ಇಂದಿನ ದಿನಮಾನಗಳಲ್ಲಿ ಅಂತರ್ಜಾಲದ ಬಳಕೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ವೇಸಾಮಾನ್ಯವಾಗಿ ಅತ್ಯವಶ್ಯ ವಾಗಿದೆ. ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ದೊಡ್ಡವರ ವ್ಯವಹಾರದವರೆಗೂ ಸುಮಾರು ಕಾರ್ಯಗಳಲ್ಲಿ ಬೇಕಾಗಿದೆ. ತಂತ್ರಜ್ಞಾನದ ಸಾಧ ನಗಳು ಹಾಗೂ ಅಂತರ್ಜಾಲವು ಇಲ್ಲದಿದ್ದಲ್ಲಿ ಇಂದಿನ ಕೆಲಸಕಾರ್ಯಗಳನ್ನು ನಿಭಾಯಿಸು ವುದು ಕಷ್ಟಾಸಾಧ್ಯದ ಮಾತಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಹೋಂ ವರ್ಕ್, ಯಾವುದೇ ಚಟುವಟಿಕೆ ಅಥವಾ ಮಾಹಿತಿಯಾದರೂ ಶಾಲೆ ಯಿಂದ ನೇರವಾಗಿ ವಾಟ್ಸಾಪ್ ಮುಖಾಂತರ ತಲುಪಿಸುವ ವ್ಯವಸ್ಥೆಗೆ ಬಂದು ತಲುಪಿರುವುದು ಯಾವುದೇ ಅತಿಶಯೋಕ್ತಿ ಏನಿಲ್ಲ. ಮಕ್ಕಳಾದರು ಮೊಬೈಲ್ ಬಳಕೆ ಮಾಡಲೇಬೇಕಾದ ಹಾಗೂ ತಂದೆ-ತಾಯಿಗಳಾದರೂ ಕೊಡಲೇಬೇಕಾದ ಪರಿಸ್ಥಿತಿ ಬಂದೊದಗಿದೆ.
ತಂತ್ರಜ್ಞಾನದ ಸಾಧನಗಳನ್ನು ಅಂತರ್ಜಾ ಲಕ್ಕೆ ಸಂಪರ್ಕಿಸಿ ಉಪಯೋಗಿಸುವಾಗ ಕೆಲವು ಬಾರಿ ಸ್ಪೈವೇರ್ ಸಾಫ್ಟ್‍ವೇರ್‍ಗಳು ನಿಮ್ಮ ಸಾಧನಗಳಲ್ಲಿ ಇನ್‍ಸ್ಟಾಲ್ ಆಗಲು ನಿಮ್ಮನ್ನು ಕೇಳುತ್ತವೆ. ಹಲವಾರು ಬಾರಿ ನಮಗೆ ಗೊತ್ತಿಲ್ಲದೆ ನಾವು ಓಕೆ ಬಟನ್ ಕ್ಲಿಕ್ಕಿಸಿ ಇನ್‍ಸ್ಟಾಲ್ ಆಗಲು ಸಮ್ಮತಿ ಸೂಚಿಸುತ್ತೇವೆ. ಈ ಸ್ಪೈವೇರ್ ಸಾಫ್ಟ್‍ವೇರ್‍ಗಳು ಒಂದು ಬಾರಿ ನಮ್ಮ ಸಾಧನಗಳನ್ನು ಸೇರಿಕೊಂಡರೆ ಆಯಿತು, ನಾವು ಮಾಡುವ ಪ್ರತೀ ಕೆಲಸ ಕಾರ್ಯದ ಮಾಹಿತಿಯನ್ನು, ನಮ್ಮ ಸಾಧನಗಳಲ್ಲಿ ಇರುವ ಎಲ್ಲಾ ತರಹದ ಫೈಲ್ಸ್‍ಗಳನ್ನು ತನ್ನ ಮಾಲೀಕನಿಗೆ ಕಳುಹಿಸುವುದು ಅದರ ಕೆಲಸವಾಗಿರುತ್ತದೆ. ಹಾಗಾಗಿ ಯಾವುದಾದರು ಸಾಫ್ಟ್‍ವೇರ್‍ಗಳನ್ನು ಅಥವಾ ಗೇಮ್ಸ್‍ಗಳನ್ನು ಇನ್‍ಸ್ಟಾಲ್ ಮಾಡುವ ಮುನ್ನ ತುಂಬಾ ಎಚ್ಚರವಿರಲಿ.
ಕೆಲವು ಬಾರಿ ನೀವು ಡೌನ್‍ಲೋಡ್ ಮಾಡುವಾಗ ಮಾಲ್‍ವೇರ್ ಸಾಫ್ಟ್‍ವೇರ್‍ಗಳು ನಿಮ್ಮ ಸಾಧನಗಳನ್ನು ಸೇರಬಹುದು. ಈ ಮಾಲ್‍ವೇರ್ ಸಾಫ್ಟ್‍ವೇರ್‍ಗಳು ನಿಮ್ಮ ಸಾಧನದ ಕಾರ್ಯವ್ಯೆಖರಿಯನ್ನೇ ಬದಲಿಸಬಹುದು. ಉದಾಹರಣೆಗೆ, ನೀವು ಯಾವುದೋ ಒಂದು ಮುಖ್ಯವಾದ ಕೆಲಸವನ್ನು ಎಂ. ಎಸ್. ವರ್ಡ್ ನಲ್ಲಿ ಟೈಪ್‍ಮಾಡಿ ಸೇವ್ ಮಾಡಿರುತ್ತೀರಾ, ನಂತರ ನೋಡಿದಾಗ ಅದು ಇಮೇಜ್ ಫಾರ್ಮಾಟ್ ಆಗಿ ಬದಲಾಗಿರುತ್ತದೆ. ಆಗ ನೀವು ನಿಮ್ಮ ಮುಖ್ಯವಾದ ಫೈಲನ್ನು ಕಳೆದುಕೊಳ್ಳುವುದಾಗುತ್ತದೆ. ಅಷ್ಟೇ ಅಲ್ಲದೆ ಈ ಮಾಲ್‍ವೇರ್ ನಿಮ್ಮ ಸಾಧನದ ಕ್ಷಮತೆಯನ್ನು ಕ್ಷೀಣಿಸುವುದಲ್ಲದೆ ಇನ್ನೂ ಅನೇಕ ತೊಂದರೆಗಳನ್ನುಂಟು ಮಾಡುತ್ತದೆ. ಹಾಗಾಗಿ ಯಾವುದಾದರು ಫ್ರೀಯಾಗಿ ಸಿಗುವ ಸಾಫ್ಟ್‍ವೇರ್ಸ್‍ಗಳು ಮತ್ತು ಫೈಲ್‍ಗಳನ್ನು ಡೌನ್‍ಲೋಡ್ ಮಾಡುವಾಗ ಮೂಲದ ಮಾಹಿತಿ ಇಲ್ಲದೆ ಡೌನ್‍ಲೋಡ್ ಮಾಡಬಾರದು ಇಲ್ಲದಿದ್ದಲ್ಲಿ ಅಪಾಯ ಖಂಡಿತಾ, ಎಚ್ಚರ.
ಕೆಲವು ವೆಬ್‍ಸೈಟ್‍ಗಳನ್ನು ಬಳಸುವಾಗ ತುಂಬಾ ಜಾಗರೂಕರಾಗಿರಬೇಕು. ಸುಮಾರು ಫೇಕ್ ವೆಬ್‍ಸೈಟ್‍ಗಳನ್ನು ಬಳಸಿ ನಿಮ್ಮ ಮುಖ್ಯವಾದ ಅಂದರೆ ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್, ಡೆಬಿಟ್ ಕಾರ್ಡ್, ಪಿನ್ ನಂಬರ್ ಇನ್ನೂ ಹಲವಾರು ಅಕೌಂಟ್ಸ್‍ಗಳನ್ನು ಹ್ಯಾಕ್ ಮಾಡಲು ಬೇಕಾದ ಎಲ್ಲಾ ಮಾಹಿತಿಯನ್ನು ನಿಮಗೆ ಗೊತ್ತಾಗದ ಹಾಗೆ ಕಲೆಹಾಕುತ್ತಾರೆ. ಇದನ್ನು ನಮ್ಮ ಸೈಬರ್ ಭಾಷೆಯಲ್ಲಿ ಫಿಷಿಂಗ್ ಅಟ್ಯಾಕ್ ಎಂದು ಕರೆಯಲಾಗುತ್ತದೆ. ಹಾಗಾಗಿ ಅಂತರ್ಜಾಲದಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಾಗ ಫೇಕ್ ವೆಬ್‍ಸೈಟ್ ಎಂದು ಖಚಿತ ಪಡಿಸಿಕೊಳ್ಳುವುದನ್ನು ಮರೆಯದಿರಿ.
ಇಂಟರ್‍ನೆಟ್ ಬಳಕೆ ಮಾಡುವಾಗ ಕೆಲವೊಂದು ಮಾರ್ಗಸೂಚಿಗಳು
- ನಿಮ್ಮ ಪಾಸ್‍ವರ್ಡ್‌ಗಳನ್ನು ತಪ್ಪದೇ ಒಂದು ತಿಂಗಳಿಗೊಮ್ಮೆ ಬದಲಾಯಿಸುವುದು
- ನಿಮ್ಮ ಪಾಸ್‍ವರ್ಡ್‌ಗಳಲ್ಲಿ ವಿಶೇಷ ಅಕ್ಷರಗಳನ್ನು ಬಳಸುವುದು
- ಉಚಿತ ಸಾಫ್ಟ್‍ವೇರ್‌ಗಳನ್ನು ಡೌನ್‍ಲೋಡ್ ಮತ್ತು ಇನ್‍ಸ್ಟಾಲ್ ಮಾಡುವುದನ್ನು ನಿಲ್ಲಿಸುವುದು
- ಮಾಹಿತಿ ನೀಡುವ ಮೊದಲು ಫೇಕ್ ವೆಬ್‍ಸೈಟನ್ನು ಖಚಿತಪಡಿಸಿಕೊಳ್ಳುವುದು
- ಉಚಿತ ವೈಫೈ ಸೇವೆಯನ್ನು ಉಪಯೋಗಿಸುವಾಗ ಎಚ್ಚರವಿರಲಿ
- ಯಾವುದೇ ಕಾರಣಕ್ಕೂ ಪಿನ್ ನಂಬರ್‌ಗಳನ್ನು ಷೇರ್ ಮಾಡಬಾರದು
- ಆಂಟಿ ವೈರಸ್ ಸಾಫ್ಟ್‍ವೇರ್‌ಗಳನ್ನು ಬಳಸುವುದು
- ಸಂಸ್ಥೆಗಳಲ್ಲಿ ಫೈರ್‍ವಾಲ್ ಸಾಫ್ಟ್‍ವೇರ್‌ಗಳನ್ನು ಬಳಸುವುದು
ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಂತರ್ಜಾಲ ಹಾಗೂ ತಂತ್ರಜ್ಞಾನದ ಸಾಧನಗಳು ಎಷ್ಟು ಮುಖ್ಯವಾಗಿವೆಯೋ ಅಷ್ಟೇ ಮುಖ್ಯ ನಮ್ಮ ಹಾಗೂ ಸಾಧನಗಳಲ್ಲಿ ಇರುವ ಮಾಹಿತಿ ಮತ್ತು ಅದರ ಭದ್ರತೆ. ಅಂದ ಮಾತ್ರಕ್ಕೆ ಉಪಯೋಗಿಸುವುದನ್ನು ಬಿಡಲು ಅಸಾಧ್ಯದ ಮಾತು. ಆದರೆ ಭದ್ರತೆಗಾಗಿ ಮೇಲೆ ತಿಳಿಸಿರುವ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲೇ ಬೇಕು ಇಲ್ಲವಾದಲ್ಲಿ ಸರಿಪಡಿಸಲಾಗದ ತೊಂದರೆ ಖಚಿತ, ಎಚ್ಚರ.
– ಡಾ. ಮೌನೇಶಚಾರಿ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಗಣಕ ಯಂತ್ರ ವಿಭಾಗ, ಜೈನ್ ತಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆ.