ಮಕ್ಕಳ ಸಿರಿ ಡಾ|| ನಿರ್ಮಲಾ ಕೇಸರಿ

ಮಕ್ಕಳ ಸಿರಿ ಡಾ|| ನಿರ್ಮಲಾ ಕೇಸರಿ

ದಿ. 08.01.2024 ರಂದು ಡಾ. ನಿರ್ಮಲಾ ಕೇಸರಿ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ

ದಾವಣಗೆರೆಯ ವೈದ್ಯಕೀಯ ಸಮುದಾಯದ ಪೂಜ್ಯ ಹಾಗೂ ಆದರ್ಶಪ್ರಾಯ ಹಿರಿಯ ಮಕ್ಕಳ ತಜ್ಞೆ, ದಿ|| ಡಾ|| ನಿರ್ಮಲಾ ಕೇಸರಿ ಮೇಡಂ ರವರು ದಿನಾಂಕ 08-01-2016ರಂದು ನಮ್ಮನ್ನು ಅಗಲಿ  ಪರಲೋಕಕ್ಕೆ ಸೇರಿದರು. 

ಅವರ ಅಸಂಖ್ಯಾತ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಒಬ್ಬನಾಗುವ ಭಾಗ್ಯವನ್ನು ಹೊಂದಿದ ನಾನು, ವೈದ್ಯಕೀಯ ಜ್ಙಾನವನ್ನು ಮಾತ್ರವಲ್ಲದೆ, ರೋಗಿಯ ಆರೈಕೆಯ ವಿಧಾನವನ್ನು ರೂಪಿಸುವಲ್ಲಿ ಮೇಡಂರವರು ಹೊಂದ್ದಿದ್ದ ಅಪಾರ ಕಾಳಜಿಯನ್ನು ಕಂಡು ಪ್ರಭಾವಿತನಾದೆ. 

ಮೇಡಂ ತಮ್ಮ ಅನುಭವ ಮತ್ತು ಪರಿಣಿತಿಯ ಸಂಪತ್ತಿ ನಿಂದ ದಾವಣಗೆರೆಯ ಮಕ್ಕಳ ತಜ್ಞರಲ್ಲಿ ಹಿರಿಯರೆಂದು ಪ್ರಖ್ಯಾತರಾದರು. ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ, ಸಹೋದ್ಯೋಗಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮಾತೃ ಸ್ವರೂಪಿಯಾಗಿದ್ದರು. ರೋಗ ಸೋಂಕಿತ ಮಕ್ಕಳ ಆರೈಕೆಯಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿದ್ದರು. 

ಡಾ|| ನಿರ್ಮಲಾ ಕೇಸರಿಯವರು ನವಜಾತ ಶಿಶುವಿನ ಬೆಳವಣಿಗೆಗೆ ತಾಯಿಯ ಸ್ತನ್ಯಪಾನದ ಮಹತ್ವವನ್ನು ತಾಯಂದಿರಲ್ಲಿ ಅರಿವು ಮೂಡಿಸಲು ಹೆಚ್ಚು ಶ್ರಮಿಸಿದರು. ಅವರು ತಾಯಂದಿರ ಪೋಷಣೆಗಾಗಿ ಪೌಷ್ಟಿಕಾಂಶದ ಮಹತ್ವವನ್ನು ಸದಾಕಾಲ ಮನವರಿಕೆ ಮಾಡಿ ಕೊಡುತ್ತಿದ್ದರು.

ಡಾ|| ನಿರ್ಮಲಾ ಕೇಸರಿಯವರು ದಾವಣಗೆರೆಯ ವೈದ್ಯ ಕೀಯ ಸಮುದಾಯದ  ಧೃವತಾರೆಯಂದೇ ಹೇಳ ಬಹುದು. ಅವರು ಮಾನವೀಯ ಮೌಲ್ಯಗಳ ಅನ್ವೇಷಣೆಯಲ್ಲಿ ಸ್ವಾಭಾವಿಕ ವಾಗಿ ಎಲ್ಲಾ ಸಮುದಾಯದ ಜನರಲ್ಲಿ ಹಾಲಲ್ಲಿ ಸಕ್ಕರೆ ಬೆರೆತಂತೆ ಅತಿ ಸುಲಭವಾಗಿ ಜನಸಾಮಾನ್ಯರಲ್ಲಿ ಬೆರೆತುಕೊಳ್ಳು ತ್ತಿದ್ದರು. ಅವರು ರೋಗಿಗೆ ಚಿಕಿತ್ಸೆಯನ್ನು ಕೊಡುವುದಲ್ಲದೆ, ರೋಗನಿರೋಧಕ ಕ್ರಮಗಳನ್ನು ಹೇಗೆ ಅನುಷ್ಠಾನ ಮಾಡುವುದು ಎಂಬುದನ್ನು ಜನರಲ್ಲಿ ಹಾಗೂ ಸಮುದಾ ಯದಲ್ಲಿ ಅವರು ಹೆಚ್ಚಿನ ಕಾಳಜಿಯನ್ನು ನಿರ್ವಹಿಸುತ್ತಿದ್ದರು. 

ಅವರ ಅತ್ಯುತ್ತಮ ವೈದ್ಯಕೀಯ ಸೇವೆಗೆ ಅನೇಕ ಸನ್ಮಾನಗಳು ಮೇಡಂರವರನ್ನು ಅರಸಿಕೊಂಡು ಹರಿದು ಬಂದವು. ಅವರ ದೃಷ್ಟಿಕೋನ ರೋಗಿಗಳ ಬಗ್ಗೆ ಮಾತ್ರವಲ್ಲದೆ, ಸಮಾಜದ ಸಮಸ್ಯೆಗಳ ಕುರಿತು ಅವರು ವಹಿಸಿದ ಮುಂದಾಳತ್ವ ಅವರ ನೈತಿಕತೆಗೆ ಪ್ರಮುಖ ಸಾಕ್ಷಾತ್ಕಾರ. 

ದಿ|| ಡಾ|| ನಿರ್ಮಲಾ ಕೇಸರಿಯವರು ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಸಹಾನುಭೂತಿ ಯಿಂದ ಹೇಗೆ ಸ್ಪಂದಿಸಬೇಕೆಂಬುದನ್ನು ದಿನನಿತ್ಯದ ನಮ್ಮ ಸ್ನಾತಕೋತ್ತರ ಅವಧಿಯಲ್ಲಿ ನಮ್ಮ ಮನಮುಟ್ಟುವಂತೆ ಜ್ಞಾನದ ಹೊಳೆಯನ್ನೇ ಹರಿಸುತ್ತಿದ್ದರು. 

ನಾವು ಅವರ ನೈತಿಕ ಮಾರ್ಗದರ್ಶನದ ನಂದಾಜ್ಯೋತಿ ಯನ್ನು ಸದಾಕಾಲ ಮುಂದಕ್ಕೆ ಸಾಗಿಸೋಣ. ಅವರ ಶೈಕ್ಷಣಿಕ ಅನ್ವೇಷಣೆಗಳು ಹಾಗೂ ದೈನಂದಿನ ಬದುಕಿನ ಪಾಠಗಳು ನಮಗೆ ಸದಾಕಾಲ ಸ್ಫೂರ್ತಿದಾಯಕವಾಗಲಿ. 


ಮಕ್ಕಳ ಸಿರಿ ಡಾ|| ನಿರ್ಮಲಾ ಕೇಸರಿ - Janathavani– ಡಾ|| ನಾಗರಾಜ್‌ ಮೈಸೂರು, (ಮಾಜಿ ಸ್ನಾತಕೋತ್ತರ ವಿದ್ಯಾರ್ಥಿ, 1992-95 ಬ್ಯಾಚ್), MBBS, MD (Paed), DCH. Prof. of Clinical Medicine and Former Chair, Department of Clinical Medicine, American University of Antigua,  West Indies.

error: Content is protected !!