ಇಂದು ಡಾ. ನಿರ್ಮಲಾ ಕೇಸರಿ ಅವರ 9ನೇ ವರ್ಷದ ಪುಣ್ಯಸ್ಮರಣೆ
ಡಾ. ನಿರ್ಮಲಾ ಕೇಸರಿ ಮೇಡಂ ಅವರ ಬಗ್ಗೆ ಬರೆಯಬೇಕೆಂದರೆ ತುಂಬಾ ಇದೆ. ಆದರೆ ನನಗೆ ಅವರ ಜೊತೆ ಕೆಲಸ ಮಾಡುವಾಗ ಆದ ಕೆಲವು ಅನುಭವಗಳನ್ನು ಚಿಕ್ಕದಾಗಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಅವರ ಹೆಸರಿಗೆ ತಕ್ಕ ಹಾಗೆ ನಿರ್ಮಲ ಮನಸ್ಸುಳ್ಳವರಾಗಿದ್ದರು. ನರ್ಸಸ್ ಬಗ್ಗೆ ಅವರಿಗಿದ್ದ ಬಾಂಧವ್ಯ ತುಂಬ ವಿಭಿನ್ನವಾಗಿತ್ತು. ನಮ್ಮ ಜೊತೆ ಗೌರವದಿಂದ ನಡೆದುಕೊಳ್ಳುತ್ತಿದ್ದರು. ನಮಗೆ ಕೆಲಸ ಗೊತ್ತಿಲ್ಲ ಅಂದರೆ ಹೇಳಿಕೊಟ್ಟು ಕೆಲಸ ಮಾಡಿಸುತ್ತಿದ್ದರು. ನರ್ಸಸ್‌ಗೆ ರೋಗಿಯನ್ನು ನೋಡಿಕೊಳ್ಳಲು ಬೇಕಾಗಿರುವ Knowledge, Skills, Dedications & Honesty ಎಷ್ಟು ಮುಖ್ಯ ಎಂದು ಕಲಿಸಿಕೊಡುತ್ತಿದ್ದರು. ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದುವ ರೀತಿ ವಿಭಿನ್ನವಾಗಿತ್ತು. ನಮ್ಮ ಜೊತೆ ಕುಳಿತು ಮಾತನಾಡಿ, ನಮ್ಮ ತಪ್ಪು ಮನಮುಟ್ಟುವಂತೆ ಅರ್ಥ ಮಾಡಿಸುತ್ತಿದ್ದರು. ಅಲ್ಲದೆ ಕೆಲಸ ಮಾಡಲು ಉತ್ತೇಜಿಸುತ್ತಿದ್ದರು.ಇದರಿಂದ ನಮಗೆ ಚೆನ್ನಾಗಿ ಕೆಲಸ ಮಾಡಲು ಉತ್ತೇಜನ ಸಿಗುತ್ತಿತ್ತು.
ನರ್ಸಸ್‌ನ ವರ್ಕಿಂಗ್ ಸ್ಟ್ಯಾಂಡರ್ಡ್ಸ್ ಹೆಚ್ಚಿಸಿಕೊಳ್ಳಲು ಡಿಪ್ಲೋಮಾ ಟ್ರೈನ್‌ಡ್ ನರ್ಸಸ್‌ಗೋಸ್ಕರ ಟೀಚಿಂಗ್ ಪ್ರೋಗ್ರಾಂಗಳನ್ನು ಆಯೋಜಿಸಿದ್ದರು. ಎನ್‌ಐಸಿಯು, ಪಿಐಸಿಯು, ಕ್ಯಾಸ್ಯುಯಾಲಿಟಿಗಳಂತಹ ಏರಿಯಾಗಳಲ್ಲಿ ಕೆಲಸ ಮಾಡಲು ಸ್ಪೆಷಲ್ ನಾಲೆಡ್ಜ್ ಮತ್ತು ಸ್ಕಿಲ್ ಬೇಕೆಂದು ಗುರುತಿಸಿ ಮತ್ತು ಸಬ್ಜೆಕ್ಟ್‌ಗಳ ಕ್ಲಾಸ್ ಅನ್ನು ಶುರು ಮಾಡಿದರು. ಮೇಡಂ ಮತ್ತು ಇತರೆ ವೈದ್ಯರಾದ ಡಾ. ಬಾಣಾಪುರ ಮಠ, ಡಾ. ಗುರುಪ್ರಸಾದ್, ಡಾ.ಸುರೇಶ್ ಬಾಬು ಮತ್ತು ಇನ್ನಿತರೆ ವೈದ್ಯರಿಂದ ಕ್ಲಾಸಸ್ ಮಾಡಿಸುತ್ತಿದ್ದರು.
ಮೊದಲ ಬಾರಿಗೆ ದಾವಣಗೆರೆಯಲ್ಲಿ ಟ್ರೈನ್ಡ್ ನರ್ಸಸ್‌ಗೆ ಟೀಚಿಂಗ್ ಪ್ರೋಗ್ರಾಂ ಅನ್ನು ಶುರು ಮಾಡಿದ್ದು ಬಿಸಿಹೆಚ್ಐ ಅಲ್ಲಿ ಡಾ. ನಿರ್ಮಲಾ ಕೇಸರಿ ಅವರು. ಇದಲ್ಲದೇ ನರ್ಸಸ್‌ಗೆ ಹೊರಗಡೆ ಕಳುಹಿಸಿ ಟ್ರೈನಿಗ್ ಕೊಡಿಸಬೇಕೆಂದು ಪ್ರಯತ್ನಿಸುತ್ದಿದ್ದರು.
ಶ್ರೀನಗರ, ಕಾಶ್ಮೀರದಿಂದ ಮೇಡಂ ಅವರಿಗೆ ಒಂದುಪತ್ರ ಬಂದಿತ್ತು. ಅದರಲ್ಲಿ ಎನ್‌ಐಸಿಯು ಅಲ್ಲಿ ಕೆಲಸ ಮಾಡುವ ಇಬ್ಬರು ನರ್ಸಸ್‌ಗೆ ಸ್ಪೆಷಲ್ ಟ್ರೈನಿಂಗ್ ಕೊಡುತ್ತೇವೆಂದು ಬರೆಯಲಾಗಿತ್ತು. ಮೇಡಂ ಅವರು ನನಗೆ ಮತ್ತು ಶ್ರೀದೇವಿಯವರಿಗೆ ಕಳುಹಿಸಿಕೊಟ್ಟರು. ಆ ಒಂದು ಟ್ರೈನಿಂಗ್ ನನ್ನ ವೃತ್ತಿ ಜೀವನವನ್ನೇ ಚೇಂಜ್ ಮಾಡಿ ಬಿಟ್ಟಿತು. ಅಂದರೆ ನಾನು ಕಲಿಯಬೇಕಾಗಿರುವುದು ಬಹಲ ಇದೆ. ಕಲಿತು ಚೆನ್ನಾಗಿ ಕೆಲಸಮ ಮಾಡಿ ಬೇರೆಯವರಿಗೂ ಕಲಿಸಬೇಕೆಂದು ಅಂದುಕೊಂಡೆ. ನಂತರ ನರ್ಸಿಂಗ್ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಎಲ್ಲಿ ಕಾನ್ಫರೆನ್ಸ್ ನಡೆದರೂ ಭಾಗವಹಿಸುತ್ತಿದ್ದೆ.
1992ರಲ್ಲಿ ಬ್ರಿಟೀಷ್ ಕೌನ್ಸಿಲ್, ಯುನೈಟೆಡ್ ಕಿಂಗ್‌ಡಂ ಅವರಿಂದ ಕಾಮನ್ ವೆಲ್ತ್ ಕಂಟ್ರಿ ನರ್ಸಸ್‌ಗೆ ಸ್ಪೆಷಾಲಿಟಿ ಟ್ರೈನಿಂಗ್ ಕರೆದಿದ್ದರು. ಮೇಡಂ ಅವರಿಗೆ ಯು.ಕೆ.ಯಿಂದ ಪತ್ರ ಬಂದಿತ್ತು. ನನ್ನನ್ನು ಮೇಡಂ ಯುಕೆಗೆ ಕಳುಹಿಸಿಕೊಟ್ಟರು. ನಾರ್ತನ್ ಐರ್ಲೆಂಡ್‌ನಲ್ಲಿ ಒಂದುವರ್ಷಕ್ಕಾಗಿ ಪ್ಲೇಸ್‌ಮೆಂಟ್ ದೊರಕಿತು. ಈ ಟ್ರೈನಿಂಗ್ ತುಂಬಾ ಉಪಯುಕ್ತಕರವಾಗಿತ್ತು. ಹಿಂತಿರುಗಿದ ನಂತರ nenatal unit ಅಲ್ಲಿ ಕೆಲಸ ಮಾಡಲು ಮತ್ತು ಇತರೆ ನರ್ಸಸ್‌ಗೆ ಕಲಿಸಿಕೊಡಲು ತುಂಬಾ ಉಪಯೋಗವಾಯಿತು.
ಬಿಸಿಹೆಚ್ಐ ಓಪನ್ ಆದ ಮೇಲೆ ಕೆಲ ವರ್ಷಗಳ ನಂತರ ಡಾ. ಗುರುಪ್ರಸಾದ್ ಅವರು ಡಿ.ಎಂ. ನ್ಯೂನಾಟಾಲಜಿ ಮುಗಿಸಿ ಬಂದಿದ್ದರು. ಮೇಡಂ ಅವರ ಅಡ್ವೈಸ್ ಮತ್ತು ಸಪೋರ್ಟ್, ಮೋಟಿವೇಷನ್‌ನಿಂದ ಹೊಸ ಮೆಂಡಲ್ ನ್ಯೂನಟಾಲ್ ಯುನಿಟ್ ಅಲ್ಲಿ ಡಾ. ಗುರುಪ್ರಸಾದ್ ಅವರ ಜೊತೆಯಲ್ಲಿ ಕೆಲಸ ಮಾಡಲು ನನಗೆ ಸಿಕ್ಕ ಟ್ರೈನಿಂಗ್ ತುಂಬಾ ಉಪಯುಕ್ತವಾಯಿತು. ಮೇಡಂ ಅವರು ನನ್ನನ್ನು ಟ್ರೈನಿಂಗ್‌ಗೆ ಕಳುಹಿಸಿಕೊಟ್ಟ ಉದ್ದೇಶ ಉಪಯೋಗವಾಯಿತು. ಇದರಿಂದಾಗಿ ನನ್ನ ವೃತ್ತಿ ಜೀವನದಲ್ಲಿ ಮುನ್ನಡೆಯಲು ಸಾಧ್ಯವಾಯಿತು. ಇದೆಲ್ಲವೂ ಡಾ. ನಿರ್ಮಲಾ ಕೇಸರಿ ಮೇಡಂಗೆ ಸೇರ ಬೇಕಾದ ಮನ್ನಣೆ.
ಮೇಡಂ ಅವರು ಬಾಪೂಜಿ ನರ್ಸಿಂಗ್ ಕಾಲೇಜು ಇನ್‌ಚಾರ್ಜ್ ಆಗಿದ್ದರು. ಕರ್ನಾಟಕದ ಇತರೆ ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜುಗಳಿಂದ ವಿದ್ಯಾರ್ಥಿಗಳು ಪೀಡಿಯಾಟ್ರಿಕ್ ನರ್ಸಿಂಗ್ ಪೋಸ್ಟಿಂಗ್‌ಗೆ ಬರುತ್ತಿದ್ದರು. ಡಾ. ನಿರ್ಮಲಾ ಕೇಸರಿ ಅವರು ಟ್ರೈನಿಂಗ್ ಪ್ರೋಗ್ರಾಂ ಅನ್ನು ಆಯೋಜಿಸುತ್ತಿದ್ದರು. ಈ ಟ್ರೈನಿಂಗ್ ಪ್ರೋಗ್ರಾಂ ಇಷ್ಟುವರ್ಷದಿಂದ ಈಗಿನವರೆಗೂ ನಡೆಯುತ್ತಾ ಇದೆ.
ಬಿಸಿಹೆಚ್‌ಐನಲ್ಲಿ ಸ್ಟೇಟ್ ಲೆವೆಲ್ ನರ್ಸಿಂಗ್ ಕಾನ್ಫೆರನ್ಸ್ ಗಳನ್ನು ಮೇಡಂ ಆಯೋಜಿಸುತ್ತಿದ್ದರು ಇದನ್ನೆಲ್ಲಾ ವಿಚಾರಿಸಿ ನೋಡಿದಾಗ ನಿರ್ಮಲಾ ಕೇಸರಿ ಅವರಿಗೆ ನರ್ಸಸ್‌ಗೆ ಕಲಿಸಲು ಎಷ್ಟು ಆಸಕ್ತಿ ಇತ್ತು ಎಂದು ಗೊತ್ತಾಗುತ್ತದೆ. ಏಕೆಂದರೆ ರೋಗಿಯ ಆರೈಕೆ ಮಾಡಲು ನರ್ಸಿಂಗ್ ಕೇರ್ ಬಹಳ ಮುಖ್ಯವಾಗಿತ್ತು.
ಕೊನೆಯದಾಗಿ ಮೇಡಂ ಅವರು ಹೇಳುತ್ತಿದ್ದ ಒಂದು ನುಡಿಮುತ್ತನ್ನು ಹೇಳಲು ಬಯಸುತ್ತೇನೆ.
ನರ್ಸಸ್ ಮೆಕ್ಯಾನಿಕಲ್ ಆಗಿ ಕೆಲಸ ಮಾಡದೇ ಹೃದಯ ಪೂರ್ಕವಾಗಿ ಕೆಲಸ ಮಾಡಬೇಕು. ಅಂದರೆ ಮೆಕ್ಯಾನಿಕ್ಸ್ ಮತ್ತು ಟೆಕ್ನಿಷಿಯನ್ಸ್ ಮೆಷೀನ್‌ಗಳ ಜೊತೆ ಕೆಲಸ ಮಾಡುತ್ತಾರೆ. ಆದರೆ ಅವುಗಳಿಗೆ ನೋವು, ಸಂಕಟ, ಭಾವನೆಗಳು, ಜೀವ ಇರುವುದಿಲ್ಲ. ಆರೆ ನಾವು ಕೂಡಾ ಕಾಂಪ್ಲೆಕ್ಸ್ ಮಷೀನ್ ಜೊತೆ ಕೆಲಸ ಮಾಡುತ್ತೇವೆ. (ಹ್ಯೂಮನ್ ಬಾಡಿ). ಇದಕ್ಕೆ ನೋವು, ಸಂಕಟ, ಭಾವನೆ, ಜೀವ ಮತ್ತು ಕುಟುಂಬವಿರುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದರು.
– ಶ್ರೀಮತಿ ಎ.ಟಿ. ಸರ್ವಮಂಗಳ, ನಿವೃತ್ತ ಶುಶ್ರೂಷಕ ಅಧಿಕಾರಿ, ಬಾಪೂಜಿ ಮಕ್ಕಳ ಆಸ್ಪತ್ರೆ, ದಾವಣಗೆರೆ