ಕಲ್ಪವೃಕ್ಷ ಎಂದು ಕರೆಯುವ ತೆಂಗನ್ನು ಮನುಷ್ಯ ತನ್ನ ಅನೇಕ ವಸ್ತುಗಳನ್ನು ತಂಗಿನಲ್ಲಿ ಉಪಯೋಗಿಸಿ ಕೊಳ್ಳುತ್ತಿದ್ದಾನೆ. ತಾಯಿಯ ಎದೆ ಹಾಲಿನ ನಂತರ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ತೆಂಗು ಒಳಗೊಂಡಿದೆ. ಪ್ರತಿ ವರ್ಷ ಸೆಪ್ಟಂಬರ್ 2 ರಂದು `ವಿಶ್ವ ತೆಂಗು ದಿನ’ವನ್ನಾಗಿ ಆಚರಿಸಲಾಗುತ್ತದೆ.
ತೆಂಗಿನ ಮರದಿಂದ ಆಹಾರ, ಪಾನೀಯ, ಸೌದೆ, ಮನೆ ಕಟ್ಟಲು ಮರ ಮುಟ್ಟು, ಕೈಗಾರಿಕೆಗೆ ಕಚ್ಛಾ ವಸ್ತು, ಸಿಪ್ಪೆಯ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು ಮತ್ತು ರೋಗ ನಿರೋಧಕ ಶಕ್ತಿ ಹೊಂದಿದೆ. ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮೂಳೆಗಳು ಬಲಿಷ್ಠವಾಗುತ್ತವೆ. ನಾರಿನ ವಂಶವಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ.
ನಾವು ತೆಂಗನ್ನು ಎಟಿಎಂ ಯಂತ್ರದಂತೆ ಬಳಸುತ್ತಿದ್ದು, ತೆಂಗಿನ ಕಾಯಿ ಕೆಡುತ್ತಿದ್ದೇವೆ ಹೊರತು, ಅದಕ್ಕೆ ಬೇಕಾದ ಪೋಷಕಾಂಶಗಳನ್ನು ವಾಪಸ್ ಡೆಪಾಸಿಟ್ ಮಾಡುತ್ತಿಲ್ಲ. ರಾಜ್ಯದಲ್ಲಿ 6.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ದಾವಣಗೆರೆಯಲ್ಲಿ ಸುಮಾರು 9305 ಹೆಕ್ಟೇರ್ ಪ್ರದೇಶದಲ್ಲಿ 47,602 ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತದೆ. 90 ರಷ್ಟು ಖಾದ್ಯಗಳ ತಯಾರಿಕೆ. ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ತೆಂಗಿನ ಎಣ್ಣೆ ಕೂಡ ಹಲವು ರೀತಿಯ ಉಪಯೋಗಗಳನ್ನು ಹೊಂದಿದೆ ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ.
ತೆಂಗನ್ನು ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಪ್ರದೇಶಗಳಲ್ಲಿ ಬೆಳೆಯುತ್ತಾರೆ.
ತೆಂಗಿನ ಎಣ್ಣೆ ಚರ್ಮ ಮತ್ತು ಕೂದಲಿಗೆ ಬಹಳ ಉಪಯೋಗ ಮತ್ತು ರುಚಿಕರ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ತೆಂಗಿನ ನೀರು ಬಾಯಾರಿಕೆ ತಣಿಸುತ್ತದೆ. ಚಿಪ್ಪಿನಿಂದ ಹಿಡಿದು ಹೊಟ್ಟೆಯವರಿಗೆ ಎಲ್ಲವೂ ತನ್ನದೇ ಆದ ಉಪಯುಕ್ತ ಗುಣ ಹೊಂದಿದೆ. ತೆಂಗಿನ ಎಣ್ಣೆ ಬರ್ಫಿ, ಮೇಣದ ಬತ್ತಿಗಳು, ಸಕ್ಕರೆ ಚಿಪ್ಸ್ ಮುಂತಾದವುಗಳಲ್ಲಿ ಬಳಸುತ್ತಾರೆ.
ಹೃದಯ, ಕರುಳು, ಚರ್ಮ ಆರೋಗ್ಯಕ್ಕೆ ತೆಂಗಿನ ಕಾಯಿಯೇ ಮದ್ದು ಎನ್ನುತ್ತಾರೆ. ತೆಂಗಿನ ಕಾಯಿಯ ಮೇಲೆ ಮೂರು ಗುರುತುಗಳಿದ್ದು, ಇವು ಮುಕ್ಕಣ್ಣ ಶಿವನನ್ನು ಪ್ರತಿನಿಧಿಸುತ್ತದೆ. ಇದು ಶಿವನ ಪ್ರತಿರೂಪ.
ತೆಂಗಿನಕಾಯಿ ಸ್ವಾರ್ಥ ರಹಿತ ಸೇವೆಯನ್ನು ನೀಡುತ್ತದೆ. ಗರಿಯನ್ನು ಮನೆಯ ಮೇಲ್ಭಾಗದ ಚಾವಣಿಗೆ ಮತ್ತು ಚಾಪೆ ತಯಾರಿಸಲು. ಕೊಬ್ಬರಿಂದ ಎಣ್ಣೆ, ಸೋಪು, ತಿಂಡಿ ತಯಾರಿಕೆ, ನಾರನ್ನು ಪಾತ್ರೆ ತೊಳೆಯಲು ಉಪಯೋಗಿಸುತ್ತಾರೆ. ಕೊಬ್ಬರಿ ಮೆದುಳಿನ ಚೈತನ್ಯಕ್ಕೆ, ದೇಹದ ಕಾಂತಿಗೆ, ಚರ್ಮ ಪೋಷಣೆಗೆ, ಕೂದಲು ಅಭಿವೃದ್ಧಿಗೆ, ನೆನಪಿನ ಶಕ್ತಿಗೆ, ಹೃದ್ರೋಗ ಶಮನವಾಗಲು, ರೋಗ ನಿರೋಧಕ ಶಕ್ತಿ ವೃದ್ಧಿ, ಪಚನ ಕ್ರಿಯೆಗೆ ಎಳೆನೀರು ಚೈತನ್ಯದಾಯಕ ವಸ್ತುವಾಗಿದೆ.
ರೈತರ ದೃಷ್ಟಿ ಬದಲಾಗಬೇಕಾಗಿದ್ದು, ತೆಂಗಿನ ಉತ್ಪನ್ನಗಳನ್ನ ಬಳಸುವುದನ್ನು ಕಲಿಯಬೇಕಾಗಿದೆ. ತೆಂಗಿನ ಬೆಳೆ ಕಡಿಮೆಯಾಗಲು ರೋಗ ಮತ್ತು ಕೀಟಗಳ ಹಾವಳಿ, ಬೆಲೆಯ ಅಸ್ಥಿರತೆ, ಉಪ ಉತ್ಪನ್ನ ಮತ್ತು ಮೌಲ್ಯ ವರ್ಧನೆ ಕೊರತೆ, ಪೋಷಕಾಂಶಗಳ ಅಸಮರ್ಪಕ ನಿರ್ವಹಣೆ, ಕಾರ್ಮಿಕರ ಕೊರತೆ, ಉತ್ತಮ ಗುಣಮಟ್ಟದ ಸಸಿಗಳ ಅಲಭ್ಯತೆ ಮತ್ತು ಅಡಿಕೆಯ ಬೆಳೆಯ ವಿಸ್ತೀರ್ಣ ಹೆಚ್ಚಾಗಿರುವುದು ಕಾರಣವಾಗಿವೆ.
ಬೆಳೆಯ ಪುನರ್ ಚೇತನಕ್ಕೆ ಸರ್ಕಾರಗಳು ಅಗತ್ಯ ಯೋಜನೆಗಳನ್ನು ರೂಪಿಸಬೇಕಾಗಿದೆ. ತೋಟಗಾರಿಕೆ ಇಲಾಖೆಯಿಂದ ಗುಣಮಟ್ಟದ ಸಸಿಗಳ ಉತ್ಪಾದನೆ ಮತ್ತು ಮಾರಾಟ, ಮಣ್ಣು ಪರೀಕ್ಷೆಯ ಆಧಾರದಲ್ಲಿ ಪೋಷಕಾಂಶಗಳ ನಿರ್ವಹಣೆ, ಹನಿ ನೀರಾವರಿಗೆ ಪ್ರೋತ್ಸಾಹ ಮತ್ತು ತೆಂಗಿನ ಬೆಳೆಯಲ್ಲಿ ಮಿಶ್ರ ಬೆಳೆಗಳಿಗೆ ಉತ್ತೇಜನ, ರೈತ ಉತ್ಪಾದಕ ಕಂಪನಿಗಳ ಮೂಲಕ ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಅವಕಾಶ, ತೆಂಗಿನ ಕಾಯಿ ಕೀಳುವ ತರಬೇತಿ ಹೆಚ್ಚಿಸುವುದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೆಂಗಿನ ನಾರಿನ ಉತ್ಪನ್ನಗಳ ಕೈಗಾರಿಕೆಗಳ ಸ್ಥಾಪನೆ ಆಗಬೇಕು.
`ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತೆ’ ಅನ್ನುವ ಗಾದೆ ಮಾತು ಕೂಡ ರೂಢಿಯಲ್ಲಿದೆ.
– ಕುಂದೂರು ಮಂಜಪ್ಪ
ಹೊಳೆಸಿರಿಗೆರೆ, ಹರಿಹರ ತಾಲ್ಲೂಕು