ಕಳೆದ ಬೇಸಿಗೆ ಜನರ ಪಾಲಿಗೆ ಬಿಸಿ ತುಪ್ಪ. ದೇಶದಾದ್ಯಂತ ಬಿಸಿಗಾಳಿಗೆ ಬಲಿಯಾದವರ ಸಂಖ್ಯೆ 3000 ದಾಟಿದೆ. ಆಂಧ್ರ ಪ್ರದೇಶ ಒಂದರಲ್ಲೇ ಬಿಸಿಲಿನ ಪ್ರಖರತೆಗೆ 1500 ಜನ ಅಸುನೀಗಿದ್ದಾರೆ. ಬರುವ ಬೇಸಿಗೆ ಇನ್ನೂ ಕಠಿಣವಾಗಿದೆ. ಜಾಗತಿಕ ಮಟ್ಟದಲ್ಲಿ ನಡೆದ ಸಮಿತಿಯ ಪ್ರಕಾರ ದಕ್ಷಿಣ ಆಪ್ರಿಕಾದ ಕೇಪ್ ಟೌನ್ ಪರಿಪೂರ್ಣ ಬರಗಾಲ ಕಂಡ ನಂತರದಲ್ಲಿ ಸರದಿಯಲ್ಲಿರುವುದು ಬೆಂಗಳೂರು ನಗರ 111 ಪೂ. ಯೋಜನೆಯಲ್ಲಿರುವ ಅವೈಜ್ಞಾನಿಕ ನಗರೀಕರಣ ಹಾಗೂ ಕೆರೆಗಳ ಅತಿಕ್ರಮಣ ಒಂದೆಡೆಯಾದರೆ ನಿರಂತರ ಬರ ರೈತರನ್ನು ಕಂಗಾಲು ಮಾಡಿದೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಂಡಿದ್ದ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹತ್ತಾರು ವರ್ಷಗಳಿಂದ ಮಕ್ಕಳಂತೆ ಬೆಳೆಸಿದ್ದ ಅಡಿಕೆ ಮರಗಳನ್ನು ಕಣ್ಣೆದುರು ಕಡಿದು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿಗಾಗಿ ಹತ್ತಾರು ಕಿ.ಮೀ ಹೋಗಿ ತರುವುದು ದೈನಂದಿನ ಬದುಕಾದರೆ ಜಾನುವಾರು ಹಾಗೂ ನಿತ್ಯ ಕರ್ಮಗಳಿಗೆ ನೀರು ಸಿಗದಿರುವುದು ದುರಂತದ ಸಂಗತಿ.
ನೀರಿನ ನಿರ್ವಹಣೆ, ಯೋಜನೆ, ಬೇಜವಾಬ್ದಾರಿತನ, ಅಸಡ್ಡೆ, ಅಜ್ಞಾನ, ಆಧುನಿಕ ಕೃಷಿ ಪದ್ಧತಿಗಳು, ನಿಲುವುಗಳು ಇಲ್ಲದಿರುವುದರಿಂದ ಕರ್ನಾಟಕದಲ್ಲಿ ಸುಮಾರು ಈಗಾಗಲೇ 176- 200 ತಾಲ್ಲೂಕುಗಳು ಬರವನ್ನು ಎದುರಿಸುತ್ತಿವೆ.
ಮಧ್ಯಮ ವರ್ಗದ ಜೀವನ ಶೈಲಿ:
2020ರ ವೇಳೆಗೆ ಜಗತ್ತಿನಲ್ಲಿ ಸುಮಾರು 325- ಕೋಟಿಯಿಂದ 400 ಕೋಟಿಯವರೆಗೆ ಮಧ್ಯಮ ವರ್ಗ ಹೆಚ್ಚಾಗಲಿದೆ. ದಿನನಿತ್ಯದ ಸ್ನಾನ, ಶೌಚ, ನಿತ್ಯಕರ್ಮ, ಈಜುಕೊಳ, ಅಲಂಕಾರಿಕ ಸಸ್ಯ ನಿರ್ವಹಣೆ ನೀರಿನ ಸರಬರಾಜಿನ ಮೇಲೆ ತೀವ್ರ ಒತ್ತಡ ಬೀಳುತ್ತಿದೆ. ಅಲ್ಲದೇ ವಿಲಾಸಿ ಕಾರುಗಳು, ಹವಾ ನಿಯಂತ್ರಕಗಳು, ರೆಫ್ರಿಜರೇಟರ್‌ಗಳು ಇತರೆ ಗೃಹೋಪಯೋಗಿ ಯಂತ್ರಗಳು. ಈ ಕಾಲದ ಮಧ್ಯಮ ವರ್ಗದ ಆದ್ಯತೆಗಳಾಗಿದ್ದು, ಇವುಗಳನ್ನು ತಯಾರಿಸಲು ಹಾಗೂ ನಡೆಸಲು ಬೇಕಾಗುವ ನೀರಿನ ಪ್ರಮಾಣ ಊಹಿಸಲೂ ಅಸಾಧ್ಯ. ಒಂದು ಲೀಟರ್ ತೈಲ ತಯಾರಿಕೆಗೆ ನೂರುಗಟ್ಟಲೇ ಲೀಟರ್ ನೀರು ಬೇಕಾಗುತ್ತದೆ.
ನೀರಿನ ಸೋರಿಕೆ: ಹಳ್ಳಿ, ನಗರಗಳು, ಮಹಾನಗರಪಾಲಿಕೆಗಳು, ಮೆಟ್ರೋ ಪಾಲಿಟನ್ ನಗರಗಳಲ್ಲಿ ನಂಬಲು ಅಸಾಧ್ಯವಾಗಿರುವಷ್ಟು ನೀರುದುರ್ಬಳಕೆಯಾಗುತ್ತದೆ.
ಇಸ್ರೇಲ್‌ನ ಪದ್ಧತಿ: ಇಸ್ರೇಲ್ ಅನುಸರಿಸಿದ ನೀರಿನ ವಿಜ್ಞಾನಿಗಳ ಯೋಜನೆಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ಇಸ್ರೇಲ್ 60% ಭೂ ಭಾಗ ಮರುಭೂಮಿ ಉಳಿದ 40% ರಲ್ಲಿ ಸ್ವಲ್ಪ ಮಾತ್ರ ಮಳೆ ಬೀಳುತ್ತದೆ. 1948 ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಇಸ್ರೇಲ್ ಜನಸಂಖ್ಯೆ ಹೆಚ್ಚಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅತ್ಯಂತ ಬಡರಾಷ್ಟ್ರವಾಗಿತ್ತು. ಈಗ ಈ ದೇಶವು ಬಹು ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಇಸ್ರೇಲ್ ನಲ್ಲಿ ನೀರಿನ ಅಭಾವವಿಲ್ಲ. ಹಿಂದೆಂದಿಗಿಂತಲೂ ನೀರಿನ ಲಭ್ಯತೆಯಿದೆ. ಇಸ್ರೇಲ್ ನೆರೆಹೊರೆ ರಾಷ್ಟ್ರಗಳಿಗೆ ನೀರು ರಫ್ತು ಮಾಡುತ್ತದೆ ಎಂದರೆ ಯೋಜನೆಗಳನ್ನು ರೂಪಿಸಿರುವುದು ಗಮನಾರ್ಹ.
ನೀರಿನ ಶಿಕ್ಷಣ: ಇಸ್ರೇಲ್ ಶಾಲೆಗಳಲ್ಲಿ ನೀರನ್ನು ಉಳಿಸುವ ಪಾಠಗಳ ಜೊತೆಗೆ ಉಪಯೋಗಕಾರಿ, ಕಾರ್ಯತಂತ್ರ, ಮಿತವಾಗಿ ಉಪಯೋಗಿಸುವುದು, ನೀರನ್ನು ಪೋಲಾಗದಂತೆ ತಪ್ಪಿಸುವುದು ಪ್ರತಿಯೊಬ್ಬನ ಜವಾಬ್ದಾರಿ ಎಂಬ ಸತ್ಯವನ್ನು ಪ್ರತಿಯೊಂದು ಮಗುವಿನಲ್ಲೂ ಬಾಲ್ಯದಿಂದಲೇ ಬೆಳೆಸುತ್ತದೆ.
ನೀರಿನ ತಂತ್ರಜ್ಞರು ಇತ್ತೀಚಿನ ಹೀರೋಗಳು: ಸಾಹಿತ್ಯ, ಜಾನಪದ ಸಂಪ್ರದಾಯ, ಹಾಡು, ಕಲೆ, ಸಂಸ್ಕೃತಿ, ತಾಯಿ ನೆಲದ ಸ್ಥಾಪನೆಗೆ ನಡೆದ ಚಳುವಳಿ ಹಾಗೂ ನೀರಿನ ಪ್ರಚಾರದ ಮಹತ್ವ ಹಾಗೂ ಸಮೃದ್ಧತೆಯ ಅವಶ್ಯಕತೆಗಳನ್ನು ಪ್ರತಿಪಾದಿಸುತ್ತದೆ, ಅಷ್ಟೇ ಅಲ್ಲ ಇಸ್ರೇಲ್ ನೀರಿಗೆ ಕೊಟ್ಟಿರುವ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಅಲ್ಲಿನ ನಾಣ್ಯಗಳು, ಪೋಸ್ಟ್, ಸ್ಟಾಂಪ್ ಗಳು ಮತ್ತು ಕರೆನ್ಸಿ ನೋಟ್‌ಗಳಲ್ಲಿ ಕಾಣಬಹುದು.
ನೀರಿನ ಉಳಿತಾಯ ಹಾಗೂ ನಿರ್ವಹಣೆ: 1955 ರಲ್ಲಿ ನಾಗರಿಕರು ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಯಿತು. ನೀರಿನ ಉಪಯೋಗ, ಖರ್ಚು ಇವುಗಳನ್ನು ಅಳೆಯುವ ಸಲುವಾಗಿ ಪ್ರತಿ ನೀರಿನ ಸಂಪರ್ಕಕ್ಕೂ ಮೀಟರ್ ಅಳವಡಿಸುವುದು ಕಡ್ದಾಯಗೊಳಿಸಲಾಯಿತು. ಈ ಕ್ರಮಗಳು ಸರ್ಕಾರಕ್ಕೆ ನೀರಿನ ಬಳಕೆ ಮತ್ತು ದುರ್ಬಳಕೆ ಕುರಿತಂತೆ ಪೂರ್ತಿ ಚಿತ್ರಣ ದೊರಕಿಸಿಕೊಟ್ಟರು.
ನದಿ, ಕೆರೆ, ಸರೋವರ, ತೊರೆ ಮತ್ತು ಮಳೆ ನೀರನ್ನು ಸರ್ಕಾರಿ ಸ್ವತ್ತು ಎಂದು ಘೋಷಿಸುವ ಕಾನೂನು ಜಾರಿಗೆ ಬಂದಿತು. ಸರ್ಕಾರದ ಅಪ್ಪಣೆಯಿಲ್ಲದೆ ನೀರನ್ನು ಯಾವುದೇ ಕಾರಣಕ್ಕೂ ಉಪಯೋಗಿಸುವಂತಿಲ್ಲ ಎಂಬ ಕಾನೂನು ಜಾರಿಗೊಳಿಸಲಾಯಿತು.
ಡಿಸ್ಪೆನ್ಸ್ ಮೀಟರ್ ರೀಡಿಂಗ್’ ತಂತ್ರಜ್ಞಾನ : ಈ ತಂತ್ರಜ್ಞಾನವನ್ನು ಬಾರ್ಲೆವರ್ ಅವರು ಹೀಗೆ ಹೇಳುತ್ತಾರೆ. ಮೊಬೈಲ್ ಫೋನನ್ನು ಮನೆಯ ನೀರಿನ ಮೀಟರ್ ಜೊತೆಗೆ ಎಷ್ಟು ಸಮಗ್ರವಾಗಿ ಬಳಸುತ್ತದೆಯೆಂದರೆ ನಾಲ್ಕು ಗಂಟೆಗೊಮ್ಮೆ ಮಿತಿಯ ನೀರಿನ ಬಳಕೆಯ ಬಗ್ಗೆ ಕರೆ ಬರುತ್ತಿರುತ್ತದೆ. ಪ್ರತಿಸಲ ಮನೆ ಮನೆ ಹೋಗಿ ನೀರಿನ ಮೀಟರ್ ಓದುವ ಕೆಲಸ ಇಲ್ಲವಾಯಿತು, ಇಂತಹ ಮಾಹಿತಿಯ ವಿನಿಮಯದಿಂದಾಗಿ ಹೆಚ್ಚಿನ ಪ್ರಯೋಜನವಾಯಿತು.
ವಿಜ್ಞಾನ, ತಂತ್ರಜ್ಞಾನ ಬೆಳೆದಂತೆಲ್ಲಾ ಮಾನವ ವೈಜ್ಞಾನಿಕತೆಯನ್ನು ಬೆಳೆಸಿಕೊಂಡು ಆಸೆ, ಆಕಾಂಕ್ಷೆಗಳಿಗೆ ಮಿತಿಯಿಲ್ಲದೇ
ದುರಾಸೆಯಿಂದ ಪ್ರಾಕೃತಿಕ ಸಂಪನ್ಮೂಲಗಳಾದ ನೆಲ, ಜಲ, ಕಾಡುಗಳನ್ನು ಯಥೇಚ್ಛವಾಗಿ ಬಳಸಿದ್ದರ ಫಲವಾಗಿ
ಇಂದು ಎಲ್ಲಾ ಕಡೆ ಭೀಕರ ಜಲಕ್ಷಾಮ ಉಂಟಾಗಿದೆ.
ಕೃಷಿ, ತೋಟಗಾರಿಕೆ, ಬೃಹತ್ ಕೈಗಾರಿಕೆಗಳನ್ನು ಕೈಗೊಳ್ಳುವ ಆತುರದಲ್ಲಿ ಪ್ರಾಪಂಚಿಕ ಸಂಪತ್ತನ್ನು ನಾಶ ಮಾಡುತ್ತಿದ್ದೇವೆ.
ಡಿಸಾಲಿನೇಷನ್ ಪದ್ಧತಿ : ತ್ಯಾಜ್ಯ ನೀರನ್ನು ಶುದ್ಧ ನೀರಾಗಿ ಪರಿವರ್ತನೆಗೊಳಿಸಿದ್ದು, ಪ್ರಪಂಚದ ಬೇರೆ ಯಾವ ದೇಶ ಇಸ್ರೇಲಿನಂತೆ ತ್ಯಾಜ್ಯ ನೀರಿನ ಸದ್ಭಳಕೆಯಲ್ಲಿ ಮುಂಚೂಣಿಯಲ್ಲ. ಇಸ್ರೇಲ್‌ನಲ್ಲಿ ಶೇ. 85 ರಷ್ಟು ತ್ಯಾಜ್ಯ ನೀರನ್ನು ಬಳಸಲಾಗುತ್ತದೆ. ಇಸ್ರೇಲ್‌ನಲ್ಲಿ ಸಮಾನಾಂತರ ನೀರಿನ ವ್ಯವಸ್ಥೆಯಾಗಿ ರಾಷ್ಟ್ರೀಯ ಸಂಪನ್ಮೂಲವಾಗಿ ರೂಪುಗೊಂಡಿದೆ.
ತ್ಯಾಜ್ಯ, ನೀರಿನ ಸೌಕರ್ಯವೇ ಇಸ್ರೇಲಿನಲ್ಲಿ ಕೃಷಿಗೆ ಆಧಾರ. ಮೋಡ ಬಿತ್ತನೆ ಮತ್ತಿತರೆ ಆಧುನಿಕ ಪದ್ಧತಿಗಳಿಂದ ಬಲವಂತವಾಗಿ ಮಳೆ ತರಿಸುವುದು ಬಲು ದುಬಾರಿ ಎಂಬುದನ್ನು ಅರಿತು ತಾಜ್ಯ ನೀರನ್ನು (ಬಟ್ಟೆ, ಪಾತ್ರೆ ತೊಳೆದ ನೀರು, ಶೌಚಾಲಯದ ನೀರು ಇನ್ನಿತರೆ ದಿನಬಳಕೆಯ ನೀರು ಹಾಗೂ ಚರಂಡಿಯಲ್ಲಿ ಹರಿಯುವ ಮಳೆ ನೀರು) ಸಮರ್ಪಕವಾಗಿ ಬಳಸುವ ಯೋಜನೆಯನ್ನು ಜಾರಿಗೆ ತಂದರು.
ಕುಡಿಯಲು ಯೋಗ್ಯವಾದ ಸ್ವಚ್ಛ ನೀರನ್ನು ಪಡೆಯಲು ಅನುಸರಿಸುವ ವಿಧಾನಗಳು :
* ಸಮುದ್ರದ ಉಪ್ಪು ನೀರಿನ ಸಂಸ್ಕರಣೆ ಮಾಡುವುದು.* ಕೊಳವೆ ಬಾವಿಗಳಿಂದ ಲವಣ ಮುಕ್ತ ನೀರನ್ನು ಮೇಲೆತ್ತಿ ವುದು. * ಉಪ್ಪು ನೀರಿನಿಂದ ಬೆಳೆಯಬಹುದಾದ ಬೆಳೆಗಳನ್ನು ಅಭಿವೃದ್ಧಿಪಡಿಸುವುದು. * ಮಳೆ ಕೊಯ್ಲು ಮಾಡುವುದು. * ಕೊಳಚೆ ನೀರನ್ನು ಸಂಸ್ಕರಿಸಿ ವ್ಯವಸಾಯ ಕಾರ್ಯಕ್ಕೆ ಮರುಬಳಕೆ ಮಾಡುವುದು. * ಮನೆ ಬಳಕೆಯ ಮತ್ತು ಎಲ್ಲಾ ಯಂತ್ರೋಪಕರಣ ಗಳಿಗೆ ಅತೀ ಕಡಿಮೆ ನೀರನ್ನು ಬಳಸುವಂತೆ ನೋಡಿಕೊಳ್ಳುವುದು. * ನೀರು ಸೋರಿಕೆಯಾಗುವುದನ್ನು ಕಾಲ ಕಾಲಕ್ಕೆ ಪೈಪ್‌ಲೈನ್‌ಗಳನ್ನು ಬದಲಾಯಿಸುವುದು. ಸೋರಿಕೆ ಯನ್ನು ತಡೆಯುವುದು. * ಶಾಲೆಗಳಲ್ಲಿ ಮಕ್ಕಳಿಗೆ ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ಮನವರಿಕೆಯಾಗುವಂತೆ ಪಠ್ಯಕ್ರಮಗಳಲ್ಲಿ ನೀರಿನ ಪಾಠಗಳನ್ನು ಅಳವಡಿಸಿವುದು. * ನೀರಿನ ದುರ್ಬಳಕೆ ತಡೆಗಟ್ಟಲು ನೀರಿನ ದರ ಹೆಚ್ಚಿಸುವುದು. * ನೀರಿನ ಉಳಿತಾಯ ಮಾಡುವ ತಂತ್ರಜ್ಞಾನಕ್ಕೆ ಹಣಕಾಸಿನ ಸಹಾಯ ಮಾಡುವುದು. * ನೀರು ಆವಿಯಾಗುವ ಪ್ರಕ್ರಿಯೆಯನ್ನು ತಡೆಗಟ್ಟುವ ವಿಧಾನಗಳ ಆವಿಷ್ಕಾರವನ್ನು ಉತ್ತೇಜಿಸುವುದು. * ಕೃಷಿ ಕ್ಷೇತ್ರದಲ್ಲಿ ಅತಿ ಕಡಿಮೆ ನೀರಿನಲ್ಲಿ ಬೆಳಯಬಹುದಾದ ಬೆಳೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದು. * ಹನಿ ನೀರಾವರಿ ಪದ್ಧತಿ ಅಳವಡಿಸುವುದು.
ಶ್ರೀಗಳ ಚಿಂತನೆ : ತರಳಬಾಳು ಮಠವು ಸದಾಕಾಲ ಜನಸಾಮಾನ್ಯರ, ರೈತರ, ವಿದ್ಯಾರ್ಥಿಗಳ, ಸ್ತ್ರೀಯರ ಶೋಷಿತ ವರ್ಗದವರ, ಹಿಂದುಳಿತ ವರ್ಗದವರ, ಸರ್ವರು ಸಮಾನರು ಮತ್ತು ಸದ್ಧರ್ಮ ತತ್ವಗಳನ್ನು ಪ್ರತಿಪಾದಿಸುತ್ತಾ ಕಾಲಕಾಲಕ್ಕೆ ಉತ್ತಮವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಾ ಸಮಾಜದ ಗೌರವ, ಪ್ರೀತಿ ಪಾತ್ರಗಳಿಗೆ ಮಾದರಿಯಾಗಿ ಭಕ್ತರ ಉಸಿರಾಗಿದ್ದಾರೆ.
ನಾಡಿನ ಉದ್ದಗಲಕ್ಕೂ ಭೀಕರ ಬರಗಾಲ ಕಾಡುತ್ತದೆ. ರೈತಾಪಿ ವರ್ಗ ತತ್ತರಿಸಿ ಹೋಗಿದೆ. ಎಲ್ಲಿ ನೋಡಿದರೂ ನೀರಿಗೆ ಹಾಹಾಕಾರವಾಗಿದ್ದು, ಜಾನುವಾರುಗಳನ್ನು ಉಳಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಆಚರಣೆಗಳು ಸರಳವಾಗಿರಬೇಕೆಂದು ತರಳಬಾಳು ಹುಣ್ಣಿಮೆಯನ್ನು ಸರಳವಾಗಿ ಆಚರಿಸಿ, ರೈತರ ಹಿತ ಕಾಪಾಡಬೇಕೆಂಬ ಚಿಂತನೆ ಮಾಡಿ ಕೆರೆ ಕಟ್ಟೆಗಳನ್ನು ತುಂಬಿಸಿ, ಅಂತರ್ಜಲವನ್ನು ಹೆಚ್ಚಿಸಿ, ರೈತರು ಸದೃಢವಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಪಣ ತೊಟ್ಟ ಮಹಾನ್ ಸಂತರಾಗಿದ್ದಾರೆ.
ಶ್ರೀಗಳ ನೀರಾವರಿ ಯೋಜನೆಗಳು : ಉಬ್ರಾಣಿ ಏತ ನೀರಾವರಿ ಯೋಜನೆ ಫಲಪ್ರದವಾಗಿದೆ. ರಾಜನಹಳ್ಳಿ ಏತ ನೀರಾವರಿ ಯೋಜನೆ, ಜಗಳೂರು 22 ಕೆರೆಗಳು ಮತ್ತು ಭರಮಸಾಗರ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ಕುಡಿಯುವ ನೀರಿನ ಯೋಜನೆಗಳು ಪ್ರಮುಖವಾದವು. ಇಂತಹ ಯೋಜನೆಗಳನ್ನು ಯಶಸ್ಸುಗೊಳಿಸಿ ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದ ಶ್ರೀಗಳಿಗೆ ನಮನಗಳು. ಆಧುನಿಕ ಇಸ್ರೇಲ್ ಸಿಂಚಾಬ್ಲಾಸ್ ಆಗಿರುವುದು ನಮ್ಮೆಲ್ಲರ ಭಾಗ್ಯ.
ಇಂತಹ ಶ್ರೀಗಳನ್ನು ಪಡೆದ ನಾಡಿನ ಜನತೆಯ ಭಾಗ್ಯ. ಇನ್ನೂ ಯೋಜನೆಗಳು ವಿಸ್ತಾರವಾಗಲಿ ಎಂಬುದು ಜನರ ಆಶಯವಾಗಿದೆ.
ಹೆಚ್.ಎಸ್. ಹಾಲೇಶ್ ಹಂಚಿನಮನೆ, ಶಿಕ್ಷಕರು
ಮೊ. : 84960 53737