ಓಂಕಾರ ಮಂತ್ರ ವಿಶಿಷ್ಟತೆ

ಓಂಕಾರ ಮಂತ್ರ ವಿಶಿಷ್ಟತೆ

ಭೂಮಿ ಹುಟ್ಟುವ ಮೊದಲು ಮತ್ತು ಭೂಮಿ ಹುಟ್ಟಿದ ನಂತರ ಬಂದ ಮೊದಲನೆಯ ಶಬ್ಧ  ಓಂಕಾರ ನಾದ. ಇದನ್ನು ಕಾಸ್ಮಿಕ್ ಸೌಂಡ್ ಅಂತಾನು ಕರೆಯಲ್ಪಡುತ್ತಾರೆ. ಇದರ ಸೃಷ್ಟಿಯ ಮೂಲ ದೇವರು ಒಬ್ಬನೇ ಬೇರೆ ಮತ್ತೊಂದು ಇಲ್ಲ. ಆದ ಕಾರಣ ನಾನು ಎಲ್ಲರ ಮನಸಿನಲ್ಲಿ ನೆಲಸಬೇಕು ಅಂತ ಈ ಓಂಕಾರ ನಾದ ವಿಶ್ವದ ಎಲ್ಲಾ ಕಡೆ ಹರಡಿದೆ. ಈ ಓಂಕಾರ ಮಂತ್ರಕ್ಕೆ ವಿಶಿಷ್ಟತೆ ಇದೆ. ಏನೆಂದರೆ, ನಮ್ಮ ಹಿಂದೂ ಧರ್ಮದಲ್ಲಿ ಮಂತ್ರಗಳಲ್ಲಿ ಈ ಓಂಕಾರ ಶಬ್ದ ಇಲ್ಲದೆ ಯಾವ ಮಂತ್ರನು ಇಲ್ಲಾ. ಆದಕಾರಣ ಈ ಮಂತ್ರಕ್ಕೆ ತುಂಬಾನೆ ಶ್ರೇಷ್ಠತೆ ಇದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಈ ಓಂಕಾರ ಮಂತ್ರಕ್ಕೆ ಇರುವ ಶಕ್ತಿ.

1) ನಮ್ಮ ಉಸಿರಿಗೂ ಮತ್ತು ಮನಸ್ಸಿಗೂ ಸಂಪರ್ಕವಿದೆ. ನಾವು ದೀರ್ಘವಾಗಿ ನಾಭಿಯಿಂದ ಉಸಿರನ್ನು ತೆಗೆದುಕೊಂಡು ಮತ್ತು ಉಸಿರನ್ನು ಬಿಡುವಾಗ ಈ ಓಂಕಾರ ಮಂತ್ರ ಉಚ್ಛಾರಣೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಸ್ವಾದಿಷ್ಟಾನ, ಮೆಣಪುರ ಅನಾಹತ, ಆಗ್ನೇಯ, ವಿಷುದ್ಧಿ ಚಕ್ರಗಳು ಚಾಲನೆ ಆಗುತ್ತವೆ.

2) ನಮ್ಮ ಮನಸ್ಸು ಶಾಂತ ಆಗುತ್ತದೆ ಮತ್ತು ನಮ್ಮ ಮೆದುಳಿನಲ್ಲಿರುವ ಅಲ್ಫಾ ಸ್ಥಿತಿಗೆ ನಾವು ರೀಚ್ ಆಗುತ್ತೀವಿ. ಇದರಿಂದ ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಯೂರೋಪ್ ಮತ್ತು ವೆಸ್ಟನ್‌ ಕಂಟ್ರಿ ವಿಜ್ಞಾನಿಗಳು ಈ ಮಂತ್ರದ ಪ್ರಸಿದ್ಧತೆಯನ್ನು ತಿಳಿದು ಇದರ ಬಗ್ಗೆ ಸಂಶೋಧನೆ ಮಾಡಿದ ಮೇಲೆ ಅವರಿಗೆ ಗೊತ್ತಾದ ಅಂಶ ಏನೆಂದರೆ ಈ ಓಂಕಾರ ಮಂತ್ರ ಪಠಣದಿಂದ ನಮಗೆ ಸಿಗುವ ಲಾಭಗಳು. 

ಅ) ಏಕಾಗ್ರತೆ ಹೆಚ್ಚುತ್ತದೆ 

ಆ) ರಕ್ತದೊತ್ತಡ ಉತ್ತಮವಾಗಿರುತ್ತದೆ.

ಇ) ಮನಸ್ಸು ತುಂಬಾ ಶಾಂತತೆಯಿಂದಿರುತ್ತದೆ

ಈ) ದೇಹದಲ್ಲಿ ಇರುವ ಪ್ರತಿಯೊಂದು ನರ, ನಾಡಿಗಳು ಚಾಲನೆಯಲ್ಲಿರುತ್ತವೆ. 

ಉ) ನಮ್ಮ ದೇಹಕ್ಕೆ ತುಂಬಾ ಶಕ್ತಿದಾಯಕ ಭಾವನೆವುಂಟಾಗುತ್ತದೆ.

ಅಷ್ಟು ಶಕ್ತಿ ಇದೆ ಈ ಓಂಕಾರ ಮಂತ್ರಕ್ಕೆ 

ಈ ಓಂಕಾರ ಮಂತ್ರವನ್ನು ಉಚ್ಛರಿಸುವ ಸರಿಯಾದ ವಿಧಾನ

  ಕಾರ, ಊ ಕಾರ, ಮ ಕಾರ (1: 2: 3:)  (ಓಂ)

ನಮ್ಮ ಮನಸ್ಸಿನಲ್ಲಿ ಉಂಟಾಗುವ ನಕಾರಾತ್ಮಕ ಭಾವನೆಗಳು ಭಯ, ಭೀತಿ, ಆತಂಕ, ಖಿನ್ನತೆಯನ್ನು ನಿಯಂತ್ರಣ ಮಾಡಿ ಸಕಾರಾತ್ಮಕವಾಗಿ ಪರಿವರ್ತಿಸಲು ಈ ಓಂ ಮಂತ್ರ ಪಠಣೆ ರಾಮ ಬಾಣ. ನಮ್ಮ ಮೆದುಳಿನಲ್ಲಿ 4 ತರಹದ ತರಂಗಗಳು ಅಲ್ಫಾ, ಬೀಟಾ, ಗಾಮ, ತೀಟಾ ಸ್ಟೇಟ್ ಆಫ್ ಮೈಂಡ್ ಇದೆ. ಯಾವಾಗ ನಾವು ಈ ಓಂ ಮಂತ್ರ ಉಚ್ಛಾರಣೆ ಮಾಡುತ್ತೇವೋ ನಮ್ಮ ಮನಸ್ಸು ಅಲ್ಫಾ ಸ್ಟೇಟ್ ಆಫ್ ಮೈಂಡ್ ತಲುಪುತ್ತದೆ.  ಆವಾಗ ನಮ್ಮ ಮನಸ್ಸು ಶಾಂತವಾಗುತ್ತದೆ.  ಈ ಆಲ್ಫಾ ಸ್ಟೇಟ್ ಆಫ್ ಮೈಂಡ್‍ನಲ್ಲಿ ಧನಾತ್ಮಕ ದೃಢೀಕರಣಗಳನ್ನು ಹೇಳುವುದರಿಂದ ತುಂಬಾನೇ ಉಪಯೋಗ ಆಗುತ್ತದೆ. 

ಉದಾ : 1) ನಾನು ಆತ್ಮ ವಿಶ್ವಾಸದ ವ್ಯಕ್ತಿ ಆಗಿದ್ದೇನೆ. 

2) ನಾನು ಬಹಳಷ್ಟು ಹಣವನ್ನು ಹೊಂದಿದ್ದೇನೆ.

3) ನಾನು ತುಂಬಾನೆ ಆರೋಗ್ಯವಾಗಿ ಇದ್ದೇನೆ.

ಸತತ ಪ್ರತಿದಿನ ಈ ಓಂಕಾರ ಮಂತ್ರ ಪಠಣೆಯಿಂದ ಹೆಚ್ಚು ಲಾಭವನ್ನು ನಾವು ಪಡೆದುಕೊಳ್ಳಬಹುದು.  

– ಎಸ್. ಪ್ರಭು, ಮನಃಶಾಸ್ತ್ರಜ್ಞರು, ದಾವಣಗೆರೆ. 96636 66478

error: Content is protected !!