ನವ ರಾತ್ರಿ ನವ ವರ್ಣ ನವ ದುರ್ಗೆ ವೈಶಿಷ್ಟ್ಯತೆ

ನವ ರಾತ್ರಿ ನವ ವರ್ಣ ನವ ದುರ್ಗೆ ವೈಶಿಷ್ಟ್ಯತೆ

ಹಿಂದೂ ಧರ್ಮದಲ್ಲಿ ನವರಾತ್ರಿ ಒಂದು ವಿಶೇಷವಾದ ಪವಿತ್ರವಾದ ದೊಡ್ಡ ಹಬ್ಬ. ನವರಾತ್ರಿಯಲ್ಲಿ ದುರ್ಗಾ ದೇವಿ ಒಂಭತ್ತು ದಿನಗಳು ಭುವಿಗೆ ಬಂದು ಭಕ್ತರನ್ನು ಅನುಗ್ರಹ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ. ಈ ಒಂಭತ್ತು ದಿನಗಳು ವಿವಿಧ ರೂಪಗಳಿಂದ ದುರ್ಗೆಯನ್ನು ಪೂಜಿಸಲಾಗುತ್ತದೆ. ನವ ಬಣ್ಣಗಳ ವಸ್ತ್ರಗಳನ್ನು ತೊಡಿಸಿ ಅಲಂಕರಿಸಲಾಗುತ್ತದೆ. ಹೀಗೆ ನವರಾತ್ರಿಯಲ್ಲಿ ನವ ದುರ್ಗೆಯರನ್ನ ನವ ವರ್ಣದ ವಸ್ತ್ರಗಳಿಂದ ಅಲಂಕರಿಸಿ ಪೂಜಿಸುವುದರಿಂದ ಭಕ್ತರ ಇಷ್ಟಾರ್ಥ ಗಳು ಈಡೇರುತ್ತವೆ ಎಂದು ನಂಬಿಕೆ

– ಮೊದಲ ದಿನ ಶೈಲಾಪುತ್ರಿ ಇವಳು ಹಳದಿ ಬಣ್ಣ ಪ್ರಿಯಳು ಸಕಲ ದುರಿತಗಳ ಕಳೆಯುವಳು ಭಕ್ತಿಯಿಂದ ಪೂಜಿಸಲು ಒಲಿಯುವ ದೇವಿ 

– ಎರಡನೇ ದಿನ ಬ್ರಹ್ಮ ಚಾರಿಣಿ ದೇವಿ ಬರುವಳು ಇವಳು ಹಸಿರು ವಸ್ತ್ರ ಧಾರಿಣಿ, ಶ್ವೇತ ವರ್ಣ ಪ್ರಿಯೆ. ಇವಳು ಭಕ್ತಿಯಲಿ ಆರಾಧಿಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ಸದಾ ನೆಲೆಗೊಳ್ಳು ವಂತೆ ಮಾಡುವಳು 

– ಮೂರನೇ ದಿನ ಚಂದ್ರ ಘಂಟಾ ದೇವಿಯ ಆರಾಧನೆ ಮಾಡಬೇಕು. ಇವಳು ದುಷ್ಟರ ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವಳು ನಮ್ಮ ಮನಸ್ಸಿನಲ್ಲಿ ತುಂಬಿರುವ ಕಾಮ, ಕ್ರೋಧಾದಿ ಕಲ್ಮಶ ಗಳನ್ನು ಓಡಿಸಿ ನಮ್ಮ ಇಷ್ಟಾರ್ಥ ಗಳನ್ನು ಸಲ್ಲಿಸುವಳು ಇವಳು ಬೂದು ರಂಗಿನ ಪ್ರಿಯಳು ಬೂದು ವಸ್ತ್ರ ದಿಂದ ಅಲಂಕರಿಸಿ ಪೂಜಿಸಬೇಕು.

– ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಕಿತ್ತಳೆ ಬಣ್ಣ ಪ್ರಿಯೆ ಇವಳು ಭಕ್ತರ ಅಭೀಷ್ಟ ಈಡೇರಿಸಿ ಸಕಲ ಪಾಪಗಳ ಕಳೆವಳು 

– ಐದನೇ ದಿನ ಕಾರ್ತಿಕೇಯನ ತಾಯಿ ಸ್ಕಂದ ಮಾತೆ ಬರುವಳು. ಇವಳು ಬಿಳಿ ವರ್ಣ ಪ್ರಿಯಳು ಆರ್ತರಾಗಿ ಮೊರೆ ಹೋದವರನ್ನು ಬಿಡದೆ ರಕ್ಷಿಸುವಳು 

– ಆರನೇ ದಿನ ಕಾಳ ರಾತ್ರ ದೇವಿ ಕಾಳಿಯಾಗಿ ಅಸುರರ ಮರ್ದಿಸಿದ ತಾಯಿ ಇವಳು. ಇವಳಿಗೆ ಕೆಂಪು ವರ್ಣ ಬಹು ಇಷ್ಟ. ಇವಳನ್ನು ಬೂದು ವರ್ಣದ ವಸ್ತ್ರ ದಿಂದ ಅಲಂಕರಿಸಿ ಪೂಜಿಸಬೇಕು 

– ಏಳನೇ ದಿನ ಲಲಿತಾ ಮಾತೆ ನೀಲಿ ಬಣ್ಣ ಪ್ರಿಯಳು ಶಾಂತಿ ಪ್ರಿಯಳು ಭಕ್ತಿಯಿಂದ ಪೂಜಿಸಿದರೆ ಶೀಘ್ರ ಒಲಿಯುವ ದುರ್ಗೆ ಕಾರುಣ್ಯ ಮೂರ್ತಿ ಇವಳು 

– ಎಂಟನೇ ದಿನ ಮಹಾಗೌರಿಯ ರೂಪದಲ್ಲಿ ದುರ್ಗೆ ಬರುವಳು. ಇವಳು  ಗುಲಾಬಿ ವರ್ಣ ಪ್ರಿಯೆ ಶಿವನಿಂದ ಕಪ್ಪು ಬಣ್ಣವನ್ನು ಸ್ವಚ್ಚ ಗೊಳಿಸಿಕೊಂಡವಳು ಗುಲಾಬಿ ಬಣ್ಣ ಇವಳಿಗೆ ಇಷ್ಟವಾದ ವರ್ಣ 

– ಒಂಭತ್ತನೇ ದಿನ ಸಿದ್ಧಿ ದಾತ್ರಿ ದೇವಿ ನೇರಳೆ ವರ್ಣ ಇವಳಿಗೆ ಪ್ರಿಯವಾದ ಬಣ್ಣ 

ಹೀಗೆ ದುರ್ಗಾದೇವಿಯನ್ನು ನವ ವಿಧ ಅಲಂಕಾರದಲ್ಲಿ ನವ ವಿಧ ಭಕ್ತಿಯಿಂದ ಪೂಜಿಸಬೇಕು. ನವ ವಿಧದ ನೈವೇದ್ಯ ನೀಡಿ ಭಕ್ತಿಯಿಂದ ಪೂಜಿಸಲು ಶೀಘ್ರ ಒಲಿಯುವಳು ಕೆಲವು ಕಡೆ ಒಂಭತ್ತು ಉಪವಾಸ ಮಾಡಿ ಪೂಜಿಸುವ ಪದ್ಧತಿಯು ಇದೆ 

ಇದು ನಾಡ ಹಬ್ಬ ಆಗಿರುವುದರಿಂದ ಸುಂದರ ನಗರ ಮೈಸೂರಿನಲ್ಲಿ ದಸರಾ ಉತ್ಸವ ನಡೆಯುವುದು. ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕೂಡಿಸಿ ಮೆರವಣಿಗೆ ಮಾಡುವರು

ಕಣ್ಣಿಗೆ ಹಬ್ಬ ಈ ದಸರಾ ಮೆರವಣಿಗೆ. ದೇಶ-ವಿದೇಶ ಗಳಿಂದ ಇದನ್ನು ನೋಡಲು ಪ್ರತಿ ವರ್ಷ ಪ್ರವಾಸಿಗರು ಬರುವರು. ಜಗದಂಬೆಯನ್ನು ನೋಡುವುದೇ ಒಂದು ಹಬ್ಬ 

ಎಲ್ಲರ ಮನೆಗಳಲ್ಲಿ ಪಟ್ಟದ ಗೊಂಬೆ ನಾನಾ ವಿಧದ ಗೊಂಬೆಗಳನ್ನು ಇಟ್ಟು ಕಳಶ ವನ್ನು ಇಟ್ಟು ಸಂಭ್ರಮಿಸುವರು.

ತಿರುಪತಿಯಲ್ಲಿ ಒಂಭತ್ತು ದಿನವೂ ಶ್ರೀದೇವಿ, ಭೂದೇವಿ ಸಹಿತ ವೆಂಕಟೇಶ್ವರನಿಗೆ ಬ್ರಹ್ಮೋತ್ಸವ ನಡೆಯುವುದು ಒಂಭತ್ತು ದಿನವೂ ಬೇರೆ ಬೇರೆ ಅಲಂಕಾರ ಮಾಡಿ ಉತ್ಸವ ನಡೆಯುತ್ತದೆ. ಧ್ವಜಾರೋಹಣ ವಾಹನ ಅಲಂಕಾರ ಎಲ್ಲವು ಕಣ್ಮನ ತಣಿಸುತ್ತವೆ. 

ಜಗದೊಡೆಯನ ಉತ್ಸವ ನೋಡಲು ಮನೋಹರ ಬ್ರಹ್ಮನು ನಡೆಸಿದ ಈ ಉತ್ಸವವು ಇಂದಿಗೂ ಸಂಭ್ರಮದ ಉತ್ಸವ. ಈ ಪವಿತ್ರ ನಾಡ ಹಬ್ಬದಲ್ಲಿ ಎಲ್ಲರೂ ಸಂಭ್ರಮಪಡೋಣ ಸಕಲರಿಗೂ ಸನ್ಮಂಗಳವಾಗಲಿ ಎಂದು ಹಾರೈಸೋಣ.  

– ಕೋಮಲ ವಿ. ಕುಮಾರ್, ದಾವಣಗೆರೆ.

error: Content is protected !!