`ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು’

`ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು’

ಅತ್ತು ಅತ್ತು ಸೊರಗಿದ ಕಣ್ಣಿಗೆ ನಗುವೊಂದು ನೀಡಿತು ಭರವಸೆ,
ನೊಂದುಬೆಂದು ಉಳಿದ ಮನಕೆ ಕನಸೊಂದು ಮಾಡಿತು ವಲಸೆ…!

ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯ ಪ್ರಕಾರ ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು 8 ಲಕ್ಷ ಜನ ಹಾಗೂ ಭಾರತದಲ್ಲಿ ಶೇಕಡ 90,000 ಕ್ಕೂ ಹೆಚ್ಚು ಜನ ಪ್ರತಿ 40 ಸೆಕೆಂಡ್‌ಗಳಿಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊ ಳ್ಳುತ್ತಿದ್ದಾರೆ. ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗೆ 25 ಬಾರಿ ಆತ್ಮಹತ್ಯೆ ಆಲೋಚನೆ ಬರು ತ್ತದೆ. ಆತ್ಮಹತ್ಯೆಗೆ ಶರಣಾಗುವವರ ವಯಸ್ಸು 15 ರಿಂದ 29 ವರ್ಷದ ವಯೋಮಾನದವ ರಾಗಿದ್ದಾರೆ. ಮತ್ತು ಸಾವಿನ ಕಾರಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆಯು 15ನೇ ಸ್ಥಾನದಲ್ಲಿದೆ.  ಆದ್ದರಿಂದ ಸಮುದಾಯದಲ್ಲಿ ಪ್ರತಿವರ್ಷವೂ ಸೆಪ್ಟೆಂಬರ್ 10ರಂದು ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಜನಸಾಮಾನ್ಯರಲ್ಲಿ ಆತ್ಮಹತ್ಯೆಗಿರುವ ಕಳಂಕವನ್ನು ಹೋಗಲಾಡಿ ಸಲು ಮನೋವೈದ್ಯಕೀಯ ಶಿಕ್ಷಣದ ಮೂಲಕ ಅರಿವನ್ನು ಮೂಡಿಸುವ ಕಾರ್ಯ ಕ್ರಮನ್ನು ಆಚರಿಸಲಾಗುತ್ತದೆ.  

ಆತ್ಮಹತ್ಯೆ ಎಂದರೆ ವ್ಯಕ್ತಿಯು ತನ್ನನ್ನು ತಾನೇ ಉದ್ದೇಶ ಪೂರ್ವಕವಾಗಿ ಹತ್ಯೆಮಾಡಿ ಕೊಳ್ಳುವುದಾಗಿದೆ. ಆತ್ಮಹತ್ಯೆ ಎನ್ನುವ ಪದ ಖಿನ್ನತೆ ಕಾಯಿಲೆಯ ಲಕ್ಷಣವಾಗಿದ್ದು, ಇದು ಜಗತ್ತಿನಲ್ಲಿ ಶೇಕಡ 15-20 ಜನರನ್ನು ಕಾಡುತ್ತಿರುವ ಈ ಕಾಯಿಲೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುವಲ್ಲಿ ಪ್ರಮುಖವಾದದ್ದು ಮತ್ತು ಆತ್ಮಹತ್ಯೆ ಒಂದು ಸಮಾಜದಲ್ಲಿನ ಪಿಡುಗಾಗಿ ಜಗತ್ತಿನಾದ್ಯಂತ ಸರ್ವವ್ಯಾಪಿಯಾಗಿ, ಸಮಾಜಕ್ಕೆ ಸವಾಲಾಗಿದೆ.

ಆತ್ಮಹತ್ಯೆ ಕಾರಣ :

* ಮಾನಸಿಕ ಕಾಯಿಲೆಗಳಿಂದ
* ಹಠಾತ್ ನಿರ್ಧಾರದಿಂದ
* ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳಿಂದ
* ಕುಟುಂಬದಲ್ಲಿ ಆತ್ಮಹತ್ಯೆ ಇತಿಹಾಸವಿದ್ದರೆ
* ನಕಾರಾತ್ಮಕ ಆಲೋಚನೆಗಳು
* ವ್ಯಕ್ತಿತ್ವ ದೋಷಗಳು
* ಮಾದಕ ಮತ್ತು ಮದ್ಯ ವ್ಯಸನ ಸೇವನೆಯಿಂದ
* ಸಾಮಾಜಿಕ ಸಮಸ್ಯೆ
* ಜೀವನದಲ್ಲಾಗುವ ಒತ್ತಡಕಾರಕಾಂಶಗಳು
* ಮಾನಸಿಕ ದೌರ್ಬಲ್ಯತೆಯಿಂದ
* ತೀವ್ರತರ ದೈಹಿಕ ಕಾಯಿಲೆಗಳಿಂದ
* ಆತ್ಮಹತ್ಯೆ ವರ್ತನೆಗಳಿಂದ.
* ಆತ್ಮಹತ್ಯೆ ಮತ್ತು ಮಾನಸಿಕ ಸಮಸ್ಯೆಗಳು :
* ತೀವ್ರತರ ಖಿನ್ನತೆಯಿಂದ.
* ಚಿತ್ತವಿಕಲತೆ 10 ರಿಂದ 15 ರಷ್ಟು
* ಮದ್ಯಪಾನ ದುರ್ಬಳಕೆಯಿಂದ 5 ರಿಂದ 10 ರಷ್ಟು
* ವ್ಯಕ್ತಿತ್ವ ದೋಷಗಳಿಂದ 5 ರಿಂದ 10 ರಷ್ಟು.

ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳು:

* ಸಾಯುವುದರ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಹಾನಿಕಾರಕ ವಸ್ತುಗಳನ್ನು ಸಂಗ್ರಹಿಸುವುದು.
* ಬದುಕು ನಿಷ್ಪ್ರಯೋಜನ ಎನ್ನಿಸುವುದು ಮತ್ತು ಭವಿಷ್ಯದ ಬಗ್ಗೆ ಭರವಸೆ ಇಲ್ಲದಿರುವುದು.
* ವಿಷಯಗಳನ್ನು ಮುಚ್ಚಿಡುವುದು, ನನ್ನವರು ಯಾರೂ ಇಲ್ಲ ಎಂಬುವ ಭಾವನೆ ಮತ್ತು ಬೇರಯವರಿಗೆ ಹೊರೆಯಾಗುತ್ತೇನೆಂಬ ಭಾವನೆ.
* ಸಾವಿನ ಕುರಿತು ಇತರರೊಂದಿಗೆ ಚರ್ಚೆ ಮತ್ತು ತನ್ನ ಜವಾಬ್ದಾರಿಗಳನ್ನು ಬೇರೆಯವರಿಗೆ ಹಸ್ತಾಂತರಿಸುವುದು.
* ಮಂಕಾಗಿರುವುದು, ಏಕಾಂಗಿತನ, ಕೆಲಸ ಕಾರ್ಯದಲ್ಲಿ ನಿರ್ಲಕ್ಷ್ಯೆ, ಜಡತ್ವ ಮತ್ತು ಮಾದಕ ವಸ್ತುಗಳ ಅತಿಯಾದ ಬಳಕೆ.
* ಸ್ನೇಹಿತನ ಕುಟುಂಬದವರನ್ನು ಕೊನೆಯದಾಗಿ ಭೇಟಿಗೆ ಬಂದಿರುವೆನೆನ್ನುವುದು.
* ಆಕ್ರಮಣ ಶೀಲತೆ ಮತ್ತು ಮುಂಗೋಪಿತನ.

ಆತ್ಮಹತ್ಯೆ ತಡೆಗಟ್ಟುವ ವಿಧಾನಗಳು:
* ಪ್ರಾರಂಭಿಕ ಹಂತದಲ್ಲಿ ಗುರುತಿಸುವುದು
* ಆತ್ಮಹತ್ಯೆ ಪ್ರಯತ್ನ ಮಾಡುವಂತಹ ವ್ಯಕ್ತಿಯ ಜೊತೆ ಸಂಪರ್ಕ,
*  ಮಾದಕ ಮತ್ತು ಮದ್ಯ ವ್ಯಸನದಿಂದ ದೂರವಿರುವಂತೆ ತಿಳಿ ಹೇಳುವುದು
* ಕುಟುಂಬದವರು ವ್ಯಕ್ತಿಯೊಡನೆ ಉತ್ತಮ ಸಂವಹನದಿಂದ ಬೆಂಬಲಿಸುವುದು.
* ಸಾಮಾಜಿಕ ಬೆಂಬಲ ಸಿಗುವಂತೆ ಮಾಡುವುದು.
* ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ತಿಳಿ ಹೇಳುವುದು.
* ವ್ಯಕ್ತಿಯನ್ನು ಸರಿಯಾದ ದಾರಿಯಲ್ಲಿ, ಸಮಾಜಕ್ಕೆ ತಕ್ಕಂತೆ ಅನುಸರಿಸುವುದು ಅಥವಾ ಮುನ್ನಡೆಸಬೇಕು.
* ದೈನಂದಿನ ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳ ಅಭ್ಯಾಸ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದು.
* ಮನರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು.
* ಸೂಕ್ತವಾದ ಮನೋವೈದ್ಯಕೀಯ ಗಮನ ಮತ್ತು ಚಿಕಿತ್ಸೆಗೆ ಪ್ರೇರೇಪಿಸುವುದು.

ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸಿಗುವಂತಹ ಸೌಲಭ್ಯಗಳು:

* ಗುಣಮಟ್ಟದ ಔಷಧಿ ಚಿಕಿತ್ಸೆ
* ಆಪ್ತ ಸಮಾಲೋಚನೆ ಮತ್ತು ಸಲಹೆ
* ಮನೋವೈದ್ಯಕೀಯ ಶಿಕ್ಷಣ
* ಮನೆ ಭೇಟಿ ಕಾರ್ಯಕ್ರಮ
* ಮಾನಸಧಾರ ಹಗಲು ಆರೈಕೆ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಶಿಕ್ಷಣ ಮತ್ತು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಒದಗಿಸುವುದು.


ಡಾ. ಮಂಜುನಾಥ ಎಲ್. ಪಾಟೀಲ್
ಆರೋಗ್ಯ ಇಲಾಖೆ ದಾವಣಗೆರೆ.

error: Content is protected !!