ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಆಲೂರು ಆಸ್ಪತ್ರೆಯಿಂದ ಇಂದಿನಿಂದ ಹತ್ತಾರು ಕಾರ್ಯಕ್ರಮ
1991 ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ (IDF) ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO) ಇವರ ಸಯುಕ್ತ ಆಶ್ರಯದಲ್ಲಿ ಒಂದು ತೀರ್ಮಾನಕ್ಕೆ ಬಂದಿದ್ದರು, ಏನೆಂದರೆ ಪ್ರತಿ ವರ್ಷ ನವೆಂಬರ್ 14ನೇ ತಾರೀಖು ಮಹಾನ್ ವಿಜ್ಞಾನಿ ಡಾ|| ಫೆಡ್ರಿಕ್ ಬೆಂಟಿಂಗ್ ಅವರು 1922ನೇ ಇಸವಿಯಲ್ಲಿ ಇನ್ಸುಲಿನ್ ಎಂಬ ಗ್ರಂಥಿಯನ್ನು ಕಂಡು ಹಿಡಿದ ವಿಜ್ಞಾನಿ. ಇವರ ಜನ್ಮ ದಿನವಾದ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಬೇಕೆಂದು ಘೋಷಿಸಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಕ್ಕರೆ ಕಾಯಿಲೆ ಬಗ್ಗೆ ಅರಿವು ಮೂಡಿಸುವುದು, ತಿಳುವಳಿಕೆ ಮೂಡಿಸುವುದು, ಹಾಗೂ ಗುಣ ಲಕ್ಷಣಗಳನ್ನು ತಿಳಿಸುವು ದು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವ ಕ್ರಮಗಳನ್ನು ತಿಳಿಸುವುದು
ಸಕ್ಕರೆ ಕಾಯಿಲೆಯು ಒಂದು ಗಂಭೀರವಾದ ಆರೋಗ್ಯ ತೊಂದರೆ, ಈ ವಿಶ್ವದಲ್ಲಿ ಕೋಟ್ಯಾನು ಕೋಟಿಗಟ್ಟಲೇ ಜನರಿಗೆ ಕಾಣಿಸಿಕೊಳ್ಳುತ್ತಿದೆ. ಪ್ರತಿ 3-5 ವರ್ಷದಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ WHO ಹಾಗೂ IDF ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಸೂಚಿಸುತ್ತದೆ. ಅಂಕಿ- ಅಂಶಗಳ ಪ್ರಕಾರ ಹಾಗೂ ಭಾರತ ದೇಶದಲ್ಲಿ ಅತ್ಯುನ್ನತ ಸಂಶೋಧನಾ ಕೇಂದ್ರವಾದ ಐ.ಸಿ.ಎಮ್.ಆರ್, ಪ್ರಕಾರ ಈಗಾಗಲೇ ಭಾರತ ದೇಶದಲ್ಲಿ 2023 ರಲ್ಲಿ ಒಂದು ಕೋಟಿ ಸಕ್ಕರೆ ಕಾಯಿಲೆ ಉಳ್ಳವರಾಗಿರುತ್ತಾರೆ. ಇದು ವಿಶ್ವದಲ್ಲೆ ಅತೀ ಹೆಚ್ಚಿನ ಅಂಕಿ ಅಂಶಗಳಾಗಿರುತ್ತವೆ. ಆದ ಕಾರಣಕ್ಕಾಗಿ ಭಾರತ ದೇಶವನ್ನು ವಿಶ್ವದಲ್ಲಿ `ಸಕ್ಕರೆ ಕಾಯಿಲೆ ತವರು ಮನೆ’ ಎಂದು ಪರಿಗಣಿಸಲಾಗುತ್ತಿದೆ. ಭಾರತ ದೇಶದ ಸಕ್ಕರೆ ಕಾಯಿಲೆಯ ಅಂಕಿ-ಅಂಶಗಳ ಪ್ರಕಾರ ದಕ್ಷಿಣ ಭಾಗವು ಉತ್ತರ ಭಾಗಕ್ಕಿಂತ ಹೆಚ್ಚಿನ ಅಂಶದಲ್ಲಿ ಸಕ್ಕರೆ ಕಾಯಿಲೆ ಪ್ರಮಾಣವು ಕಂಡು ಬರುತ್ತಿದೆ. ಹಾಗಾದರೇ ಈ `ಸಕ್ಕರೆ ತವರುಮನೆ’ ಎಂಬುವ ನಾಮಾಂಕಿತವು ದಕ್ಷಿಣ ಭಾರತದವರಿಗೆ ಅನ್ವಯಿಸುತ್ತದೆ.
2006 ನೇ ಇಸವಿ ಯು.ಎಸ್.ಎ ಸಕ್ಕರೆ ಕಾಯಿಲೆ ದಿನಾಚಾರಣೆಯಲ್ಲಿ ಭಾಗವಹಿಸುವ ಮೂಲಕ ಸಕ್ಕರೆ ಕಾಯಿಲೆ ದಿನಾಚಾರಣೆಯಲ್ಲಿ ನೀಲಿ ‘ಬಣ್ಣದ ವೃತ್ತ’ ಸೂಚಿಸುವ ಮೂಲಕ ನಾವೆಲ್ಲರೂ ಒಂದಾಗಿ ಸಕ್ಕರೆ ಖಾಯಿಲೆ ವಿರುದ್ಧ ಹೋರಾಟ ಮಾಡುವ ಚಿಹ್ನೆಯನ್ನಾಗಿ ಪರಿಗಣಿಸಲಾಗುತ್ತದೆ. ಪ್ರತಿ ವರ್ಷದ ಐ.ಡಿ.ಎಫ್ ಹಾಗೂ ಡಬ್ಲ್ಯೂ.ಹೆಚ್.ಓ ಸಂಯುಕ್ತ ಘೋಷಣೆಯನ್ನು ಸೂಚಿಸು ತ್ತದೆ. ಅದೇ ರೀತಿ ಈ ವರ್ಷದ 2024 -2026 ರವರೆಗೆ ಘೋಷಣೆ `ಸಕ್ಕರೆ ಕಾಯಿಲೆ ಹಾಗೂ ಯೋಗಕ್ಷೇಮ’.
ಎ.ಸಿ.ಎಂ ಆಸ್ಪತ್ರೆ ಹಾಗೂ ಟ್ರಸ್ಟ್ ವತಿಯಿಂದ ಕಳೆದ 40 ವರ್ಷಗಳಿಂದ ಸತತವಾಗಿ ವಿಶ್ವ ಮಧುಮೇಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯೂ ಸಹ ದಿ. ಆಲೂರು ಚಂದ್ರಶೇಖರಪ್ಪ ಹಾಗೂ ದಿ. ಶ್ರೀಮತಿ ಸುನಂದಮ್ಮ ಆಲೂರು ಚಂದ್ರಶೇಖರಪ್ಪ ಇವರ ಜ್ಞಾಪಕಾರ್ಥವಾಗಿ 40 ನೇ ವಿಶ್ವ ಮಧುಮೇಹ ಮೇಳ ಕಾರ್ಯಕ್ರಮವನ್ನು ಆಲೂರು ಆಸ್ಪತ್ರೆಯ ಆವರಣದಲ್ಲಿ ದಿನಾಂಕ 17-11-2024 ರಂದು ಹಮ್ಮಿಕೊಳ್ಳಲಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚಿನ ಜನರಿಗೆ ಸಕ್ಕರೆ ಕಾಯಿಲೆ ಬಗ್ಗೆ ಮಧುಮೇಹ ಮೇಳ ವತಿಯಿಂದ ತಿಳಿಸಿಕೊಡಲಾಗಿದೆ. ಇನ್ನು 1 ಲಕ್ಷ ಜನರಿಗೆ ಸಕ್ಕರೆ ಕಾಯಿಲೆ ಬಗ್ಗೆ ಮಾಹಿತಿಯನ್ನು ಕ್ಯಾಂಪ್ ವತಿಯಿಂದ ಕೊಡಲಾಗಿದೆ.
ಆಲೂರು ಆಸ್ಪತ್ರೆಯಲ್ಲಿ ಕಾರ್ಯಕ್ರಮಗಳು: ರಕ್ತದಲ್ಲಿನ ಸಕ್ಕರೆ ಪ್ರಮಾಣದ ಉಚಿತ ತಪಾಸಣೆ, ಸಕ್ಕರೆ ಕಾಯಿಲೆ ಬಗ್ಗೆ ಆಪ್ತ ಸಮಲೋಚನೆ, ಸಕ್ಕರೆ ಕಾಯಿಲೆಗೆ ದೈನಂದಿನ ಚಟುವಟಿಕೆಗಳು ಹಾಗೂ ದೇಹವನ್ನು ದಂಡಿಸುವ ಬಗ್ಗೆ ಉಪನ್ಯಾಸ, ಸಕ್ಕರೆ ಕಾಯಿಲೆ ಆಹಾರದ ಮಾಹಿತಿ – ಆಹಾರ ತಜ್ಞರಿಂದ, ಸಕ್ಕರೆ ಕಾಯಿಲೆಯವರು ಸಂಪೂರ್ಣವಾಗಿ ತ್ಯಜಿಸಬೇಕಾದ ಆಹಾರದ ಪಟ್ಟಿ, ಸಕ್ಕರೆ ಕಾಯಿಲೆಯವರು ತೊಂದರೆಯಲ್ಲಿದ್ದಾಗ ಅನುಸರಿಸಬೇಕಾದ ಅತೀ ಮುಖ್ಯವಾದ ಮಾಹಿತಿ ತಜ್ಞ ವೈದ್ಯರಿಂದ, ಸಕ್ಕರೆ ಕಾಯಿಲೆ ಉಳ್ಳವರ ಪಾದಗಳ ಸಂರಕ್ಷಣೆ ಹಾಗೂ ಕ್ರಮಗಳು, ಇನ್ಸುಲಿನ್ ಯಾಕೆ, ಹೇಗೆ, ಯಾರು, ಉಪಯೋಗಿಸುವುದು ತಜ್ಞರಿಂದ ಮಾಹಿತಿ, ಇನ್ಸುಲಿನ್ ತೆಗೆದುಕೊಳ್ಳುವಾಗ ಅತೀ ಮುಖ್ಯವಾದ ಅಂಶಗಳು, ಸಕ್ಕರೆ ಕಾಯಿಲೆಯವರ ಬಂಜೆತನ ನಿವಾರಣೆಗೆ ತಜ್ಞರಿಂದ ಮಾಹಿತಿ, ಸಕ್ಕರೆ ಕಾಯಿಲೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ತಟ್ ಅಂತ ಹೇಳಿ ಸ್ಪರ್ಧೆ, ಸಕ್ಕರೆ ಕಾಯಿಲೆಯವರಿಂದ ಅನಿಸಿಕೆ ಹಾಗು ಅನುಭವ ಮುಕ್ತ ಸಂಭಾಷಣೆ, ಸಕ್ಕರೆ ಕಾಯಿಲೆ ಮಕ್ಕಳಿಗೆ ಉಚಿತವಾಗಿ ಇನ್ಸುಲಿನ್ ಮತ್ತು ರಕ್ತ ಪರೀಕ್ಷೆ ಮಾಡುವ ಗ್ಲುಕೋ ಮೀಟರ್ ವಿತರಣೆ.
ಆಲೂರು ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ಮಕ್ಕಳಿಗೆ ಕನ್ಸಲ್ಟೇಷನ್ ಇಲ್ಲದೇ ಚಿಕಿತ್ಸೆ ನೀಡಲಾಗುತ್ತದೆ. ಸಕ್ಕರೆ ಕಾಯಿಲೆ ಮಕ್ಕಳಿಗೆ ಘೋಷಣೆ ಹಾಗೂ ತೊಂದರೆಯಾಗಿದ್ದಲ್ಲಿ ಅಂತಹ ಮಕ್ಕಳನ್ನು (ಗಂಡು ಮಕ್ಕಳು) ಉಚಿತ ಊಟ, ವಸತಿ, ಬಟ್ಟೆ ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿಗಳನ್ನು ಆಲೂರು ಆಸ್ಪತ್ರೆ ಟ್ರಸ್ಟ್ ವತಿಯಿಂದ ನಮ್ಮ ತಂದೆ-ತಾಯಿ ಅವರ ಜ್ಞಾಪಕಾರ್ಥವಾಗಿ ನೀಡಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಹತ್ತು ಹಲವು ಸಕ್ಕರೆ ಕಾಯಿಲೆವುಳ್ಳ ಮಕ್ಕಳು ದೊಡ್ಡ ದೊಡ್ಡ ಉನ್ನತ ಹುದ್ದೆ ಹಾಗೂ ಇಂಜಿನಿಯರ್ಗಳು ಆಗಿರುತ್ತಾರೆ. ಇವರಲ್ಲಿ ಒಬ್ಬ ಮಧುಮೇಹಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಂಶೋಧಕರ ಪದಕ ಪಡೆದಿರುತ್ತಾನೆ. ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಸಕ್ಕರೆ ಕಾಯಿಲೆಗೆ ಉಚಿತ ನೂರಾರು ಕ್ಯಾಂಪ್ಗಳನ್ನು ಕರ್ನಾಟಕದಾದ್ಯಂತ ಟ್ರಸ್ಟ್ ವತಿಯಿಂದ ಕಲ್ಪಿಸಲಾಗಿದೆ. ಆಲೂರು ಟ್ರಸ್ಟ್ ವತಿಯಿಂದ ಸಕ್ಕರೆ ಕಾಯಿಲೆ ಮಕ್ಕಳಿಗೆ ವಧು-ವರ ಅನ್ವೇಷಣಾ ಕೇಂದ್ರದಿಂದ ಹಲವರಿಗೆ ಕಂಕಣ ಭಾಗ್ಯ ಕಲ್ಪಿಸಲಾಗಿದೆ. ಅಂತಹ ತಂದೆ-ತಾಯಿಯವರಿಗೆ ಜನಿಸಿದ ಮಕ್ಕಳೊಂದಿಗೆ ಚಿಕಿತ್ಸೆಗೆ ಬರುತ್ತಾರೆ.
– ಡಾ. ಆಲೂರು ಮಂಜುನಾಥ್,
ಸಕ್ಕರೆ ಕಾಯಿಲೆ ತಜ್ಞರು, ದಾವಣಗೆರೆ.