ಅವಳಿ ನಗರದಲ್ಲಿನ 15 ಜನ ಭಿಕ್ಷುಕರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ

ಅವಳಿ ನಗರದಲ್ಲಿನ 15 ಜನ ಭಿಕ್ಷುಕರು  ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ

ದಾವಣಗೆರೆ, ಜೂ.10-   ದಾವಣಗೆರೆ ಮತ್ತು ಹರಿಹರದ ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ, ದೇವಸ್ಥಾನ, ಮಸೀದಿ, ಮಾರುಕಟ್ಟೆ ಮತ್ತಿತರೆ ಕಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ 15 ಜನರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ಅವರ ಮಾರ್ಗದರ್ಶನದಲ್ಲಿ  ಶನಿವಾರ ರಾತ್ರಿ ನಿರಾಶ್ರಿತರ ಪರಿಹಾರ  ಕೇಂದ್ರದ  ನಿರ್ದೇಶಕ ಕೆ.ಆರ್‌.ಕಾಶಿನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಭಿಕ್ಷುಕರನ್ನು ವಶಕ್ಕೆ ಪಡೆಯಲಾಯಿತು.

ಕಾಶಿನಾಥ್ ಮಾತನಾಡಿ, 15 ಜನ ನಿರಾಶ್ರಿತರನ್ನು ವಶಕ್ಕೆ ಪಡೆದು, ಅವರೆಲ್ಲರ ಆರೋಗ್ಯ ತಪಾಸಣೆ ಮಾಡಿಸಿ, ನಿರಾಶ್ರಿತ ಕೇಂದ್ರದಲ್ಲಿರಿಸಲಾಗುವುದು. ಊಟ, ಉಪಹಾರ ನೀಡಿ, ಮಾನಸಿಕ ಧೈರ್ಯ ತುಂಬಿ, ಶುಚಿತ್ವ, ಆರೋಗ್ಯಯುತ ಜೀವನ ನಡೆಸಲು ಸಹಕರಿಸಲಾಗುವುದು. ಅಲ್ಲದೇ ಅವರಿಗೆ ವೃತ್ತಿ ಆಧಾರಿತ ತರಬೇತಿ ನೀಡುವ ಮೂಲಕ  ಭಿಕ್ಷಾಟನೆ ರಹಿತ ನಗರ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಹನುಮಂತ, ನವೀನಕುಮಾರ್, ಮಂಜುನಾಥ, ಹೇಮಂತ್, ಸುನೀಲ್ ಮತ್ತು ಸಿದ್ದಪ್ಪ ಹಾಜರಿದ್ದರು.

error: Content is protected !!