ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಲಾ-ವಿಜ್ಞಾನ ಪ್ರದರ್ಶನ

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಲಾ-ವಿಜ್ಞಾನ ಪ್ರದರ್ಶನ

ದಾವಣಗೆರೆ, ಮಾ.8- ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಾರ್ಷಿಕ ಕಲಾ ಮತ್ತು ವಿಜ್ಞಾನ ಮಾದರಿ ಪ್ರದರ್ಶನ  ಆಯೋಜಿಸಲಾಗಿತ್ತು,

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ    ಡಾ. ಎಂ.ಜಿ  ಬಸವನಗೌಡ ಮಾತನಾಡುತ್ತಾ, ರಾಷ್ಟ್ರೋತ್ಥಾನ ಶಾಲೆಯು ಮಕ್ಕಳಲ್ಲಿ ವಿದ್ಯಾರ್ಜನೆಯ ಜೊತೆ ಜೊತೆಗೆ ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹಾಗೆಯೇ ಮಕ್ಕಳು ಶಾಲಾ ಕಲಿಕಾ ಮಟ್ಟದಲ್ಲಿಯೇ ವಿಜ್ಞಾನದ ಸಂಶೋಧನೆಯನ್ನು ಮನದಟ್ಟು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ ಎಂದರು.    ಕೇಂದ್ರದ ಸಸ್ಯ ಸಂರಕ್ಷಣಾ ವಿಭಾಗದ ವಿಷಯ ತಜ್ಞ ಡಾ.  ಟಿ ಜಿ  ಅವಿನಾಶ್ ಮಾತನಾಡಿ ಶಿಸ್ತು, ಮೌಲ್ಯಯುತ ಶಿಕ್ಷಣ ಜೀವನದಲ್ಲಿ ಎಷ್ಟು ಸಹಕಾರಿಯಾಗುವುದು ಎಂಬುದರ ಬಗ್ಗೆ ವಿವರಿಸಿದರು.    

ಗುಜರಾತ್ ರಾಜ್ಯದ ಅಹಮದಾಬಾದ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾದ ಕು.ಅನಘ ಮತ್ತು ಆರ್. ಪ್ರಸಾದ್ ಪೂಜಾರ್  ಅವರುಗಳು  ರಾಷ್ಟ್ರಮಟ್ಟದಲ್ಲಿ ಮಂಡಿಸಿ ದ ಪ್ರಬಂಧವನ್ನು ವೇದಿಕೆಯಲ್ಲಿ ಮಂಡಿಸಿದರು.

ವವೇದಿಕೆಯಲ್ಲಿ ‘ಚಿನ್ನರ ಬಣ್ಣ’ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಹಾಗೆಯೇ ಒಂದನೇ ತರಗತಿಯ ಮಕ್ಕಳು ದೇಶದ ವಿಜ್ಞಾನಿಗಳ ಸಾಧನೆಯನ್ನು ಸ್ಮರಿಸುತ್ತಾ ನೃತ್ಯವನ್ನು ಮಾಡು ವುದರ ಮೂಲಕ ಗೌರವ ಸಲ್ಲಿಸಿದರು.  ಸಂಸ್ಥೆಯ ಕಾರ್ಯದರ್ಶಿ ಜಯಣ್ಣ,  ಪ್ರಾಂಶುಪಾಲ ಮಂಜುನಾಥ, ಶೈಕ್ಷಣಿಕ ಸಂಯೋ ಜಕ ಶಿವರಾಜ ಮತ್ತಿತರರು ಉಪಸ್ಥಿತರಿದ್ದರು.

error: Content is protected !!