ತೋಟದ ಮಣ್ಣು ಪುನರುಜ್ಜೀವನಗೊಂಡರೆ ಉತ್ಪಾದಕತಾ ಶಕ್ತಿಯಿಂದ, ಬೇಸಿಗೆಯಲ್ಲಿ ತೋಟದ ಅಸ್ತಿತ್ವ ಉಳಿಯಲು ಸಾಧ್ಯ

ತೋಟದ ಮಣ್ಣು ಪುನರುಜ್ಜೀವನಗೊಂಡರೆ ಉತ್ಪಾದಕತಾ ಶಕ್ತಿಯಿಂದ, ಬೇಸಿಗೆಯಲ್ಲಿ ತೋಟದ ಅಸ್ತಿತ್ವ ಉಳಿಯಲು ಸಾಧ್ಯ

 ನಮ್ಮ ನಾಡಿನ ಮಣ್ಣಿಗೆ ಶತ-ಶತಮಾನಗಳ ಇತಿಹಾಸವಿದೆ. ಒಂದು ಮಿಲಿ ಮೀಟರ್ ಮಣ್ಣು ತಯಾರಾಗಲು ನೂರಾರು ವಷ೯ಗಳೇ ಬೇಕಾಗುತ್ತದೆ, ಹತ್ತಾರು ನಾಗರಿಕತೆಗಳು ಇತಿಹಾಸ ಸೇರಿ ಹೋದವು. ರಾಜ-ಮಹಾರಾಜರು ಮಣ್ಣಲ್ಲಿ ಮಣ್ಣಾಗಿ ಮಣ್ಣು ಪಾಲಾದರು. ಈ ನಾಗರಿಕ ಪ್ರಪಂಚದಲ್ಲಿ ಇನ್ನೂ ನಾವುಗಳು ನಾಗರಿಕರಾಗಿ ಬದುಕುವುದನ್ನು ಕಲಿಯುವಲ್ಲಿ ಹಿಂದೆ ಬಿದ್ದಿದ್ದೇವೆ. ಸಂಬಂಧಗಳನ್ನು ಗೌರವಿಸುವಲ್ಲಿ ಹಿಂದೆ ಉಳಿದಿದ್ದೇವೆ. ಸಂಬಂಧಗಳು ಡಾಂಭಿಕತೆಗೆ ಮೀಸಲಾಗಿವೆ, ತೋರ್ಪಡಿಕೆಗಷ್ಟೇ ಬದುಕನ್ನು ಮೀಸಲಾಗಿರಿಸಿದ್ದೇವೆ. ನಮ್ಮ ಪೂರ್ವಿಕರ ಭಾವನೆಗಳು ಮತ್ತು ಆಲೋಚನೆಗಳು ಇಂದು ಕಣ್ಮರೆಯಾಗಿವೆ. ಇವುಗಳೆಲ್ಲವುಗಳ ಮಧ್ಯೆಯೂ ನಾವುಗಳು ನೋಡುತ್ತಿರುವುದು ಹರ ಮುನಿದರೂ ಗುರು ಕಾಯುವನು ಎನ್ನುವ ಸರ್ವಕಾಲಿಕ ವಿಚಾರಧಾರೆ.

ಪರಮಪೂಜ್ಯರ ದಿವ್ಯದೃಷ್ಟಿ ಹಾಗು ಸತತ ಪರಿಶ್ರಮದ ಫಲವಾಗಿ ಇಂದು ಈ ಭಾಗದ ಎಲ್ಲಾ ಕೆರೆಗಳು ತುಂಬಿ ತುಳುಕುತ್ತಿವೆ. ಇದರ ಸದ್ಬಳಕೆಯನ್ನು ನಾವುಗಳು ಮಾಡಿಕೊಂಡರಷ್ಟೇ  ನಮ್ಮ ಮುಂದಿನ ಪೀಳಿಗೆಗೆ ಈ ಕೆರೆಗಳನ್ನು ಉಳಿಸಬಹುದು. ಇಂದು ನಾವುಗಳು ಅತಿಯಾದ ಅಂತರ್ಜಲ ಬಳಕೆಯನ್ನು ಅನಿಯಮಿತವಾಗಿ ಮಾಡುತ್ತಿ ದ್ದೇವೆ. ಇಂದು ನಮ್ಮಿಂದ ಜೀವಜಲವನ್ನು ನಿಮಾ೯ಣ ಮಾಡಲು ಸಾಧ್ಯವೆ ? ಸಾಧ್ಯವಿ ಲ್ಲವೆನ್ನುವುದಾದರೆ, ಈ ಜೀವಜಲವನ್ನು ಬಳಸಲು ನಾವು ಯೋಗ್ಯರಲ್ಲ ಎನ್ನುವುದನ್ನು ಮನಗಾಣಬೇಕಾಗಿದೆ.

ಮಠದ ಪರಮ ಭಕ್ತರಾದ ನಾವುಗಳು ಪರಮಪೂಜ್ಯರ ಆಶಯವನ್ನು ಪೂರ್ಣಗೊ ಳಿಸಬೇಕಾದರೆ ಮೊದಲು ನಾವುಗಳು ಅತಿಯಾಗಿ ಭೂಮಿಗೆ ಕನ್ನ ಹಾಕುವುದನ್ನು ನಿಲ್ಲಿಸಿ. ನಿರಂತರವಾಗಿ ಮಣ್ಣಿಗೆ ಮರುಜೀವ ನೀಡುತ್ತಾ ಹೋದರೆ, ಮಳೆಗಾಲದಲ್ಲಿ  ಪ್ರತೀ ತೋಟದಲ್ಲೂ ಜಲಧಾರೆ ಭೂಮಿ ತಾಯಿಯ ಒಡಲನ್ನು ತಲುಪುವುದರಲ್ಲಿ ಲವಲೇಶವೂ ಅನುಮಾನವಿಲ್ಲ. ರೈತ ಬಂಧುಗಳೇ, ನಾವುಗಳು ಸಮಾಜಕ್ಕೆ ಅನ್ನ ನೀಡುವ ಅನ್ನದಾತರು ಎಂಬ ಅರಿವಿರಲಿ, ಇಂದು ಬೆರಳೆಣಿಕೆಯಷ್ಟೇ ರೈತರು ಮಾತ್ರ ಮಣ್ಣಿನ ಸುಸ್ಥಿರತೆಯನ್ನು ಕಾಪಾಡಿ ಮಣ್ಣಿಗೆ ವಿಷ ನೀಡದೇ, ಒಂದಿಷ್ಟು ಸುಸ್ತಿರತೆ ಕಾಪಾಡಿ ವಿಷಮುಕ್ತ ಆಹಾರ ಉತ್ಫಾದಿಸಿ, ತಾವು ಉಪಯೋಗಿಸಿ, ಸಮಾಜಕ್ಕೂ ನೀಡುತ್ತಿದ್ದಾರೆ. ನಾವುಗಳು ಹಣ ಸಂಪಾದನೆಯ ಕಡೆ ಗಮನಹರಿಸಿ, ಅನಿಯಮಿತವಾಗಿ ರಸಗೊಬ್ಬರಗಳನ್ನು ಬಳಸಿ ಮಣ್ಣನ್ನು ಅಸ್ಥಿರಗೊಳಿಸುವುದನ್ನು ನಿಲ್ಲಿಸಿದರೆ ನಾವು ಸಮಾಜಮುಖಿಯಾಗಿದ್ದೇವೆ ಎನ್ನುವ ಹೆಮ್ಮೆಯಲ್ಲವೇ? ರೈತ ಬಂಧುಗಳೇ, ನಮ್ಮ ಕಳಕಳಿಯ ಮನವಿಯೇನೆಂದರೆ ನಿಮ್ಮ ತೋಟಗಳು ನಿರಂತರವಾಗಿ ಉತ್ತಮ ಇಳುವರಿ ಬರಬೇಕೆಂದರೆ ಮಣ್ಣಿನ ಜೀವಿಗಳನ್ನು ಸಂರಕ್ಷಿಸಿ, ರೈತನ ಮಿತ್ರನಂತಿರುವ ಎರೆಹುಳುಗಳನ್ನು ಅಭಿವೃದ್ದಿಪಡಿಸಿ. ಮಹಡಿ ಪದ್ದತಿಯ ಬೆಳೆಗಳನ್ನು ಅಭಿವೃದ್ದಿಪಡಿಸಿ. ಮಿಶ್ರಬೆಳೆಗಳು ಅಥವಾ ಉಪಬೆಳೆಗಳು ನಮಗೆ ನಿರಂತರ ಆದಾಯವನ್ನು ತಂದುಕೊಡುತ್ತವೆ.   ಮಣ್ಣಿನ ಜೀವಿಗಳಿಗೆ ಅದರ ಪಳಿಯುಳಿಕೆಗಳು ಆಹಾರವಾಗುತ್ತವೆ. ಮಣ್ಣು ಸಮೃದ್ಧತೆ ಪಡೆದುಕೊಳ್ಳುತ್ತದೆ. ಮೊದಲು ನಾವುಗಳು ರೈತ ಉದ್ಯಮಿದಾರರು ಎನ್ನುವ ಸಮೃದ್ಧವಾದ ಭಾವನೆಗಳನ್ನು ಬೆಳೆಸಿಕೊಂಡರೆ ನಮ್ಮ ಬದುಕು ಸಮೃದ್ದವಾಗುವುದು. 

ಒಂದು ಕಂಪನಿ ನಡೆಸುವ ಮಾಲೀಕನನ್ನು ನಾವುಗಳು ನೋಡಿ ಕಲಿಯುವುದಿಲ್ಲ ಎನ್ನುವುದಾದರೆ, ನಾವುಗಳು ಬದುಕಿದ್ಧರೂ ಸತ್ತಂತೆ ಎನ್ನುವುದು ಅಕ್ಷರಶಃ ಸತ್ಯವೆನಿಸುತ್ತಿದೆ. ನಿರಂತರವಾಗಿ ನಾವುಗಳು ಐದು ದಶಕಗಳ ಕಾಲ ಸಮೃದ್ಧವಾಗಿದ್ದ ಭೂಮಿ ತಾಯಿಗೆ ಅನಿವಾರ್ಯವಾಗಿ ವಿಷವುಣಿಸಿ ನಾವುಗಳೂ ವಿಷವುಂಡು ನಮ್ಮ ಮಕ್ಕಳಿಗೂ ಉಣಿಸಿ ಇದರಲ್ಲಿಯೇ ವಿಕೃತಿ ಕಾಣುತ್ತಿದ್ದೇವೆ. ಇದೆಲ್ಲವನ್ನೂ ಪ್ರೋತ್ಸಾಹಿಸುವ ಸರ್ಕಾರಗಳು ಒಂದೆಡೆಯಾದರೆ, ನಮ್ಮ ಕೃಷಿ ಸಂಶೋಧನಾ ವಿಜ್ಞಾನ ಕೇಂದ್ರಗಳ ಆವಿಸ್ಕಾರಗಳು ನೂರಾರು ಕೋಟಿ ವ್ಯಯಿಸಿದರೂ ನೂರಕ್ಕೆ ನೂರರಷ್ಟು ಭೂಮಿ ತಾಯಿಯನ್ನು ಸುಸ್ಥಿರಗೊಳಿಸಲು ಸಾಧ್ಯವಾಗುತ್ತಿಲ್ಲ. 

ಇದು ಹೀಗೆಯೇ ಮುಂದುವರೆದರೆ ಸಮಾಜದಲ್ಲಿ ರೋಗಿಗಳ ಸಂಖ್ಯೆ ಮತ್ತು ರೋಗಗಳು ವಿಜೃಂಭಿಸುತ್ತಲೇ ಹೋಗುತ್ತವೆ. ಆಸ್ಪತ್ರೆಗಳು ಹಾಗು ವೈದ್ಯರು ಪ್ರಕೃತಿಗೆ ವಿರುದ್ಧವಾಗಿ ತಮ್ಮ ಕಾಯಕವನ್ನು ಮಾಡುತ್ತಾ ಬರುತ್ತಿದ್ದಾರೆ. ಇಂದು ಈ ರೋಗಕ್ಕೆ ಔಷಧಿ ಕಂಡುಹಿಡಿದರೆ ಫುಟ್‌ಬಾಲ್‌ನಂತೆ ಮತ್ತೊಂದು ಕಾಯಿಲೆ ವಿಜೃಂಭಿಸುತ್ತದೆ. ಮನುಷ್ಯ ಪ್ರಕೃತಿಯ ಮುಂದೆ ಮಂಡಿಯೂ ರಲೇ ಬೇಕು, ಇಲ್ಲವಾದರೆ ವಿನಾಶವಾಗ ಬೇಕು, ಇದುವೇ ಪ್ರಕೃತಿ ನಿಯಮ. 

ನಾವುಗಳು ನಿರಂತರವಾಗಿ ನಮ್ಮ ಸಂಸ್ಥೆಗಳಾದ ಮೈಕ್ರೋಬಿ ಫೌಂಡೇಶನ್, ಅಗ್ರಿ ಅಂಡ್ ಹಾರ್ಟಿಕ್ಲಿನಿಕ್, ದಾವಣಗೆರೆ ಜಿಲ್ಲಾ ಸಾವಯವ ಕೃಷಿಕರ ಕಲಿಕಾ ಕೇಂದ್ರ  ಹಾಗು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಗಳ ಮುಖಾಂತರ ನಿರಂತರವಾಗಿ ದಿನಾಲು ಯುಟ್ಯೂಬ್, ಫೇಸ್ ಬುಕ್, ಗೂಗಲ್ ಮೀಟ್ ಮೂಲಕ ಕೃಷಿ / ತೋಟಗಾರಿಕೆಯ ಸುಸ್ತಿರ ಜ್ಞಾನವನ್ನು ರೈತರಿಗೆ ತಜ್ಞರ ಹಾಗು ಅನುಭವಿ ಕೃಷಿ ಮತ್ತು ತೋಟಗಾರಿಕಾ ಸಲಹೆಗಾರರ ಮೂಲಕ ಮಣ್ಣಿನ ಪುನರುಜ್ಜಿವನ ಶಿಕ್ಷಣವನ್ನು ಕಳೆದ 13 ವರ್ಷಗಳಿಂದ ಉಣಬಡಿಸುತ್ತಾ ಬರುತ್ತಿದ್ದೇವೆ. ಲಕ್ಷಾಂತರ ಮಂದಿ ಇದರ ಪ್ರಯೋಜನ ಪಡೆದರೂ ಕೃತಜ್ಞತಾಭಾವ ಇನ್ನೂ ಮರೀಚಿಕೆಯಾಗಿದೆ. 

ನಮ್ಮ ಸಂಸ್ಧೆಯ ವೈಜ್ಞಾನಿಕ ವಿಚಾರಗಳು ಮಣ್ಣಿನ ರಸಸಾರ ನ್ಯೂಟ್ರಲ್ ಮಾಡುವ ಡಾ. ಸಾಯಿಲ್ ಜೈವಿಕ ಒಳಸುರಿಗಳನ್ನು ಹಾಗು ಜೈವಿಕ ಗೊಬ್ಬರ ಬಳಸಿ, ಮಣ್ಣಿನ ಜೈವಿಕ ಶಕ್ತಿ ಹೆಚ್ಚಿಸಲು ತೋಟಗಾರಿಕೆಯಲ್ಲಿ ತ್ಯಾಜ್ಯಗಳ ಮಹತ್ವ, ಸೂಕ್ಷ್ಮಣು ಜೀವಿಗಳ ಅಭಿವೃದ್ಧಿ, ತ್ಯಾಜ್ಯಗಳ ಕಳಿಯುವಿಕೆ, ಸಾವಯವ ಇಂಗಾಲದ ಮಹತ್ವ, ಎರೆಹುಳುವಿನ ಅಭಿವೃದ್ಧಿ ನೈಸರ್ಗಿಕವಾಗಿ ಸಾರಜನಕದ ಒದಗುವಿಕೆ, ಬೆಳೆಗಳಲ್ಲಿ ಕ್ಲೋರೋಫಿಲ್ ಮಹತ್ವವೇನು, ನೀರಿನ ನಿವ೯ಹಣೆ ಹೇಗೆ  ಮಾಡಬೇಕು, ಕೊಟ್ಟಿಗೆ ಗೊಬ್ಬರಕ್ಕೆ ಸಂಸ್ಕಾರ ಕೊಡುವುದು ಹೇಗೆ, ಮಣ್ಣು ಫಲವತ್ತಾದರೆ ರೋಗ ಬಾಧೆ ಕೀಟ ಬಾಧೆ ನೈಸರ್ಗಿಕವಾಗಿ ಹೇಗೆ ನಿಯತ್ರಣವಾಗುತ್ತದೆ ಹೀಗೆ ಇನ್ನೂ ಹತ್ತಾರು ವಿಚಾರಗಳು ದಿನಾಲು ಮಂಥನವಾಗುತ್ತಿವೆ. ಸುಸ್ಥಿರ ಕೃಷಿ ಎನ್ನುವುದು ಸಮೃದ್ಧತೆಯ ಸಂಕೇತ, ಸಂಸ್ಕಾರ -ಸಂಸ್ಕೃತಿಗಳ ಸಮ್ಮಿಲನ, ಸೂಯ೯ನ ಶಕ್ತಿಯನ್ನು ನೂರಕ್ಕೆ ನೂರರಷ್ಟು ಬಳಕೆ ಮಾಡಿದರೆ, ಜೇನು ನೋಣಗಳ ಸಂತತಿ ಅಭಿವೃದ್ಧಿಯಾಗುತ್ತದೆ. 

ತೋಟಗಾರಿಕಾ ಬೆಳೆಗಳಲ್ಲಿ ಸಮೃದ್ಧ ಬದುಕು ನಮ್ಮದಾಗುತ್ತದೆ, ಜೇನು ಸಂತತಿ ಇಂದೇ ಕೊನೆಯಾದರೆ ನಾವೂ ಸಹ ಪ್ರಳ ಯದ ಅಂಚಿನಲ್ಲಿ ಇದ್ದೇವೆ ಎನ್ನುವ ಮುನ್ಸೂ ಚನೆಯನ್ನು ಪ್ರಕೃತಿ ನಮಗೆ ನೀಡುತ್ತಿದೆ. ಇಲ್ಲಿಯವರೆಗೆ ನಾವುಗಳು ನಿಮಗೆ ನೀಡಿರುವ ವಿಚಾರಗಳು ಸರಿ ಎನಿಸಿದರೆ ಒಂದಿಷ್ಟಾದರೂ ಅಳವಡಿಸಿಕೊಂಡು ಸಮೃದ್ಧ ಬದುಕು ರೂಪಿಸಿಕೊಂಡು ಇತಿಹಾಸ ಸೃಷ್ಟಿಸಿ.

-ಮಹಾದೇವಪ್ಪ ದಿದ್ದಿಗೆ,
ಮಣ್ಣು ಪುನರುಜ್ಜಿವನ ಸಲಹೆಗಾರರು, ದಾವಣಗೆರೆ. 9972699813

error: Content is protected !!