ಜಿಗಳಿ : ಸಂಭ್ರಮದ ಹೋಳಿ ದೇವರ ಉತ್ಸವ

ಜಿಗಳಿ : ಸಂಭ್ರಮದ ಹೋಳಿ ದೇವರ ಉತ್ಸವ

ಮಲೇಬೆನ್ನೂರು, ಮಾ. 7 – ಜಿಗಳಿಯ ಶ್ರೀ ರಂಗನಾಥಸ್ವಾಮಿ ರಥೋತ್ಸವದ ಅಂಗ ವಾಗಿ ಮಂಗಳವಾರ ಸಂಜೆ ಶ್ರೀ ರಂಗನಾಥ ಸ್ವಾಮಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಜಿ.ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ಭೂತನ ಸೇವೆ ಶ್ರದ್ಧಾ-ಭಕ್ತೆಯಿಂದ ನೆರವೇರಿತು. ನಂತರ ಗ್ರಾಮದ ರಾಜ ಬೀದಿಗಳಲ್ಲಿ ದೇವರುಗಳ ಉತ್ಸವ ನಡೆಯಿತು.

ಸಂಭ್ರಮದ ಹೊಳಿ : ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಬೆಳಿಗ್ಗೆ ಯು ವಕರು ಪರಸ್ಪರ ಬಣ್ಣ ಎರಚಿ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ನಂತರ ವಾಲ್ಮೀಕಿ ವೃತ್ತದಲ್ಲಿ ಕಾಮನ ದಹನ ಮಾಡಲಾಯಿತು.

error: Content is protected !!