಯಾದ ಸ್ಕೀಜೋಫ್ರೇನಿಯಾಗೆ ಬಳಲುತ್ತಿದ್ದು ಕಂಡುಬಂದಿತು. ಆಗ ನಾವುಗಳು ಹತ್ತಿರದ ಪೊಲೀಸರ ಸಹಾಯದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾಯ್ದೆಯ ನಿಯಾಮಾವಳಿಯ ಪ್ರಕಾರ ರೋಗಿಯನ್ನು ಹತ್ತಿರದ ಒಂದು ಖಾಸಗಿ ಪುರ್ನವಸತಿ ಕೇಂದ್ರಕ್ಕೆ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಸೇರಿಸಿ ಆಕೆಯನ್ನು ಸ್ವಚ್ಚತೆಗೊಳಿಸಿ ಆಕೆಗೆ  ಬೇಕಾದಂತಹ ಎಲ್ಲಾ ಚಿಕಿತ್ಸೆಯನ್ನು ನೀಡಲಾಯಿತು. ಕಾಲ ಕಳೆಯುತ್ತಾ ಅವರಿಗೆ ಹಳೆಯ ನೆನಪುಗಳು ಮರುಕಳಿಸುತ್ತಿರುವುದು ಹಾಗೂ ಗುಣಮುಖಳಾಗುತ್ತಿರುವುದು ಕಂಡು ಬಂದಿತು. ನಂತರ ಅವಳಿಗೆ ಈ ಒಂದು ಕೇಂದ್ರದಲ್ಲಿ ಸಂಸ್ಥೆಯವರು ವಿಶೇಷವಾದ ತರಬೇತಿಯನ್ನು ನೀಡುತ್ತಾ ಹಾಗೂ ಸಾಮಾಜಿಕ ಬೆಂಬಲದೊಂದಿಗೆ ಅವಳಿಗೆ ರಕ್ಷಣೆಯನ್ನು ನೀಡುತ್ತಿದ್ದೇವೆ. ಪ್ರತಿ ತಿಂಗಳು ಮನೋಸಾಮಾಜಿಕ ಆರೈಕೆ ಜೊತೆಗೆ ಅನುಸರಣೆಯನ್ನು ಮಾಡುತ್ತಿದ್ದೇವೆ. ದುರದೃಷ್ಟವೇನೆಂದರೆ ಅವಳಿಗೆ ಅವರ ಮನೆಯವರೇ ಇಲ್ಲದಿರುವುದು, ಆ ಸಂಸ್ಥೆಯವರೇ ರೋಗಿಯ ಮನೆಯವರಾಗಿ ಆರೈಕೆ ಮಾಡುತ್ತಿರುವುದು ಶ್ಲಾಘನೀಯ. ಅಧ್ಯಕ್ಷರು: ಸರ್‌ ಥ್ಯಾಂಕ್ಯು ನಿಮ್ಮ ತಂಡದ ಕಾರ್ಯವು ಹೀಗೆ ನಡೆಯಲಿ ನಮ್ಮ ಸಂಸ್ಥೆಯೂ ಕೂಡ ಈ ಒಂದು ಕಾರ್ಯಕ್ಕೆ ಕೈ ಜೋಡಿಸುತ್ತದೆ ಎಂದರು. 

ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್: ಸರ್ ಇಂತಹ ಹಲವಾರು ರೋಗಿಗಳನ್ನು ಮುಖ್ಯವಾಹಿನಿಗೆ ತರಲು ನಾವು ಕಳೆದ 3 ವರ್ಷಗಳಿಂದಲೂ ಸಹ  ನಮ್ಮ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳು ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದು ನೀವು ನಮಗೆ ನೀಡಿದ ಸಹಕಾರವನ್ನು  ಪ್ರತಿಯೊಬ್ಬ ನಾಗರಿಕರು ಸಹ ನೀಡಬೇಕು ಎಂದು ಅವರಿಗೆ ಧನ್ಯವಾದ ತಿಳಿಸಿದೆನು.

ಸ್ಕಿಜೋಫ್ರೇನಿಯಾ ಒಂದು ತೀವ್ರತರ ಮಾನಸಿಕ ಕಾಯಿಲೆಯಾಗಿದೆ. ಈ ಕಾಯಿಲೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಮೇ 24 ರಂದು ಘೋಷ ವಾಕ್ಯ: ಸ್ಕಿಜೋಫ್ರೇನಿಯಾ ರೋಗಿಗಳಿಗೆ `ನೀವೂ ಏನು ಸಹಾಯ ಮಾಡಬಹುದು’ ಘೋಷ ವಾಕ್ಯದೊಂದಿಗೆ ಸಮುದಾಯದಲ್ಲಿ ಮತ್ತು ಶಾಲಾ / ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸರ್ಕಾರೇತರ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದೇವೆ.

ಸ್ಕೀಜೊಫ್ರೇನಿಯಾ ರೋಗಿಯಲ್ಲಿ ಈ ಕೆಳಕಂಡ ಲಕ್ಷಣಗಳು ಕಂಡುಬರುತ್ತವೆ:
ವ್ಯಕ್ತಿಯೂ ಅರ್ಥವಿಲ್ಲದ ಮತ್ತು ಅಸಂಬದ್ದ ಮಾತುಗಳು, ಸೂಕ್ತವಲ್ಲದ ಭಾವನೆಗಳನ್ನು ವ್ಯಕ್ತಪಡಿಸುವುದು, ಕಾರಣವಿಲ್ಲದೆ  ಅಳುವುದು/ ನಗುವುದು ಮತ್ತು ಕೋಪ ಮಾಡಿಕೊಳ್ಳುವುದು, ಭಾವನೆಗಳೇ ಇಲ್ಲದ  ಹಾಗೆ ಇರುವುದು, ಇತರರಿಗೆ ಅರ್ಥವಾಗದೇ ಅಪನಂಬಿಕೆಗಳನ್ನು, ತಪ್ಪು ನಂಬಿಕೆಗಳನ್ನು ಯಾವ ರೀತಿಯ ವಾದ ಹಾಗೂ ಸಮಜಾಯಿಷಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಇರುವಂತಹ ವರ್ತನೆಗಳು, ತನ್ನ ಲೋಕದಲ್ಲಿ ಒಂಟಿಯಾಗಿರುವುದು, ಸಮಾಜದಲ್ಲಿ ಬೆರೆಯದೇ ಇರುವುದು ಬೇರೆಯವರಿಗೆ  ಕೇಳಿಸದ ಮಾತುಗಳು ಕೇಳಿಸುವುದು ಮತ್ತು  ದೃಶ್ಯಗಳು ಕಾಣಿಸುವುದು, ಇಲ್ಲದ ವಾಸನೆ ಇದೆ ಎನ್ನುವುದು, ಸ್ಪರ್ಶಾನುಭವ ಸ್ವಚ್ಚತೆಯ ಬಗ್ಗೆ ನಿರ್ಲಕ್ಷ್ಯ ರೋಗಿಗೆ ಹಸಿವು ಮತ್ತು ಬಾಯಾರಿಕೆ ಬಗ್ಗೆ ನಿರ್ಲಕ್ಷ್ಯ. ಕೆಲಸ, ಕರ್ತವ್ಯಗಳನ್ನು ಮಾಡದೇ ಇರುವುದಾಗಿದೆ. ಈ ಎಲ್ಲಾ ಲಕ್ಷಣಗಳಿಂದ 6 ತಿಂಗಳ ಕಾಲ ಬಳಲುತ್ತಿದ್ದರೆ ಅದು ಸ್ಕೀಜೊಫ್ರೇನಿಯಾ ಕಾಯಿಲೆ ಆಗಿದೆ.

ಈ ರೀತಿಯಾ ರೋಗಿಗಳಲ್ಲಿ ಲಕ್ಷಣಗಳು ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಅಥವಾ ಮಾನಸಿಕ ಆರೋಗ್ಯ ತಂಡದವರಿಗೆ / ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸಂಬಂಧಪಟ್ಟ ಸರ್ಕಾರೇತರ ಸಂಸ್ಥೆಗಳಿಗೆ  ತಿಳಿಸುವುದು. ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ಇಲ್ಲಿ ಮುಖ್ಯವಾಗಿರುವುದೇನೆಂದರೆ ಇಂತಹ ಕಾಯಿಲೆಯುಳ್ಳವರ ಜೊತೆ ವಿವೇಕವಿಲ್ಲದೆ ನಡೆದುಕೊಳ್ಳುವುದು ಅಥವಾ ದೌರ್ಜನ್ಯ, ಹಲ್ಲೆ, ಅಪಹಾಸ್ಯ ಮಾಡುವುದು ಅವಳಿಗೆ ಮನೆಯವರು ಚಿಕಿತ್ಸೆ ನೀಡಿಸದಿರುವುದು, ಅಸ್ವಸ್ಥರಿಗೆ ಚೈನ್ ಹಾಕಿ ಮನೆಯಲ್ಲಿ ಕೂಡಿ ಹಾಕುವುದು  ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.

ಪ್ರತಿವರ್ಷ ಮೇ 24ರಂದು `ವಿಶ್ವ ಸ್ಕೀಜೋಫ್ರೇನಿಯಾ ದಿನ’ ದಂದು ಘೋಷ ವಾಕ್ಯ: ಸ್ಕಿಜೋಫ್ರೇನಿಯಾ ರೋಗಿಗಳಿಗೆ `ನೀವೂ ಏನು ಸಹಾಯ ಮಾಡಬಹುದು’ ಘೋಷ ವಾಕ್ಯದೊಂದಿಗೆ ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಾವಣಗೆರೆ ವತಿಯಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಾ ಇದ್ದೇವೆ. ಇಲ್ಲಿ ಸ್ಕಿಜೋಫ್ರೇನಿಯಾ ರೋಗಿಗಳಿಗೆ ನೀವೂ ಏನು ಸಹಾಯ ಮಾಡಬಹುದು. ಎಲ್ಲರಲ್ಲಿಯೂ ಸಹ ಕಳವಳ ಸೃಷ್ಠಿಯುಂಟು ಮಾಡುತ್ತದೆ. ಸ್ನೇಹಿತರೇ ಇದರಲ್ಲಿ ಭಯಪಡುವಂತಹದ್ದೇನಲ್ಲಾ ಮಾನಸಿಕ ರೋಗಿಗಳು ಕೂಡ ನಮ್ಮ ನಿಮ್ಮಂತೆಯೇ ಮನುಷ್ಯರು ನಾವು-ನೀವು ಸೇರಿ ಈ ತರನಾದ ರೋಗಿಗಳನ್ನು ಗುರುತಿಸಿ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ / ಪೊಲೀಸ್ ಇಲಾಖೆಗೆ ಅಥವಾ ಸರ್ಕಾರೇತರ ಸಂಸ್ಥೆಯವರಿಗೆ ಮಾಹಿತಿಯನ್ನು ನೀಡಿ ಅವರಿಗೆ ಚಿಕಿತ್ಸೆ ಕೊಡಿಸುವುದು, ಜೊತೆಗೆ ರೋಗಿಗಳ ಮೇಲೆ ಹಲ್ಲೆ, ದೌರ್ಜನ್ಯ, ಮಾಡುತ್ತಿರುವವರ ವಿರುದ್ಧ ದೂರನ್ನು ದಾಖಲಿಸುವುದು. ಅಪಹಾಸ್ಯ ,ಹುಚ್ಚ ಎಂದು ಕರೆಯುವುದು ಮತ್ತು ರೋಗಿಯನ್ನು ಕೋಣೆಯಲ್ಲಿ ಬಂಧಿಸುವುದು ಶಿಕ್ಷಾರ್ಹ ಅಪರಾಧ. ಇದನ್ನು ತಡೆಯುವುದು, ರೋಗಿಯನ್ನು ಆರೈಕೆ ಮಾಡುವವರಿಲ್ಲದಿದ್ದರೆ ಅವರನ್ನು ಪುನರ್ವಸತಿ ಕೇಂದ್ರಗಳಿಗೆ ಸೇರಿಸುವುದು, ಅವರಿಗೆ ಸಾಮಾಜಿಕ ಬೆಂಬಲ ನೀಡುವುದಾಗಿದೆ. ಈ ರೀತಿಯಾಗಿ ನಾವು-ನೀವು ಸ್ಕೀಜೋಫ್ರೇನಿಯಾ ರೋಗಿಗಳಿಗೆ ಸಹಾಯ ಮಾಡಬಹುದಾಗಿದೆ.

ಈ ಸ್ಕಿಜೋಫ್ರೇನಿಯಾ ಕಾಯಿಲೆಗೆ ಕಾರಣಗಳನ್ನು ನೋಡುವುದಾದರೆ:
* ಮೆದುಳಿನಲ್ಲಿರುವ ರಾಸಾಯನಿಕ ಕ್ರಿಯೆಗಳ ಬದಲಾವಣೆ ಆಗುವುದರಿಂದ ಅನುವಂಶೀಯತೆಯಿಂದಲೂ ಬರುವಂತಹದ್ದು.
* ಮೆದುಳಿಗೆ ಸಂಬಂಧಿಸಿದ ಸೋಂಕುಗಳು, ತಲೆಗೆ ಅಥವಾ ನರವ್ಯೂಹಕ್ಕೆ ತೀವ್ರ ಪೆಟ್ಟಾಗುವಂತಹ ಅಥವಾ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಆಗುವ ಪರಿಣಾಮಗಳು.
* ಮದ್ಯ ಮತ್ತು ಮಾದಕ ದ್ರವ್ಯಗಳ ಬಳಕೆಯಿಂದ.
* ಆಕಸ್ಮಿಕ ಆಘಾತ ಅಥವಾ ಜೀವನದಲ್ಲಿ ತೀವ್ರ ದುರಂತಗಳು, ಬಾಲ್ಯದ ಕಹಿ ಅನುಭವಗಳು ಮತ್ತು ಕುಟುಂಬದ ಅನಾರೋಗ್ಯಕರ ವಾತಾವರಣ.
* ಸಾಮಾಜಿಕ ಸಮಸ್ಯೆಗಳು, ನಿರುದ್ಯೋಗ, ಕಂಗೆಡಿಸುವ ಬಡತನ, ಮನೆ ಅಥವಾ ಸಮಾಜದಲ್ಲಿನ ಸತತ ಕ್ರೌರ್ಯ, ಹಿಂಸೆ ದೌರ್ಜನ್ಯಗಳಿಂದಾಗುವ ಒತ್ತಡಗಳು.
ಪ್ರಕೃತಿಯಿಂದಾಗುವ ವಿಕೋಪಗಳು / ವಿಪತ್ತುಗಳು ಉದಾ: ಇತ್ತೀಚೆಗೆ ಕೊಡಗಿನಲ್ಲಾದ ಪ್ರವಾಹ ಅಥವಾ ಕೊರೊನಾ ಮಹಾಮಾರಿ ಇತ್ಯಾದಿ.

ಸ್ಕಿಜೋಫ್ರೇನಿಯಾ ಕಾಯಿಲೆಗೆ ಚಿಕಿತ್ಸಾ ಕ್ರಮಗಳು:
* ಆದಷ್ಟು ಬೇಗ ಗುರುತಿಸಿ, ಚಿಕಿತ್ಸೆ ಕೊಡಿಸುವುದು.
* ಔಷಧಿ ಚಿಕಿತ್ಸೆಯ ಬಗ್ಗೆ ವೈದ್ಯರನ್ನು ಕಂಡು ಸಲಹೆ ಮಾರ್ಗರ್ದಶನ ಪಡೆಯುವುದು.
* ಪುನರ್ವಸತಿ ಕೇಂದ್ರಗಳ ಸಹಾಯ ಪಡೆಯುವುದು ಅಥವಾ ಆರೈಕೆ ಮಾಡುವವರು ಇಲ್ಲದಿದ್ದರೆ ಸೇರಿಸುವುದು ಇಂತಹ ಕೇಂದ್ರಗಳಲ್ಲಿ ವಿಶೇಷ ತರಬೇತಿ ಕೊಡಿಸುವುದು.
* ಮದ್ಯ ಮತ್ತು ಮಾದಕ ವ್ಯಸನಗಳ ಬಳಕೆಯಿಂದ ದೂವಿರಿಸುವುದು
* ಮನೆಯವರಿಂದ ಸರಿಯಾದ ಪ್ರೀತಿ, ವಿಶ್ವಾಸ ಕ್ರಮವಾದ ಆಹಾರ ಸೇವನೆ ಮತ್ತು ನಿದ್ರೆ, ಮನರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು.
* ದೈನಂದಿನ ಧ್ಯಾನ, ವ್ಯಾಯಾಮಗಳ ಅಭ್ಯಾಸ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದು.

ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿನ ಸಿಗುವಂತಹ ಸೌಲಭ್ಯಗಳು:
* ಗುಣಮಟ್ಟದ ಔಷಧಿ ಚಿಕಿತ್ಸೆ
* ಆಪ್ತಸಮಾಲೋಚನೆ ಮತ್ತು ಸಲಹೆ
* ಮನೋವೈದ್ಯಕೀಯ ಶಿಕ್ಷಣ ಮತ್ತು ಮನೋಸಾಮಾಜಿಕ ಚಿಕಿತ್ಸೆ
* ಮನೆ ಭೇಟಿ ಕಾರ್ಯಕ್ರಮ
* ವೃತ್ತಿಪರ ತರಬೇತಿ ಶಿಕ್ಷಣ
* ಆರೋಗ್ಯ ಸಹಾಯವಾಣಿ “104” ಈ ರೀತಿಯ ಎಲ್ಲಾ ಸೌಲಭ್ಯಗಳು ಲಭ್ಯವಿದೆ…


ಸ್ಕಿಜೋಫ್ರೇನಿಯಾ ದಿ ಸಕ್ಸಸ್ ಸ್ಟೋರಿ... - Janathavaniಸಂತೋಷ್‍ಕುಮಾರ್ ಎಂ.
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್‌
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ
ದಾವಣಗೆರೆ ಮೊ.: 9739745816
[email protected]

error: Content is protected !!